ಮಧುರಾ ಗಾಂವ್ಕರ್ ಕವಿತೆ-ಹೆಚ್ಚು

ಕಾವ್ಯ ಸಂಗಾತಿ

ಮಧುರಾ ಗಾಂವ್ಕರ್

ಹೆಚ್ಚು

Wither sunflower.

ಸಮಯವೇ ಕಾಡುವುದು
ಸಂಗಾತಿಗಿಂತ ಹೆಚ್ಚು…!
ನೆನಪುಗಳೇ ಕಾಡುವುದು
ನೋವಿಗಿಂತ ಹೆಚ್ಚು…!

ಮೌನವೇ ಕಾಡುವುದು
ಮಾತಿಗೂ ಮಿಗಿಲು..!
ಕಣ್ಮುಚ್ಚಿದರೆ ಕಾಡುವುದು
ಕಣ್ಣೋಟಕೂ ಮಿಗಿಲು..!

ತೀವ್ರ ಬೆಳಕಿಗೆ ಸೋಲುವೆವು
ಕತ್ತಲೆಗಿಂತ ಹೆಚ್ಚೇ…!
ಹರಿವ ಪ್ರವಾಹಕ್ಕೆ ಬೆದರುವೆವು
ಬರಗಾಲಕ್ಕೂ ಹೆಚ್ಚೇ…!

ಸುಡುವ ಕಿರಣಕೆ ತರುಲತೆ
ಕರಕಲಾಗುವುದಲ್ಲ…!
ನಿತ್ಯವೆರೆವ ಹನಿ ನೀರಿಗೂ
ಮತ್ತೆ ಚಿಗುರುವುದಲ್ಲ..!

ಎಳೆಯ ಕಾಯಿಯ ಹಣ್ಣು
ಮೊದಲು ಕೊಳೆವುದು ಹೆಚ್ಚಂತೆ…!
ಬಲಿತ ಫಲಕೆ ಲೋಕದಿ
ರುಚಿ ,ಬೆಲೆಯು ಹೆಚ್ಚಂತೆ..!!!


ಮಧುರಾ ಗಾಂವ್ಕರ್

1 thought on “ಮಧುರಾ ಗಾಂವ್ಕರ್ ಕವಿತೆ-ಹೆಚ್ಚು

Leave a Reply