ಶ್ರೀಕಾಂತಯ್ಯ ಮಠ ಕವಿತೆ-ಕಾಂತನೊಲುಮೆ

ಕಾವ್ಯ ಸಂಗಾತಿ

ಶ್ರೀಕಾಂತಯ್ಯ ಮಠ

ಕಾಂತನೊಲುಮೆ

ಒಲವಿನ ಬಂಧನದ ಹೃದಯಕ್ಕೆ ನೀನೆ ಸಾಟಿ ಸಖಿ
ಪ್ರೀತಿಸುವ ಭಾವ ಬಂಧಕ್ಕೆ ಸಂಬಂಧವೆ ಸಾಟಿ ಸಖಿ.

ಅಡೆತಡೆಯಿಲ್ಲದೆ ಸಾಗುವ ಜೀವನಕ್ಕೆ ಬೆಳಕು ನೀನು
ಹೃದಯ ವೈಶಾಲ್ಯಕ್ಕೆ ಪ್ರೇಮಾನುಬಂಧವೆ ಸರಿ ಸಖಿ.

ಹೊಸ ಲೋಕದ ನೆಲದಲ್ಲಿ ನೆಲೆಸುವುದೆ ಭಾಗ್ಯ ನಮಗೆ
ಇಲ್ಲಿ ನೆರವೇರುವ ಕನಸುಗಳ ಸುಗ್ಗಿ ರಾಶಿಯಾಗಿವೆ ಸಖಿ.

ಭಾವ ಕಣದ ಋಣಾನುಬಂಧವನ್ನು ಹಂಚುವೆ ನಿನಗೆ
ಸುಖದ ಸಿರಿತನದಲ್ಲಿ ಮೆರೆಸುವ ಭಾಷೆ ಕೊಡುವೆ ಸಖಿ.

ಕಾಂತನೊಲುಮೆಯಲ್ಲಿ ಕಿಂಚಿತ್ತೂ ಬೇಧವಿಲ್ಲವೆಂಬುದು ಸತ್ಯ
ದೃಢ ಪಡಿಸುವುದಕ್ಕೆ ಹೃದಯ ಮನೆಯಲ್ಲಿ ಸದಾ ನೀನಿರು ಸಖಿ.

———————-

ಶ್ರೀಕಾಂತಯ್ಯ ಮಠ

Leave a Reply

Back To Top