ಶರಣಬಸಪ್ಪ ಕುಂಬಾರ್ ಕವಿತೆ ನನ್ನ ಮುದ್ದಿನ ನಾಯಿ ಮರಿ

ಕಾವ್ಯ ಸಂಗಾತಿ

ಶರಣಬಸಪ್ಪ ಕುಂಬಾರ್

ನನ್ನ ಮುದ್ದಿನ ನಾಯಿ ಮರಿ

ನನ್ನ ಮುದ್ದಿನ ಪ್ರೀತಿ ನಾಯಿ ಮರಿಯಿದು
ಮನೆಯಲಿ ಆಟವಾಡುವ ಪುಟಾಣಿಯಿದು
ಬಿಸ್ಕೀಟು ತೋರಿಸಲು ಮೇಲಕ್ಕೆ ಜಿಗಿವುದು
ಕೊಡದಿದ್ದರೆ ಬಾಲವಾಡಿಸಿ ಹಿಂದೆ ಬರುವುದು॥

ಮನೆಗೆ ಬರಲು ಬಳಿಗೆ ಬಂದು ಕೂಡುವುದು
ತಲೆ ಸವರಲು ಮೈ ನೆಕ್ಕಿ ಪ್ರೀತಿ ತೋರಿಸುವುದು
ಕೊರಳಲ್ಲಿ ಗಂಟೆಯೊಂದು ನೇತು ಹಾಕಿರುವುದು
ಓಡೋಡಿ ಬರಲು ಗಂಟೆಯ ನಾದ ಕೇಳುವುದು॥

ಹೊರಗಡೆ ಭಿಕ್ಷುಕರು ಬರಲು ಬೊಗಳುವುದು
ಬೇರೆ ನಾಯಿ ಕಂಡರೆ ಬಾಲ ಅಲ್ಲಾಡಿಸುವುದು
ಊಟ ಮಾಡುತ್ತಿರಲು ಬಾಯಿ ಚಪ್ಪರಿಸುವುದು
ತಿಂಡಿ ತಿಂದ ಮೇಲೆ ಹೋಗಿ ಮನೆ ಕಾಯುವುದು॥


ಶರಣಬಸಪ್ಪ ಕುಂಬಾರ್

Leave a Reply

Back To Top