ಸುಲೋಚನಾ ಮಾಲಿಪಾಟೀಲ ಕವಿತೆ-ಇರುಳದು ಕಳೆದು ಹಗಲು ಮೂಡಲಿ

ಕಾವ್ಯ ಸಂಗಾತಿ

ಸುಲೋಚನಾ ಮಾಲಿಪಾಟೀಲ

ಇರುಳದು ಕಳೆದು ಹಗಲು ಮೂಡಲಿ

ಸೂರ್ಯನ ಉದಯಾಸ್ತಮವೇ
ಜಗದ ಚಲನೆಯ ಉಸಿರು
ಗತಿಸುವ ಕ್ಷಣಗಣನೆಗೆ ಅದುವೇ
ಚೈತನ್ಯದ ಶಕ್ತಿಯ ತೇರು

ಅರಳಿಹವು ಬದುಕು ಜಲಜದಂತೆ
ಜಂಬಾಲದಲ್ಲಿ ನೆಗೆದು ನಗುವಂತೆ
ಸೂಸುವ ಸೌಗಂಧಕೆ ಸೆಳೆದಿಡುತ
ಕಲಿಸಿತು ಜೀವನ ಕ್ರಮವಿದುವಂತೆ

ಇರುಳದು ಕಳೆದು ಹಗಲು ಮೂಡಲಿ
ಕವಿದ ಮೋಡ ಮರೆಯಾಗಿ
ಬೆಳಕು ಹರಡಿತು ಮನದ ಮೂಲೆಯಲಿ
ಹೊಸದೊಂದು ಪಧದ ಹೆಜ್ಜೆಗೆ ಸಜ್ಜಾಗಿ

ಕದಡಿ ನಡಗಿಸುವ ಭಯ ಜೀವಕೆ
ಹೊಂಬೆಳಕಿನ ಅಭಯ ಸನಿಹವಿರಲು
ಎದುರಿಸಲು ಸಾಗಿಹೆ ಎದೆಗುಂದದೆ
ನೆಮ್ಮದಿಯ ತಾಣ ಸಿಗುವ ಭರವಸೆಯಲ್ಲು

ಸಾಕ್ಷಿಯಾಗಿಹೆ ಹಗಲಿರುಳಿನ ಜೀವನಕೆ
ಸಹಿಸುವ ಸುಖದುಃಖಗಳ ಚಾಮರವು
ಸ್ಥಿರವಿರದೆ ನಶ್ವರವಾಗುವ ಪ್ರಪಂಚಕೆ
ನಶಿಸಿ ಹೋಗುವ ಆಶಾಗೋಪುರಗಳಿವು


ಸುಲೋಚನಾ ಮಾಲಿಪಾಟೀಲ

Leave a Reply

Back To Top