ಕಾವ್ಯ ಸಂಗಾತಿ
ಸುಮತಿ ಕೃಷ್ಣಮೂರ್ತಿ
ಹೊಸ ಕವಿತೆ
ಕತ್ತಲ ಪರದೆ ಮೆತ್ತನೆ ಸರಿಯಲು
ಬಣ್ಣ ಹಾಕುತಿವೆ ಪಾತ್ರಗಳು
ಅಂಕದ ಮೇಲೆ ಹೃನ್ಮನ ಸೆಳೆಯಲು
ತೊಟ್ಟಿವೆ ನಾನಾ ವೇಷಗಳು
ಸೋಜಿಗವೆಂದರೆ ವೇದಿಕೆ ಬಯಸರು
ಬಯಲಿನ ನೈಜ ಕಲಾವಿದರು
ಸಹಜತೆ ನಟಿಸಿ ಲೋಕವ ಸೆಳೆಯಲು
ನಿತ್ಯವೂ ಶ್ರಮಿಸುವ ಕೋವಿದರು
ಜೀವನವೆಂಬ ನಾಟಕ ರಂಗದಿ
ಮುಖ್ಯ ಭೂಮಿಕೆಯೇ ತಾವಾಗಿ
ಪೋಷಕ ಪಾತ್ರವ ಮಾಡಲೊಪ್ಪದೆ
ಕಥೆಯ ರೂಪವೇ ಬದಲಾಗಿ
ನಿತ್ಯ ನಡೆಯುವ ಬಯಲಿನಾಟಕೆ
ನಾವೂ ನೀವೂ ಪ್ರೇಕ್ಷಕರು
ನಡುವೆ ಅಡಗಿರುವ ನಟರನು
ಹುಡುಕಲು ವಿಫಲರಾದ ಅಮಾಯಕರು
ಸುಮತಿ ಕೃಷ್ಣಮೂರ್ತಿ
ಸೂಪರ್, ಸುಮತಿ. ನಿಮ್ಮ ಹೊಸ ಕಾವ್ಯ, ಭಾವ ಯಾನಕ್ಕೆ ಶುಭಾಶಯಗಳು
Olleya kavanagalu baruttive. Keep it up. ಕಾವ್ಯ ಯಾನ ನಿರಂತರವಾಗಿ ಸಾಗಲಿ.