ಕಾವ್ಯಸಂಗಾತಿ
ಶೃತಿ ಮಧುಸೂದನ್
ಮುರುಕುಗಳು.
1
ಅವನಿಗೆ ಕಾಡು ಮಲ್ಲಿಗೆ
ಎಂದರೆ ಬಲು ಪ್ರೇಮ..
ಅದಕ್ಕೆ ನನ್ನ ಅವನ ತೋಳುಗಳಲ್ಲಿ
ಸದಾ ಅಪ್ಪಿ , ಅರಳಿಸುವ.
ಗಮಿಸುವ ಬರೆದಿಡುವ.
ಶೃಂಗಾರಕ್ಕೆ ಸವಿದ ಸಾಲುಗಳ
ಮಾಲೆ ಕಟ್ಟುವ….
ಮತ್ತೆ ನನಗೆ ಮುಡಿಸುವ
ನಗುವ, ಅವನು ನನ್ನ ಹುಚ್ಚು ಕವಿ….
2
ಸೀರೆ ಎಂದರೆ ಅಭಾದ್ಯ
ಪ್ರೇಮ ಅವನಿಗೆ…
ಹಸಿರು ಸೀರೆ ಉಟ್ಟಾಗ
ಪ್ರಕೃತಿಗೆ ಹೋಲಿಸುವ…
ಕಪ್ಪು ಸೀರೆ ಉಟ್ಟಾಗ
ನಿಂತು ನೋಡಿ ಅವನೇ
ದೃಷ್ಟಿ ತೆಗೆಯುವ..
ನೀಲಿ ಸೀರೆ ಉಟ್ಟಾಗ
ನನ್ನ ಬರ ಸೆಳೆದು ಅಪ್ಪಿದ್ದ..
ಸೀರೆ ಬೆವರಿನ ಮುತ್ತಾಗಿ
ಮೂಲೆ ಸೇರಿದ
ಕವಿತೆಗಳಲ್ಲಿ ಅಡಗಿತ್ತು…
ನಾನು ನೀನು ಮಾತ್ರ
ನೀಲಿ ಸಾಗರ ಸಂಗಮದೊಳ್
ಬೆವರುತ್ತಾ…
ಮುತ್ತಿನ ಮಣಿಗಳಾಗುತ್ತಿದ್ದೆವು…
3
ನಮ್ಮಿಬ್ಬರ ಮಿಲನಕ್ಕೆ ನೀ
ಬರೆದ ಸಾಲುಗಳನ್ನು,
ಕದ್ದು ಓದಿದವಳ..
ನೋಡಿ ನಕ್ಕು..ಬಿಗಿದಪ್ಪಿ ಹೇಳಿದೆ
“ನಾನು ನಿನ್ನ ಕಂಡಾಗಲೇ
ನಿನ್ನೊಳಗೆ ಬೆರೆತು ಹೋದ ಭಾವ ಕಣೆ.”
ನಾನು ನಾಚಿ ಕಣ್ಣು ಮುಚ್ಚಲು..
ತುಟಿಗಳು ಹಸಿಯಾಗಿತ್ತು..
ನಿನ್ನ ದೀರ್ಘ ಚುಂಬನದ ಭಾಷೆಯಲ್ಲಿ…
4
ನಮ್ಮಿಬ್ಬರ ಮೊದಲ ಭೇಟಿಗೆ
ರೈಲಿನ ಭೋಗಿಯ
ಒಲವ ಕವಿತೆಯ ಸಾಲಿಗೆ,
ಮುಂಗುರುಳನ್ನು ತೀಡಿದ
ಕೈ ಬೆರಳು ಗೀಚಿತ್ತು ಸಾಲುಗಳನ್ನು ಕವಿತೆಗೆ…
ತುಟಿಗೆ ನೀನಿಟ್ಟ ಲೇಖನಿಯ ಮುತ್ತಿಗೆ..
ಮುತ್ತು ಮತ್ತು ನಾನು ಸದಾ
ನಿನ್ನವಳಾಗಿ ಉಳಿದಿಹೆವು ಸರಸ ದೀವಿಗೆ…
———————————-
ಶೃತಿ ಮಧುಸೂದನ್
ಚೆಂದದ ಭಾವನಾತ್ಮಕವಾದ ಸಾಲುಗಳು ಪದಕಟ್ಟುವ ಕುಶಲತೆಗೆ ನಿಮಗೆ ನೀವೇ ಸಾಟಿ ರುದ್ರಾಗ್ನಿ
ಅದ್ಭುತ ಅಮೋಘ ಪದಬಂಧ
ಮುತ್ತಿನ ಹಾರದಂತೆ ಚೆಂದದ ಪದಗಳಲಿ