ಪೂರ್ಣಿಮಾಅಜ್ಜಾವರ ಕವಿತೆ-ನೇಗಿಲಯೋಗಿ

ಕಾವ್ಯ ಸಂಗಾತಿ

ಪೂರ್ಣಿಮಾ ಅಜ್ಜಾವರ

ನೇಗಿಲಯೋಗಿ

ದೇಶದ ಬೆನ್ನೆಲುಬಾಗಿ ಮಾಸದ ನೆನಪಾಗಿ ನಿಂತಿಹನು ಹೃದಯದೊಳೆಲ್ಲರ ಇವನೇ ಅನ್ನದಾತ!
ನಿತ್ಯ ಹೊಲದೊಳು ದುಡಿಯುತ ಪೊರೆಯುವನಿವನು ಭಾರತಾಂಬೆಯ ಸಂಜಾತ!

ದುಡಿಯುತಿಹನು ತನ್ನ ಸ್ವಾರ್ಥವ ಬಯಸದೆ!
ಹಗಲು ಬೆವರಿಳಿಸಿ ಇರುಳು ನಿದ್ದೆಯ ಸರಿಸಿ
ಪರರ ಒಳಿತಿಗೆ ತನ್ನ ಜೀವನ ಸವೆಸಿ!

ಕೆಲವೊಮ್ಮೆ ನಿಟ್ಟುಸಿರು ಮಳೆಯ ನಿರೀಕ್ಷೆಯಲ್ಲಿ

ಮಗದೊಮ್ಮೆ ಕಣ್ಣೀರು ಬೆಳೆಯ ಬರದಲ್ಲಿ!
ಪರರಿಗುಪಕಾರಿಯಾಗಿ ಬಾಳುವನೀತ ನೇಗಿಲಯೋಗಿ!!


ಪೂರ್ಣಿಮಾ ಅಜ್ಜಾವರ

Leave a Reply

Back To Top