ಎ ಎಸ್. ಮಕಾನದಾರ ಹಾಯ್ಕು ಗಳು

ಕಾವ್ಯ ಸಂಗಾತಿ

ಎ ಎಸ್. ಮಕಾನದಾರ

ಹಾಯ್ಕು ಗಳು

ವಿರಹ /ಸಾವು
ಕಾಡುತ್ತಲೇ ಇರುತ್ತೆ
ಜೀವ ಪರ್ಯಂತ
*
ಹೆದರೊದಿಲ್ಲ
ಬದುಕಲು /ಸಾವಿಗೂ
ಬದುಕು ಪಾಠ
*
ನನ್ನ ತೊಗಲು
ಕಾಲಿನ ಮೆಟ್ಟಾಗ್ಲಿಲ್ಲ
ಮೆಟ್ಟಿಲೂ ಕೂಡ


*
ಕುಡುಕಿಯೊಳ
ಹುಟ್ಟಿದ ತಿರಬೋಕಿ
ಆಗ್ಬೇಕು ಜ್ವಾಕಿ
*
ಡಿಂಬದೊಳಗೆ
ಗೊಂಬಿಯನು ಕೂಡಿಸಿ
ಕುಂಬ ಸೂತ್ರವ
*
ಜಿಸ್ಮ್ ಆಗಿದೆ
ಸುಟ್ಟ ಸುಣ್ಣದ ಕಲ್ಲು
ಉಜಾಲಾಗಲಿ
*
ವಿಧವೆಗಿದ್ದ
ಯೌವನ /ನಾಯಿ ಮೊಲೆ
ಏತಕೂಬಾರ್ದು
*
ಭ್ರಾ0ತಿಯ ಬೇರು
ಅಗೆದು ಬಿಡು ತಮ್ಮ
ಮೂಡೈತೆ ಕಾಂತಿ
*
ಅಂಬಿಗ ತಾನೆ
ಹರಿಗೋಲಿಗೆ ರಂಧ್ರ
ಕೊರೆದ್ರೆ ಗತಿ?


ಎ ಎಸ್. ಮಕಾನದಾರ

Leave a Reply

Back To Top