ರತ್ನರಾಯಮಲ್ಲ – ಗಜಲ್

ಕಾವ್ಯ ಸಂಗಾತಿ

ರತ್ನರಾಯಮಲ್ಲ

ಗಜಲ್

ಬಾಳ ಸಮಸ್ಯೆಗಳಿಗೆ ಗೋಡೆಯಾಗಿ ನಿಲ್ಲುವೆ ನಿನ್ನ ತಂದೆಯಾಗಿ ನಾನು
ಮಮತೆಯ ವಾತ್ಸಲ್ಯವ ಧಾರೆ ಎರೆಯುವೆ ನಿನ್ನ ತಾಯಿಯಾಗಿ ನಾನು

ಭಾವಗಳ ಏರಿಳಿತದ ಕೀಲಿಕೈ ಸಮಯದ ಸಂದೂಕಿನಲ್ಲಿದೆ ಬೆದರಿದರು
ಮನದ ಪಲ್ಲಟಗಳನು ಅರಿತು ಜೊತೆಗಿರುವೆ ನಿನ್ನ ಸಖಿಯಾಗಿ ನಾನು

ಪ್ರೇಮಲೋಕದ ಅಮಲು ಇಳಿಯದಂತೆ ಒಲವಿನೂಟವ ಉಣಿಸುವೆ
ಅನುದಿನವು ಅಧರದ ಮದಿರೆ ಕುಡಿಸುವೆ ನಿನ್ನ ಪ್ರೇಮಿಯಾಗಿ ನಾನು

ಭಗವಂತನಾಗಿ ಹತ್ತಾರು ಭಾಗ್ಯಗಳಿಂದ ನಿನ್ನ ಉಡಿಯನ್ನು ತುಂಬುವೆ
ಜನುಮ ಜನ್ಮದಲ್ಲೂ ಭಾವದೀಪ್ತಿ ಸುರಿಸುವೆ ನಿನ್ನ ಪತಿಯಾಗಿ ನಾನು

ಉದ್ಯಾನದಲಿ ಕೈ ಕೈ ಹಿಡಿದು ವಿಹರಿಸಲು ಮಲ್ಲಿಗೆ ಸುಮವಿದ್ದರೆ ಚೆಂದ
ತಾಯ್ತನದ ಸವಿ ಅಮೃತವ ಅನುಭವಿಸುವೆ ನಿನ್ನ ಕುಡಿಯಾಗಿ ನಾನು


ರತ್ನರಾಯಮಲ್ಲ

2 thoughts on “ರತ್ನರಾಯಮಲ್ಲ – ಗಜಲ್

Leave a Reply

Back To Top