ಕಾವ್ಯ ಸಂಗಾತಿ
ಶ್ರೀಕಾಂತಯ್ಯ ಮಠ
ಆರಿದ ಮನಸ್ಸಿನ ಬೆಳಕು
ಬಾಯಿಯೊಳಗೆ ಬಂತು ಸುಳ್ಳಿನ ಮಾತು
ಹೃದಯದಿಂದ ಬರಲಿಲ್ಲ ಸತ್ಯದ ಮಾತು
ಆಡುವ ನುಡಿಗೆ ಕೊನೆಯಿರಲಿಲ್ಲ
ಆಡದ ಮಾತಿನ ಸತ್ಯ ಯಾರೂ ಹೊರಲಿಲ್ಲ
ಆರೋಪದ ಮನೆ ಗದ್ದಲವಿತ್ತು
ಕಾರಣವಿಲ್ಲದ ನೆಪ ಜೋರು ಸದ್ದು ಮಾಡಿತ್ತು
ನಮ್ಮವರೆಂಬ ಬಂಧ ಕಾಣಲೆಯಿಲ್ಲ
ನಾನು ಎನ್ನುವ ಗರ್ವ ಪರ್ವತವಾಗಿತ್ತಲ್ಲ
ಸೋಲುವ ದಾರಿ ಎಲ್ಲರಿಗೂ ಎದುರಾಗಿ ಬರುವುದಿಲ್ಲಿ
ಗೆಲ್ಲುವ ದಾರಿ ಕೆಲವೊಬ್ಬರಿಗೆ ಸಿಗುವುದಿಲ್ಲಿ
ಮನಸ್ತಾಪದಲ್ಲಿ ಮನಸ್ಸಿನ ಪರಿಸ್ಥಿತಿ ಸುಧಾರಿಸಲಿಲ್ಲ
ಹಠಮಾರಿಯಲ್ಲಿ ನಿಜ ಸ್ಥಿತಿ ಯಾರೂ ತಿಳಿಯಲಿಲ್ಲ
ಕೊನೆ ಘಳಿಗೆ ಮನೆಯಲ್ಲಿ ಶಾಂತಿ ದೀಪ ಹಚ್ಚಲಿಲ್ಲ
ಅಂತಿಮ ತೀರ್ಪಿನಲ್ಲಿ ನ್ಯಾಯ ಬೆಳಕು ನಮಗಿಲ್ಲ
ಶ್ರೀಕಾಂತಯ್ಯ ಮಠ