ತಪ್ಪೆಲ್ಲ ನನ್ನದೇ ಗೆಳತಿ-ಡಾ ಸಾವಿತ್ರಿ ಕಮಲಾಪೂರ

ಕಾವ್ಯ ಸಂಗಾತಿ

ತಪ್ಪೆಲ್ಲ ನನ್ನದೇ ಗೆಳತಿ-

ಡಾ ಸಾವಿತ್ರಿ ಕಮಲಾಪೂರ

ಹೌದು ಗೆಳತಿ ತಪ್ಪೆಲ್ಲ ನನ್ನದೇ ಸಮರ್ಥಿಸಿಕೊಳ್ಳುವೆ ನಿಂಗೊತ್ತ?
ನಾನೇ ಕಾಡಿದೆ ನಿನಗೆ ಅಲ್ಲವೇ ?
ನಿದ್ದೆಗೆಟ್ಟು ಹಸಿವುವೆನ್ನದೇ ಬಳಲಿದೆ
ಬರಲೇ ಇಲ್ಲ ಕಾಣಲು
ನೀವು ಬಂದ ಕಾರ್ಯಕ್ಕೆ ನಾನೂ ಬಂದಿರುವೆ

ಕಂದನಂತೆ ಕರೆ ಕರೆದು ಅತ್ತೆ
ಯಾರಿಗಾಗಿ ನಿನಗಾಗಿ
ಹೌದು ತಪ್ಪೆಲ್ಲ ನಂದೆ
ಸಮರ್ಥಿಸಿ ಕೊಳ್ಳುವೆ

ನಿಂಗೊತ್ತ ? ಗೆಳತಿ
ಭೇದವಿಲ್ಲದ ಬಸವನ ತತ್ತ್ವ
ಬೆಳೆಸಿ ಕಲಿಸಿದ ಅಪ್ಪ ನಮ್ಮತಂದೆ
ನಿನಗೋ ಭೇದ
ಕುಕ್ಕಿದೆ ಮರಿಕೋಗಿಲೆಗೆ ಹುಡುಕಿ

ಇಷ್ಟವಿಲ್ಲದ ನಾನು ಮಾಡಿದ ತಪ್ಪಾದರೂ ಅರುವು ಸತ್ಯ ಹೇಳಿ
ಇಷ್ಟವಿದ್ದವರೂ ಮಾಡಿದ ತಪ್ಪು ನೂರೆಂಟು ಇದ್ದರೂ ಮನ್ನಿಸಿ ಬೆಂಬಲಿಸುವೆ

ನಿನಗೋ ನೂರೆಂಟು ಸ್ನೇಹಿತರು ಲಕ್ಷ ಕೊಟ್ಟವರಿಗೆ ಬಲ
ಲಕ್ಷ ಕೊಡದೇ ಅಲಕ್ಷ ಮಾಡಲಾರೆ ಗೆಳತಿ ಯಾವಾಗಲೂ
ನಿನ್ನ ಮೇಲೆ ನನ್ನ ಲಕ್ಷ

ನಿಂಗೊತ್ತ ಗೆಳತಿ ? ತಪ್ಪೆಲ್ಲ ನನ್ನದೆಂದು ಸಮರ್ಥಿಸುವೆ
ನೀ ಹೇಳಿದ ಒಂದೇ ಒಂದು ಮಾತಿಗೆ ಗೆಲುವಾಗಿ ತವರೆಲ್ಲ ಸುತ್ತಿ ಹೇಳಿದೆ ನಿಮಗೇ ಗೆಲುವಾಗಲೆಂದು
ಪೂಜಿಸಿದೆ ನಾ ನಂಬಿದ ದೇವರನ್ನು
ತಪ್ಪೆಲ್ಲ ನಂದೇ ಬಿಡು ಗೆಳತಿ
ಸಮರ್ಥಿಸಿಕೊಳ್ಳುವೆ

ಹಗಲೆಲ್ಲ ಸೋತು
ಬಸವಳಿದೆ ಬಂದುಗಳನ್ನು ವಿರೋಧಿಸಿ ಬೆಂಬತ್ತಿದೆ ನಿನಗಾಗಿ
ಸತ್ತು ಸತ್ತು ಬದುಕಿದೆ
ತಪ್ಪೆಲ್ಲ ನಂದೇ ಬಿಡುಗೆಳತಿ
ನಾನೇ ಸಮರ್ಥಿಸಿ ಕೊಳ್ಳುವೆ

