ವೈಶಾಖ ಹುಣ್ಣಿಮೆ ರಾತ್ರಿ
ಶಾಲಿನಿ ಆರ್.
ಮನುಕುಲದ ಭಾಗ್ಯ
ನಮ್ಮ ಸರ್ವಾಥ ಸಿದ್ಧ/
ಲೋಕದ ಜನರ ದುಃಖ
ನಿವಾರಿಸಲರಿತು ಎದ್ದ//
ವೈಶಾಖ ಹುಣ್ಣಿಮೆಯ ರಾತ್ರಿ
ಹಳೆನೆನಪುಗಳ ಕಳಚಿತು/
ದಿವ್ಯಚಕ್ಷುವಿನಿಂದಾದ ಯೋಗ
ಜ್ಞಾನಜ್ಯೋತಿ ಬೆಳಗಿತು//
ದೇದೀಪ್ಯಮಾನ ಬೆಳಗದು
ಮನುಕುಲದ ತಮವ ಕಳಚಿತು/
ಧ್ಯಾನದೊಳಿದ್ದರು ಎಚ್ಚರವಾಗಿರುವ ಮನದ ನೇತ್ರ ಅರಳಿತು//
ಬಿಂದುವೊಂದು ಸಿಂಧುವಾದ
ಆನಂದದಾ ಮೊಗ/
ಅನಿರ್ವಚನೀಯ ಕಲ್ಮಷರಹಿತ
ಪರಮಾನಂದದಾ ಯೋಗ//
ಮಾನವ ಕುಲ ಒಂದು
ಆಸೆಯೇ ದುಃಖಕ್ಕೆ ಕಾರಣ ಎಂದ/
ಸಮ್ಯಕ್ ಬೋಧಿ’ ಸಿದ
ಅಷ್ಟಾಂಗ ಮಾರ್ಗ ಅರುಹಿದ//
ಬಹುಜನ ಹಿತಾಯ
ಬಹುಜನ ಸುಖಾಯ ಬೋಧಿಸಿದ /
ಮರಣ ಜನನದ ಅನಿವಾರ್ಯವೆಂದು
ನಿರ್ವಣದ ದಾರಿ ತೋರಿಸಿದ//
ಜಗದ ಅಮರಜ್ಯೋತಿಯಾಗಿ
ಅಮೃತಧಾರೆ ಹರಿಸಿದ/
ಧನ್ಯನಾದ ಗುರು
ನಮ್ಮ ಸರ್ವಾಥಸಿದ್ಧ ಬುದ್ಧನಾದ//
******