ಕಾವ್ಯ ಸಂಗಾತಿ
ಡಾ ಡೋ.ನಾ.ವೆಂಕಟೇಶ
ಕವಿತೆ ಕಥೆಯಲ್ಲ
ಕವಿತೆ ಕಥೆ ಆಗಬಾರದು-
ಮಾತಿಲ್ಲ ಕಥೆಯಿಲ್ಲ!
ಕವಿತೆ ಕನಸಾಗ ಬಾರದು
ಹೃದಯಂಗಮವಾಗಿ
ಹಾಡ ಬೇಕು
ಮಾಂಸ ಮೂಳೆಗಳ ಮೃದ್ವಸ್ತಿ
ಮಜ್ಜೆಗಳಿಂದ ರಚನೆಯಾಗಬೇಕು
ಭೌತಿಕವಾಗಿ ಭೋರ್ಗರೆಯ ಬೇಕು
ಅತೀಂದ್ರಿಯ ಧ್ಯಾನ ಆಗಬೇಕು
ಕವಿತೆ ಕೇಳುಗರ ಚಕ್ಷುಗಳ
ನೋಟವಾಗ ಬೇಕು
ಕವಿತೆ ಅತಿ ಸುಂದರ
ಆಕ್ರಮಣವಾಗ ಬೇಕು
ಕವಿತೆ ಬರೆ ಬರೇ
ನನಸಾಗ ಬೇಕು
ಹೂವಾಗ ಬೇಕು
ಹಾಡಾಗ ಬೇಕು ಹಾಗೂ
ನನ್ನನ್ನೇ ಕಾಡ ಬೇಕು!
ಕವಿತೆ ನನ್ನ ಕೇಳದೇ
ನನ್ನಾಕ್ರಮಿಸಿ
ನನ್ನನ್ನೇ ಅಂತರ್ಧಾನಿಸಿ ಈಗ
ನಾನೆಲ್ಲೋ ಅವಳೆಲ್ಲೋ!
ಇಲ್ಲಿದ್ದೀನೋ
ಭೂಗತನೋ ಅಥವಾ
ಅಂತರ್ಜಾಲ ತಾಣದ
ಕನಸೋ!
ಎಂತೋ ನನ್ನ ಕವಿತೆ
ಕಥೆಯಾಗದಿರಲಿ ಮತ್ತೆ!
ನನಸೇ ಆಗಿರಲಿ
ಮತ್ತೆ ಮತ್ತೆ!!
“ಕವಿತೆ ಕಥೆಯಲ್ಲ” ಒಂದು ಹೃದಯ ತಟ್ಟುವ ಕವನ. ವೆಂಕಟೇಶ್ ನಿಮಗೆ ನನ್ನ ಹೃದಯ ತುಂಬಿದ ಅಭಿನಂದನೆಗಳು.
ಮೂರ್ತಿ, ನಿಮ್ಮ ಸಹೃದಯ ಸದ್ಭಾವಕ್ಕೆ ದೊಡ್ಡ ಸಲಾಂ!
ನಿಮ್ಮ ಸುಂದರ ಕವಿತೆ ಸದಾ ನಮ್ಮ ಹೃದಯದಲ್ಲಿ ಕವಿತೆಯಾಗಿ ಉಳಿಯುತ್ತದೆ.
ಧನ್ಯವಾದಗಳು ಮಂಜಣ್ಣ
ನಿಮ್ಮ ಚಪ್ಪಾಳೆಗಳಿಗೆ ನತ ಮಸ್ತಕ ನಾ!
ಕ(ವಿ)ತೆ ಕಥೆಯಾದಾಗ, ವಿ ಕಳೆದು ಕೊಂಡು ವಿಚರಿತವಾಗಿ ಹೋಗುವ ಸಾದ್ಯತೇ ಇದೆ. ಮತ್ತೊಮ್ಮೆ ಉತ್ತಮ ಕವನ..
ಡಾ. ಸೂರ್ಯ ಕುಮಾರ್ ಮಡಿಕೇರಿ
ಕವಿತೆ ಕಳೆದು ಹೋಗಬಾರದು. “ಕಥೆಯಾಗಬಾರದು ”
Thank you Surya!
Nice Kavithe Bhavoji
Thanq Sona!