ಮಕ್ಕಳ ಸಂಗಾತಿ
ಮಕ್ಕಳೇ ದೇವರು-
ಮಾರುತೇಶ್ ಮೆದಿಕಿನಾಳ
ಮಕ್ಕಳೇ ದೇವರು ಅವರಿಗೆ ಸರಿಸಾಟಿ ಇನ್ಯಾರು
ಆಡುವರು ಓಡುವರು ಜಿಗಿದು ನೆಗೆದಾಡುವರು
ಆಟ ಪಾಠ ಚಿನ್ನಾಟದೊಳಗೆ ಚಿಲಿಪಿಲಿಗುಟ್ಟುವರು
ಮುದ್ದಾಡಿ ಅಪ್ಪಲು ಮಧು ಜೇನಿನಂತೆ ಇವರು!!
ಮಕ್ಕಳು ಮನೆ ಅಂಗಳದಲ್ಲಿ ಆಡಿ ನಗುತಿರಲು
ಅಲ್ಲಿ ನೆಲೆಸುವುದು ಸಂತೋಷದ ಹೊನಲು
ಶಾಲೆಯೊಳಗೆ ಆಟ ಪಾಠದ ಜೊತೆಗಿರಲು
ಎಲ್ಲರಿಗೂ ತೆರದಂತೆ ಭಾಗ್ಯದ ಬಾಗಿಲು!
ಚಿಣ್ಣರಿವರು ಚೊಕ್ಕ ಚಿನ್ನ ಅಪರಂಜಿಯಂತೆ
ವಿನ್ಯಾಸಗೊಳಿಸೋಣ ಆಕರ್ಷಣೀಯ ಆಭರಣದಂತೆ
ವಿಶ್ವಕ್ಕೆ ಭವಿಷ್ಯ ಮಕ್ಕಳನ್ನು ನಾವು ಬೆಳೆಸಿದಂತೆ
ಇದನ್ನರಿತು ಮಾಡೋಣ ಮಕ್ಕಳ ಕಾಳಜಿ ಸುರಕ್ಷತೆ!
ಚಾಚಾ ಪಂಡಿತ್ ಜವಾಹರಲಾಲ್ ನೆಹರು
ಮಕ್ಕಳನ್ನೇ ತಮ್ಮ ಹೃದಯದಲ್ಲಿರಿಸಿಕೊಂಡಿದ್ದರು
ಮಕ್ಕಳನ್ನೇ ಮುದ್ದಾಡಿ ಕೊಂಡಾಡುತ್ತಿದ್ದರು
ತಮ್ಮ ಜನ್ಮದಿನ ಮಕ್ಕಳಿಗೆ ಉಡುಗೊರೆಯಾಗಿ ಕೊಟ್ಟರು!!
ಮಾರುತೇಶ್ ಮೆದಿಕಿನಾಳ