ಕಾವ್ಯಸಂಗಾತಿ
ಬಾಗೇಪಲ್ಲಿ
ಗಜಲ್
ಬಿಂಕದಲೆಂದೂ ಬೀಗದಿರೆ ಬಿನ್ನಾಣಗಿತ್ತಿ
ಅಂದವನೆಂದೂ ಹಂಚದಿರೆ ಪಾತರಗಿತ್ತಿ
ಕಮಲಾ ನಿನ್ನ ಮೂಲ ನೆಲೆ ಕೆಸರು ತಿಳಿ
ಆಗುವಳೆ ಮಲ್ಲಿಗೆ ತರದಿರೆ ಹೂವಾಡಗಿತ್ತಿ
ದೇವಿತೇರದು ತಲೆಯು ಮೇಲೆ ಹೂ ಬುಟ್ಟಿ
ಮುಂದಿನಿಂದ ನೋಡದಿರೆ ಮದುವಣಗಿತ್ತಿ
ಆಕಾಶ ಮಲ್ಲಿಗೆ ಪರಿಮಳವೂ ಸುಸ್ವಾದ
ಇದು ಮಲ್ಲಿಗೆ ಪೊದರು ಇಲ್ಲದಿರೆ ವಾರಗಿತ್ತಿ
ಕೃಷ್ಣಾ! ಗರತಿ ರಾಧೆಯ ನೀ ಪ್ರೀತಿಸಿದೆ
ತಪ್ಪಿಲ್ಲ ಆಕೆಯನು ಅನ್ನದಿರೆ ಹಾದರಗಿತ್ತಿ
ಬಾಗೇಪಲ್ಲಿ
ಸುಂದರ ಬರಹ