ಕಾವ್ಯ ಸಂಗಾತಿ
ಡಾ ದಾನಮ್ಮ ಚ. ಝಳಕಿ
ನೀನಿಲ್ಲದ ದೀಪಾವಳಿ ದೀಪಾವಳಿಯಲ್ಲ
ಮನೆಯ ಮುಂದೆ ಹಿಂದೆ
ದೀಪಗಳು ಸಾಲು
ಅಂಗಳದಲಿ ಹಾರುತಿದೆ ಆಕಾಶ ಬುಟ್ಟಿ
ಜಗಮಗಿಸುವ ಸಾಲು ದೀಪ ಕಣ್ಣುಕೊರೆಯುತಿದೆ
ಆದರೂ ಮನದಲಿ ಕತ್ತಲೆ ಕವಿದಿದೆ
ತರತರದ ಉಂಡೆಗಳು
ಚಕ್ಕಲಿ ಶಂಕರಪಾಳೆ
ಕುರು ಕುರು ಚೂಡಾ
ಕರಚಿಕಾಯಿ ಕರದಂಟು
ಆದರೂ ಸವಿಯುವಾ ಬಯಕೆ ಬತ್ತಿದೆ
ಚಿಣ್ಣರು ಕುಣಿಯುತಿಹರು
ಬಣ್ಣ ಬಣ್ಣದ ಬಟ್ಟೆಯಲಿ
ಮನೆ ಮುಂದೆ ಗೆಳತಿಯರು
ತೊಟ್ಟಿಯರು ರೇಶ್ಮೇ ಲಂಗಾ
ಆದರೂ ರೇಶ್ಮೆಸೀರೆ ಆಶೆ ಎನಗಿಲ್ಲ
ಹೇಗೆ ಹೇಳಲಿ ನಾನು
ಯಾರಿಗೆ ಹೇಳಲಿ ನಾನು
ನೀನಿಲ್ಲದ ದೀಪಾವಳಿ ದೀಪಾವಳಿಯಲ್ಲ
ಮಿಡಿಯುತಿದೆ ಮನ ನಿನಗಾಗಿ ಅವ್ವಾ
ಅವ್ವ ನೀನಿದ್ದರೆ
ಅನುದಿನವೂ ದೀಪಾವಳಿ
ಮನದ ದೀಪ ಪ್ರಜ್ವಲಿಸುವ
ಮಹಾತಾಯಿ ನನ್ನವ್ವ
ನೀನಿಲ್ಲದ ದೀಪಾವಳಿ
ಊಹಿಸಲೂ ಆಗದು
ಬಾ ತಾಯಿ ಹಡೆದವ್ವ
ಇರಲಾರೆ ನಾನು
ಡಾ ದಾನಮ್ಮ ಚ. ಝಳಕಿ
ಅವ್ವನಿಲ್ಲದ ದೀಪಾವಳಿ … ಮನಮುಟ್ಟುವಂತಿದೆ… ಭಾವನಾತ್ಮಕವಾಗಿ ಹೆಣೆದ ಕವನ
ಸುಶಿ