ಕಂಚುಗಾರನಹಳ್ಳಿ ಸತೀಶ್ ಅವರ ಕವಿತೆ

ಕಾವ್ಯ ಸಂಗಾತಿ

ಕಂಚುಗಾರನಹಳ್ಳಿ ಸತೀಶ್ ಅವರ ಕವಿತೆ

ಸಾಧನೆಯ ಹಾದಿಯಲಿ ಎಡವಿದವರು ಎಷ್ಟೋ ಜನ
ಕಲ್ಲು ಮುಳ್ಳಿನ ದಾರಿಯನು ತುಳಿದವರು ಎಷ್ಟೋ ಜನ

ಲಂಚಕ್ಕೆ ಕೈ ಒಡ್ಡಿದ ಭ್ರಷ್ಟ ಪ್ರಾಮಾಣಿಕನಾಗಲು ಸಾಧ್ಯವೇ
ಕಷ್ಟ ಸುಖದ ಪಯಣದಲಿ ನಡೆದವರು ಎಷ್ಟೋ ಜನ

ಏಳು ಬೀಳು ಎಲ್ಲರ ಜೀವನದಲ್ಲಿ ಸರ್ವೇಸಾಮಾನ್ಯ
ನರನ ನಂಬಿಕೆಯ ಪಥದಲಿ ಸೋತವರು ಎಷ್ಟೋ ಜನ

ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಕಾಲ ಬದಲಾಗಿದೆಅನ್ಯರಿಗೆ ಅಂಜಿ ಅವನತಿ ಹೊಂದಿದವರು ಎಷ್ಟೋ ಜನ

ಕಾಯಕವೇ ಕೊನೆಯ ಅಸ್ತ್ರ ಎಂದು ನಂಬಿದವನು ಕಂಸ
ಕಪಟ ನಾಟಕ ಮಾಡುತ್ತಲೇ ಬೀಗಿದವರು ಎಷ್ಟೋ ಜನ

——————————–

ಕಂಚುಗಾರನಹಳ್ಳಿ ಸತೀಶ್

Leave a Reply

Back To Top