ಮಕ್ಕಳ ದಿನಾಚರಣೆಯ ವಿಶೇಷ

ಡಾ. ಸರೋಜಾ ಜಾಧವ

ನೆಹರು ಚಾಚಾ

ಚಾಚಾ ನೆಹರು ಮಕ್ಕಳಿಗೆ
ಕೊಟ್ಟರು ಗುಲಾಬಿ ಹೂವು
ವರುಷದ ಈದಿನ ಮಕ್ಕಳಿಗೆ
ಜನುಮದಿನದ ನಲಿವು

ಅರಳುವ ಕಂಗಳಲಿ
ಸೂಸಿವೆ ಕನಸುಗಳು
ಭಾವಿಭಾರತದ ಪ್ರಜೆಗಳು
ಪುಟ್ಟ ಪುಟ್ಟ ಮಕ್ಕಳು

ಗಾಂಧಿ ನೆಹರು ಟಿಳಕ ಶಾಸ್ತ್ರೀಜಿ
ಬೋಸ್ ಭಗತ್ಸಿಂಗ್ ಶಿವಾಜಿ
ರಾಣಿ ಚೆನ್ನಮ್ಮ ಓಬವ್ವ ರಾಣಿಜಿ
ಝಾನ್ಸಿರಾಣಿ ಚಾಂದಬೀಬಿಜಿ

ಎಲ್ಲರ ವೇಷ ತೊಟ್ಟಿಹರು
ನಲಿಯುತ ಎಲ್ಲಾ ಹಾಡಿಹರು
ವೀರ ಶೂರರ ನೆನೆದರು
ಮಕ್ಕಳ ದಿನಾಚರಣೆ ಆಚರಿಸಿದರು

————————————–

ಡಾ. ಸರೋಜಾ ಜಾಧವ

Leave a Reply

Back To Top