ಕಾವ್ಯಸಂಗಾತಿ
-ಮುನಿರಾಜ್
“ಕೊನೆಯಾಗಲಿ ದಾರಿ “
ನಾನೊಂದು ಸಾವಿಲ್ಲದ ಆತ್ಮ
ಹುಟ್ಟುತ್ತಲೆ ಇರುವೆ ದೇಹತ್ಯಾಗದ ನಂತರ
ರಂಗಮಂದಿರ ತೊರೆದು ಹೋದರು
ಮತ್ತೊಂದು ಪಾತ್ರ ವಹಿಸುತ್ತಿರುವನವನು
ಅನಿವಾರ್ಯ ನಿರ್ವಹಿಸಲೆಬೇಕು
ಪ್ರಾಣಿಯೊ ಪಕ್ಷಿಯೊ ಜಲಚರವೊ
ಬುದ್ದಿವಂತ ಮಾನವನೊ
ಕೊನೆ ಇರದ ದಾರಿಯಲ್ಲಿ ನನ್ನ ಪಯಣ
ನೊಂದು ಬೆಂದು ಬಸವಳಿದಿರುವೆ
ಮುಖವಾಡಗಳ ನಡುವೆ ಕೊರಗಿರುವೆ
ಸಂಭಂದಗಳ ಚುಚ್ಚುವ ಮಾತು
ಏಕಾಂಗಿ ಪಯಣ ಸಾಕೆನ್ನಿಸಿದೆ
ಕೊನೆ ಎಲ್ಲಿಹುದು ಆತ್ಮದ ಪಯಣಕ್ಕೆ
ಕೊನೆಗೊಳಿಸು ಶ್ರೀಹರಿಯೆ
ಮುಕ್ತಿ ನೀಡು ವೈಕುಂಠದಲಿ ನೆಲೆಸುವಂತೆ
ಸಾಕೆನಿಸಿದೆ ಜನುಮಗಳ ಸಂಚಾರ
ಕೊನೆಯಾಗಲಿ ಈ ಜನ್ಮವು
ಮುನಿರಾಜ್
ವ್ಹಾವ್ ಸರ್ ಚಂದದ ಹೊನ್ನಿನ ಸಾಲುಗಳೂ… ಸೂಪರ್ ಸೂಪರ್ ಸೂಪರ್..
ಧನ್ಯವಾದಗಳೊಂದಿಗೆ
ಸೂಪರ್ ಸುಂದರ ಸಾಲುಗಳು ಸರ್