ಕಾವ್ಯ ಸಂಗಾತಿ
ಸುರೇಶ ತಂಗೋಡ
ಮೊಬೈಲೆಂಬ ಮಾಯಾವಿ
ಅರೆಕ್ಷಣವು ಬಿಟ್ಟಿರದಂತೆ
ಹಗಲಿರುಳು ಜಪಿಸುವಂತೆ
ಬದುಕಿನ ಅವಿಭಾಜ್ಯ ಅಂಗವಾಗಿರುವೆ.
ಇರುಳಿನಲ್ಲಿ ಕನವರಿಕೆಯಾಗಿ
ಮಡದಿ ಸ್ಥಾನವನ್ನಲಂಕರಿಸಿ
ಪರರಸಂಗವ ಬೆಳೆಸದಂತೆ ಮಾಡಿರುವೆ.
ಓದುವಿಕೆಯ ಹತ್ಯೆಗೈದು
ಹವ್ಯಾಸಗಳ ಸಮಾಧಿಯ ಮೇಲೆ
ನಿನ್ನ ಸಿಂಹಾಸನವು ರಾರಾಜಿಸುತ್ತಿದೆ.
ಮೌನವಾಗಿದೆ ಬದುಕು
ನಿನ್ನ ಅಟ್ಟಹಾಸದ ಮುಂದೆ
ಮನುಜನೀಗ ಅಸಹಾಯಕ.
ಉಪ್ಪಿನಂತೆ ನಿನ್ನು ಹೆಚ್ಚು ಬಳಸಬಾರದು
ಬಳಸದೇ ಇರಬಾರದು
ಮೊಬೈಲ್ ನೀನೊಂದು ಮಾಯವಿ.
ಸುರೇಶ ತಂಗೋಡ