ಡಾ ಅನ್ನಪೂರ್ಣಾ ಹಿರೇಮಠ-ಹಚ್ಚಿರಿ ದೀಪ

ಕಾವ್ಯಸಂಗಾತಿ

ಡಾ ಅನ್ನಪೂರ್ಣಾ ಹಿರೇಮಠ-

ಹಚ್ಚಿರಿ ದೀಪ

ಹಚ್ಚಿರಿ ಹಚ್ಚಿರಿ ಭೇದ-ಭಾವ ಮೇಲು -ಕೀಳು ಥಳಿಸಿ ಸಮತೆ ಸದ್ಭಾವದ ದೀಪ
ಹಚ್ಚಿರಿ ಹಚ್ಚಿರಿ ಜಾತಿ ಮತ ಪಂಥ ಧರ್ಮ ಅಳಿಸಿ ಮನುಜ ಕುಲವೊಂದೇ ಎಂಬ ದೀಪ

ಹಚ್ಚಿರಿ ಹಚ್ಚಿರಿ ದ್ವೇಷ ವೈಸಮ್ಯ ಅಸೂಯೆ ಮರೆತು ಸರಳತೆ ಸಹಬಾಳ್ವೆಯಾ ದೀಪ
ಹಚ್ಚಿರಿ ಹಚ್ಚಿರಿ ಆಲಸ್ಯ ನಿರಾಸಕ್ತಿ, ಬೇಸರ ಕಳೆದು ಚೈತನ್ಯ ಹುಮ್ಮಸ್ಸಿನ ದೀಪ

ಹಚ್ಚಿರಿ ಹಚ್ಚಿರಿ ಸ್ವಾರ್ಥ ದುರಾಸೆ ದುಶ್ಚಟಗಳ ತೊರೆದು ನಿಸ್ವಾರ್ಥತೆ ಸ್ವಚ್ಛತೆಯ ದೀಪ
ಹಚ್ಚಿರಿ ಹಚ್ಚಿರಿ ಚಟ ವ್ಯಸನ ಹಠಗಳ ಹರಿದು ಆರೋಗ್ಯ ಸಂತೃಪ್ತಿಯ ದೀಪ

ಹಚ್ಚಿರಿ ಹಚ್ಚಿರಿ ಅನಾಚಾರ ಅವ್ಯವಹಾರ ಭ್ರಷ್ಟತೆ ತುರಿದು ಆಚಾರ ಸತ್ಯಸಂದತೆಯ ದೀಪ
ಹಚ್ಚಿರಿ ಹಚ್ಚಿರಿ ಅನ್ಯಾಯ ಅಕ್ರಮ ಅನೀತಿ ಹುರಿದು ನ್ಯಾಯ ನಿಷ್ಠೆಯಾ ದೀಪ

ಹಚ್ಚಿರಿ ಹಚ್ಚಿರಿ ನಾನು ನನ್ನದು ನನಗಷ್ಟೇ ಭಾವ ಸುಟ್ಟು ನಮ್ಮದು ನಮಗಾಗಿ ಎಂಬ ದೀಪ
ಹಚ್ಚಿರಿ ಹಚ್ಚಿರಿ ಮಮತೆ ಒಲವು ಪ್ರೀತಿ ಪ್ರೇಮ ಕರುಣೆ ಸಹಕಾರ ಸಹಬಾಳ್ವೆಯ ದೀಪ
ಮನ ಮನಗಳಲಿ ಮನೆ ಮನೆಗಳಲಿ ನಂದದಾ ಆನಂದದಾ ನಿತ್ಯ ಬೆಳಗೊ ನಂದಾದೀಪ //


ಡಾ ಅನ್ನಪೂರ್ಣಾ ಹಿರೇಮಠ

One thought on “ಡಾ ಅನ್ನಪೂರ್ಣಾ ಹಿರೇಮಠ-ಹಚ್ಚಿರಿ ದೀಪ

Leave a Reply

Back To Top