ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸುಧಾ ಪಾಟೀಲ್

ಒಲವೆಂಬ ಬಳ್ಳಿ

ಒಲವೆಂಬ ಬಳ್ಳಿ
ಸುತ್ತುತಿವುದು
ಎಲ್ಲೆಲ್ಲೂ
ಅವರಿವರೆನ್ನದೆ
ಒಲವಿನ ಧಾರೆ
ಹರಸುತಿವುದು
ಸಮಸ್ತ ಜೀವಿಗಳಲ್ಲಿ
ಹಸಿರಿನ ಸಿಂಚನದಲಿ
ಪ್ರಾಣಿ-ಪಕ್ಷಿಗಳ
ಒಡನಾಟದಲಿ
ತರುಲತೆಗಳ ಮಧ್ಯದಲಿ
ಹೆಂಗರುಳ ಪ್ರೀತಿ
ಮಿಡಿಯುತಿದೆ
ಅನುಜರಲಿ
ಸಹೋದರಿಯರಲಿ
ಹಿರಿಯ ಜೀವಿಗಳ
ಕಾಳಜಿಯಲಿ
ಸಮಸ್ತ ಬ್ರಹ್ಮಾಂಡದಲಿ
ಅನವರತ
ಬೆಳಕು ಚೆಲ್ಲುತಿದೆ
ದೇವನ ಛಾಯೆಯಲಿ
ದೇವದೂತನ
ಅವತಾರದಲಿ
ಬೆಳಗುತಿದೆ ತನ್ನ
ವರ್ಚಸ್ಸನು
ಅನುದಿನ ಒಂದಿನಿತೂ
ಬೇಸರಿಸದೆ
ಹುರುಪು ಉತ್ಸಾಹದಿಂದ
ಎಲ್ಲರೊಡಗೂಡಿ
ರಭಸದಲಿ ಮುನ್ನುಡಿ
ಬರೆಯುತ್ತಿದೆ
ಬಸವನ ನಾಡಿನ
ಸಮಸ್ತ ಜನರ
ಒಳಿತಿಗಾಗಿ


ಸುಧಾ ಪಾಟೀಲ್

About The Author

Leave a Reply

You cannot copy content of this page