ಪ್ರೀತಿ ಅಮೂಲ್ಯ ಡಾ.ಸುಮತಿ ಪಿ. ಅವರಿಂದ ಒಂದು ಟಿಪ್ಪಣಿ

ಕಿರುಬರಹ

ಡಾ.ಸುಮತಿ ಪಿ.

ಪ್ರೀತಿ ಅಮೂಲ್ಯ

ಪ್ರೀತಿ ಎಂಬುವುದು ಬಹಳ ಅಮೂಲ್ಯವಾದುದು.ಪ್ರೀತಿಯನ್ನು ಗಳಿಸುವುದು ಇಷ್ಟ ಉಳಿಸಿಕೊಳ್ಳುವುದು ಕಷ್ಟ.ಕಳೆದುಕೊಂಡರೆ ನಷ್ಟ.ಪ್ರೀತಿ ಎರಡಕ್ಷರದ ಪದವಾದರೂ ,ಅದರ ಪ್ರಭಾವ ಆಗಾಧ.ಮುಗ್ಧ ಮನಸ್ಸಿನ ಪ್ರೀತಿ ನಿಷ್ಕಲ್ಮಶ,ನಿಸ್ಸಾರ್ಥ.

ಪ್ರೀತಿ ಎಂಬುವುದು ವ್ಯಕ್ತಿಯ ಭಾವನೆ ಮತ್ತು ಅನುಭವಕ್ಕೆ ಸಂಬಂಧಿಸಿದ್ದು,ಅದು ಪ್ರಬಲವಾದ ಒಲವು, ಬಾಂಧವ್ಯವನ್ನು ಬೆಸೆಯುತ್ತದೆ.ಪ್ರೀತಿ ಎಂಬುವುದು ಅಂದ ನೋಡಿ ಅಥವಾ ಅಂತಸ್ತನ್ನು ನೋಡಿ ಹುಟ್ಟುವುದಿಲ್ಲ. ಇಬ್ಬರು ಅಂದರೆ ಎರಡು ಮನಸ್ಸಿನ ಭಾವನೆಗಳ ಸಮ್ಮಿಳಿತವೂ ಹೌದು.

ಮನುಜನ ಮನದಲ್ಲಿನ ಒಂದು ಅಮೂರ್ತ ಪರಿಕಲ್ಪನೆಯೇ ಪ್ರೀತಿ, ಪ್ರೀತಿಸಿದ ವ್ಯಕ್ತಿಯ ಮೇಲೆ ತೋರುವ ಸೂಕ್ಷ್ಮವಾದ ಕಾಳಜಿ. ಆಳವಾದ ಭಾವನೆಗಳನ್ನು ಅದು ಸೂಚಿಸುತ್ತದೆ. ಇದನ್ನು ಮಾತಿನಲ್ಲಿ ವಿವರಿಸಲಾಗದು. ಪ್ರೀತಿಯನ್ನು ವ್ಯಾಖ್ಯಾನಿಸಲು ಸಾದ್ಯವಿಲ್ಲ.

ಪ್ರೀತಿಯಿಂದ ಎರಡು ಮನಸ್ಸುಗಳ ಮಧ್ಯೆ ಗಟ್ಟಿಯಾದ ಬಂಧ ವೊಂದು ಬೆಳೆದು ಬಿಡುತ್ತದೆ. ಅದುವೇ ಪರಿಶುದ್ಧ ಮತ್ತು ಸ್ವಾರ್ಥ ವಿಲ್ಲದ ನಿಜವಾದ ಪ್ರೀತಿ. ಅಂತಹ ಪ್ರೀತಿಯನ್ನು ನಿರೂಪಿಸುವುದು ಅಥವಾ ವಿವರಿಸುವುದು ಕಷ್ಟ.ಅನುಭವಿಸಿದಾಗ ಅದು ಅರಿವಿಗೆ ಬರುತ್ತದೆ .ನಿಜವಾದ ಪ್ರೀತಿ ಏನು ಎಂಬುದನ್ನು ಅನುಭವಿಸಿ ಅರ್ಥ ಮಾಡಿಕೊಳ್ಳುವುದು ಕಷ್ಟವಲ್ಲ.ಇನ್ನೊಬ್ಬರಿಗೆ ಹೇಳಲು ಸಾಧ್ಯವಿಲ್ಲ.