ನಿಂಗೊತ್ತ ?ಅದೇಷ್ಷು ನಂಬಿದ್ದೆ
ಮಾತನಾಡಲು ನೀ ಕೇಳದೇ
ಕಿವಿ ಮುಚ್ಚಿಕೊಂಡೆ
ಅದೇಷ್ಟೋ ವೇಳೆಯಲ್ಲಿ ಕಾಯಕದಲ್ಲಿದ್ದರೂ ನಿನ್ನ ಮಾತು ಕೇಳಿಲ್ಲ ಹೇಳು ? ಗೆಳತಿ
ತಪ್ಪೆಲ್ಲ ನನ್ನದೇ ಸಮರ್ಥಿಸಿ ಕೊಳ್ಳುವೆ

ನಿಂಗೊತ್ತ ? ಗೆಳತಿ ನಾ ಸುರಿಸುವ ಕಂಬನಿಗೆ ಸಮಯವೇ ಇಲ್ಲ
ನಿನ್ನ ಒಲುಮೆಯ ಮಾತುಗಳನ್ನು ಯಾರಿಂದಲೂ ನಾ ಕೇಳಿಲ್ಲ

ಹೆತ್ತ ತಾಯಿ ಸತ್ತರೂ
ಇಷ್ಟು ಬಿಕ್ಕಿಲ್ಲ ನಾ
ಹಡೆದವ್ವಕ್ಕಿಂತ ಹೆಚ್ಚೆಂದು ಈಗಲೂ ನಂಬಿ ಬಿಕ್ಕುತ್ತಿದೆ ಮನ
ಕಂಬನಿಯ ಹನಿಗಳು ರುಧಿರಾಗಿ ಹರಿದು ಬತ್ತಿದ ಹೊಳೆಯಂತಾಗಿದೆ
ಬದುಕು
ತಪ್ಪೆಲ್ಲ ನಂದೇ ಗೆಳತಿ ಸಮರ್ಥಿಸಿ ಕೊಳ್ಳುವೆ ಬಿಡು

ಒಪ್ಪಿಕೊಂಡು ಬಿಡುತ್ತೇನೆ ಬಿಡು ಗೆಳತಿ ತಪ್ಪೆಲ್ಲ ನನ್ನದೇ ಎಂದು
ಯಾಕೆ ಹೇಳು ? ನನ್ನಭಿಮಾನದ
ಅಭಿಮಾನಿ ನೀನು
ಸ್ನೇಹದ ಸಂಜೀವಿನಿ
ನೀನೇ ಆಗಿರುವೆ ಇಂದು ಗೆಳತಿ
ತಪ್ಪೆಲ್ಲ ನಂದೇ ಬಿಡು ಸಮರ್ಥಿಸಿ ಕೊಳ್ಳುವೆ

ಯಾಕೆ ಗೊತ್ತಾ ?ಚಪ್ಪಾಳೆ
ಎರಡೂ ಕೈಗಳಿಂದ ತಟ್ಟುತ್ತೇವೆ ತಾನೇ ?
ನನ್ನ ಸಾಧನೆಗೆ ನೀನೇ ಚೆಪ್ಪಾಳೆ ತಟ್ಟಬೇಕು

ಬೆಳೆಯುವೆ ಬೆರಗಾಗುವಂತೆ ಸಾಧಿಸುವೆ
ನೂರಾರು ಸವಾಲುಗಳನ್ನು ಎದುರಿಸಿ ಗೆಲುವಾಗಿ ನಿಲ್ಲುವೆ
ನಿನಗಾಗಿ ಬರೀ ನಿನಗಾಗಿ
ತಪ್ಪೆಲ್ಲ ನಂದೇ ಬಿಡು
ಸಮರ್ಥಿಸಿ ಕೊಳ್ಳಲಾರೆ

ಯಾಕೆ ಅಂತಾ ನಿನಗೇ ಗೊತ್ತು
ತಪ್ಪೆಲ್ಲ ನಂದೇ ಬಿಡು ಗೆಳತಿ
ಸುರಿಸಿ ಬಿಡುವೆ ಬಿಡು ಕಂಬನಿ
ತಪ್ಪೆಲ್ಲ ನನ್ನದೆಂದು ಗಟ್ಟಿ ಧ್ವನಿಗೆ ಗಟ್ಟಿಯಾಗಿ ಕೂಗಿ ಕೂಗಿ ಹೇಳುವೆ
ತಪ್ಪೆಲ್ಲ ನನ್ನದೇ ನನ್ನದೇ ಎಂದು
———————

ಡಾ ಸಾವಿತ್ರಿ ಕಮಲಾಪೂರ

3 thoughts on “ತಪ್ಪೆಲ್ಲ ನನ್ನದೇ ಗೆಳತಿ-ಡಾ ಸಾವಿತ್ರಿ ಕಮಲಾಪೂರ

Leave a Reply

Back To Top