ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ -ಪೂನಾ-
ಹೆತ್ತು ಕೊಡುವೆ
ಮೌನದಲಿ ಮುದುಡಿದ ಭಾವ
ಉನ್ಮಾದ ಆನಂದದಲಿ ತೇಲಾಡಿ ಓಲಾಡಿ
ಶಬ್ದ ಬಂಧನವ ಕಳಚಿ
ಕವನಗಳಾಗಿ ಹುಟ್ಟುವ
ಕನಸುಗಳು
ಹೆತ್ತು ಕೊಡುವೆ ನಿಮಗೆ
ನಿತ್ಯ ನೂರು ಕವನಗಳ
ಭಾವದ ಬಸುರಕ್ಕೆ ಹುಟ್ಟುವವು
ಕಾವ್ಯ
ಚೀರುತ್ತವೆ ಅಳುತ್ತವೆ ನಗುತ್ತವೆ
ಹೊರಳುತ್ತವೆ ಏಳುತ್ತವೆ
ಬೀಳುತ್ತವೆ
ಮೆಲ್ಲಗೆ ಗುನುಗುತ್ತವೆ
ಪಿಸುರುತ್ತವೆ
ಬಿಕ್ಕುತ್ತವೆ ಸೆರಗಿನಲ್ಲಿ
ನಿಮ್ಮ ನೋಯಿಸದೆ ,ಪೀಡಿಸದೇ
ಬಿಕ್ಕುತ್ತವೇ ನೆನಪಿನಲಿ
ಆರೈಸಬಲ್ಲಿರ ನೊಂದ
ಕಂದಮ್ಮಗಳ
ಮೌನಕ್ಕೆ ಶರಣಾಗಿ
ಮೆಲ್ಲಗೆ ಮಲಗುತ್ತವೆ
ಸಂತೈಸಬಲ್ಲಿರಾ ಪುಟ್ಟ
ಕವನಗಳ ಕನಲು?
ಸಪ್ಪಳ ಗದ್ದಲ ಮಾಡ ಬೇಡಿ ,
ಎದ್ದರೆ ಮತ್ತೆ ರೋಧಿಸುತ್ತವೆ ನನ್ನ ಕಂದಮ್ಮಗಳು
ಹೆತ್ತು ಕೊಡುವೆ ನಿಮಗೆ
ನಿತ್ಯ ನೂರು ಕವನ
ಸೂಪರ್ ಕವನ ಸರ್
ಡಾ ಮೀನಾಕ್ಷಿ ಪಾಟೀಲ
ಸುಂದರ ಕಾವ್ಯ ಸರ್
ಡಾ ಶರಣಮ್ಮ
ಏಷ್ಟು ಸುಂದರ ಅಭಿವ್ಯಕ್ತಿ ಸರ್
ಜಯದೇವಿ ಬೀದರ
ಅದ್ಭುತ ಸುಂದರ ಕವನ ಬಹಳ ಚೆನ್ನಾಗಿ ಬಂದಿದೆ. ಸರ್
ಡಾ ವೀಣಾ ಹೂಗಾರ
ಹೆತ್ತು ಕೊಡುವೆ
ನಿಮಗೆ ನಿತ್ಯ
ನೂರು ಕವನ
ಎಂಥ ಮನೋಜ್ಞ ಮತ್ತು ಉದಾತ್ತವಾದ ಭಾವನೆಗಳು ಕವನದ ಮೂಲಕ ಹೊರಹೊಮ್ಮಿವೆ
ಸುಶಿ
ನಿಜಕ್ಕೂ ತುಂಬಾ ಒಳ್ಳೆಯ ಕವನ ಸರ್
ಜಯಶ್ರೀ ಆಲೂರ
ಸುಂದರ ಭಾವದ ಹಾಡು
ಗೀತಾ ಜಿ ಎಸ್
ವಾವ್ ಸೊಗಸಾದ ಕವನ ಸರ್
ಜಯಶ್ರೀ ಪಾಟೀಲ
ಸುಂದರವಾದ ಸಾಲುಗಳು ಸಾರ್ ..
ಭಾವಪೂರ್ಣ ಕವನ ಸರ್.
ತುಂಬಾ ಸೊಗಸಾದ ಕವನ!!