ಪ್ರೀತಿಯಲ್ಲಿ ಕೊಟ್ಟು ಪಡೆದುಕೊಳ್ಳುವ ಭಾವ ವಿರುತ್ತದೆ. ಹೃದಯಪೂರ್ವಕವಾಗಿ ಪ್ರೀತಿಯನ್ನು ಕೊಟ್ಟರೆ , ನಾವೂ ಪ್ರೀತಿಯನ್ನು ಪಡೆದುಕೊಳ್ಳಬಹುದು. ಇಬ್ಬರೂ ಪರಸ್ಪರ ತಮ್ಮನ್ನು ಅರ್ಥ ಮಾಡಿಕೊಳ್ಳಬೇಕು.ಪ್ರೀತಿಸುವ ದಾರಿ ಪ್ರೀತಿ ಗೆಲ್ಲುವಂತೆ ಮಾಡುತ್ತದೆ.ನಿಜವಾದ ಪ್ರೀತಿಯಲ್ಲಿ ಸಂತೋಷ ತುಂಬಿರುತ್ತದೆ.ಸ್ವಾರ್ಥ ಮತ್ತು ನಿರ್ಬಂಧ ಇಲ್ಲದ ಪ್ರೀತಿಯು ತಕ್ಷಣ ಹುಟ್ಟದು.ಸಾಕಷ್ಟು ಸಮಯದ ಅಂತರದಲ್ಲಿ ಅದು ಬೆಳೆಯಬಹುದು.ನಿಜವಾದ ಪ್ರೀತಿ ಹುಟ್ಟಿದ ಮೇಲೆ ಮನಸ್ಸು ಯಾವ ತ್ಯಾಗಕ್ಕೂ ಸಿದ್ಧವಾಗಿರುತ್ತದೆ.

“ ಎಲ್ಲಿ ಸೆಳೆತ ಇದೆಯೋ ಅಲ್ಲಿ ಪ್ರೀತಿ ಇರುತ್ತದೆ. ” ಎನ್ನುವ ಮಾತಿನಂತೆ ಪ್ರೀತಿ ಹುಟ್ಟಿದ ಮನಸ್ಸುಗಳ ನಡುವೆ
ಸೆಳೆತವಿರುತ್ತದೆ.ಪ್ರೀತಿಯೆಂಬುವುದು ವರ್ಣಿಸಲಾಗದ, ವಿವರಿಸಲಾಗದ ಭಾವಾನುಭವ.ಮಧುರ ಅನುಭವ.
ಪ್ರೀತಿಯು ನಿಕಟತೆ, ಉತ್ಸಾಹ ಮತ್ತು ಬದ್ಧತೆಯಿಂದ ಗುರುತಿಸಲ್ಪಟ್ಟ ಭಾವನೆಗಳು ಮತ್ತು ನಡವಳಿಕೆಗಳ ಮಿಶ್ರಣವಾಗಿದೆ. ಇದು ಮೃದುತ್ವ, ಅನ್ಯೋನ್ಯತೆ, ರಕ್ಷಣೆ, ಆಕರ್ಷಣೆ, ವಾತ್ಸಲ್ಯ ಮತ್ತು ನಂಬಿಕೆಯನ್ನು ಒಳಗೊಂಡಿರುತ್ತದೆ.
ಪ್ರೀತಿಯ ಬಾಂಧವ್ಯ ಮನಸ್ಸಿನ ಸಂತೋಷ ಮತ್ತು ಜೀವನದ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ.ಆಂತರಿಕ ಶಾಂತಿಯು ನೆಲೆಸಿರುತ್ತದೆ. ಪ್ರೀತಿಸುವುದರಿಂದ ಹೃದ್ರೋಗದ ಅಪಾಯ ಕಡಿಮೆಯಾಗುತ್ತದೆ.ಹೃದಯಾಘಾತದ ನಂತರ ಸಾವಿನ ಸಾಧ್ಯತೆಯೂ ಕಡಿಮೆಯಾಗುತ್ತದೆ.ಕಡಿಮೆಯಾದ ಒತ್ತಡ ಹಾಗು ಖಿನ್ನತೆಯ ಅಪಾಯ ಕಡಿಮೆಯಾಗಿ
ದೀರ್ಘಾಯುಷ್ಯ ಪಡೆಯಬಹುದು.ನಂಬಿಕೆ, ಬದ್ಧತೆ ಮತ್ತು ಅನ್ಯೋನ್ಯತೆಯು ದೀರ್ಘಾಯುಷ್ಯದ ಗುಟ್ಟಾಗಿದೆ.
ನಾವೆಲ್ಲರೂ ಒಬ್ಬರಿಗೊಬ್ಬರು ಪ್ರೀತಿಸಿ
ಶಾಂತಿ, ನೆಮ್ಮದಿಯಲ್ಲಿ ದೀರ್ಘಾಯುಷ್ಯದ ಜೀವನ ನಡೆಸೋಣವೇ?


ಡಾ.ಸುಮತಿ ಪಿ

One thought on “ಪ್ರೀತಿ ಅಮೂಲ್ಯ ಡಾ.ಸುಮತಿ ಪಿ. ಅವರಿಂದ ಒಂದು ಟಿಪ್ಪಣಿ

Leave a Reply

Back To Top