“ಆಂಡ್ರಾಯ್ಡ್ ಪೋನ್ ನನ್ನ ಕೈಗೆ ಬಂದ ನಂತರ ಬದಲಾದ ನನ್ನ ಬದುಕಿನ ಶೈಲಿ” ಡಾ. ದಾನಮ್ಮ ಝಳಕಿ

ವಿಶೇಷ ಲೇಖನ

“ಆಂಡ್ರಾಯ್ಡ್ ಪೋನ್

ನನ್ನ ಕೈಗೆ ಬಂದ ನಂತರ

ಬದಲಾದ ನನ್ನ ಬದುಕಿನ ಶೈಲಿ”

ಡಾ. ದಾನಮ್ಮ ಝಳಕಿ

 ಜೀವನ ಎಂದರೆ ನಿರಂತರ ಕಲಿಕೆ ಪ್ರಕ್ರಿಯೆಯಾಗಿದೆ,  ಹುಟ್ಟಿನಿಂದ ಸಾವಿನವರೆಗೆ ಕಲಿಕೆಯು ಸದಾ ಸಾಗುತ್ತದೆ.  ಕಲಿಕೆಯ ಸಾಧನಗಳಾಗಿ ಕುಟುಂಬ, ಶಾಲೆ, ಸಂಪರ್ಕ ಸಾಧನಗಳಾದ ಪತ್ರಿಕೆ, ರೇಡಿಯೋ, ಸಿನೇಮಾ ಇತ್ಯಾದಿಗಳು ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ. ಆದರೆ ಆಧುನಿಕ ಕಾಲದಲ್ಲಿ ಅಂದರೆ ಇತ್ತೀಚಿಗೆ ಕಂಪ್ಯೂಟರ್‌, ಇಂಟರ್‌ನೆಟ್‌, ಆಂಡ್ರಾಯ್ಡ ಮೋಬೈಲ್‌ಗಳು ಸಹ ಕಲಿಕೆಗೆ ಅವಕಾಶಗಳನ್ನು ಒದಗಿಸುವ ಭಾಗಗಳಾಗಿವೆ. ಅದರಲ್ಲೂ ಸದಾ ಕೈಯಲ್ಲಿರುವ ಆಂಡ್ರಾಯ್ಡ್  ಪೋನ್  ಜನರ ಜೀವನ ಶೈಲಿಯನ್ನೇ ಬದಲಿಸಿದೆ. ಈ ಬದಲಾವಣೆ ಧನಾತ್ಮಕ ಹಾಗೂ ಋಣಾತ್ಮಕವಾಗಿರುವುದನ್ನು  ಕಾಣಬಹುದು. ಅದರಂತೆ ನನ್ನ ಜೀವನದಲ್ಲಿಯೂ ಸಹ  ಈ ಆಂಡ್ರಾಯ್ಡ್  ಪೋನ್ ಸಾಕಷ್ಟು ಬದಲಾವಣೆ ತಂದಿದೆ ಎನ್ನಬಹುದು.
ನಾನು ಚಿಕ್ಕವಳಿದ್ದಾಗ ಕೇವಲ ರೆಡಿಯೋ ಮಾತ್ರ ಇತ್ತು. ತದನಂತರ ಟಿ ವಿ ಗಳು ಎಲ್ಲರ ಮನೆಯಲ್ಲಿ ಬರಲಾರಂಭಿಸಿದವು. ತದನಂತರ ಡೈಲ್‌ ಮಾಡುವ ಪೋನ್‌ ಗಳು ಮನೆಯಲ್ಲಿ ಸದ್ದುಗಳನ್ನು ಮಾಡಲು  ಪ್ರಾರಂಭಿಸಿದವು. ನಾನು ಕಾಲೇಜು ಮೆಟ್ಟಿಲೆರುವಷ್ಟರಲ್ಲಿ ಶ್ರೀಮಂತರ ಕೈಯಲ್ಲಿ ಪೋನ್ಗಳು, ಅಂಡ್ರಾಯ್ಡ ಫೋನ್ಗಳು ಪ್ರಾರಂಭವಾದವು. ಆದರೆ ನನಗೆ ಆಗ ಕೀ ಪ್ಯಾಡ್‌ ಪೋನ್‌ ಗಳು ಸಹ ಪಡೆಯಲು ಆಗುತ್ತದೆಯೋ ಅಥವಾ ಇಲ್ಲವೋ ಎನ್ನುವ ಆತಂಕ ಇತ್ತು.  ಅಷ್ಟರಲ್ಲಿ ಮೊಟ್ಟಮೊದಇತಿಮಿತಿಯಲ್ಲಿರಬೇಕಲ್ಲವೇ‌  ಫೋನ್ ಬಂದ ದಿನ ಸ್ವರ್ಗ ಮೂರೇ ಗೇಣಾಗಿತ್ತು. ಕೇವಲ ಮೇಸೇಜ್‌ ಹಾಗೂ ಕಾಲ್‌ ಮಾಡುವ ಅವಕಾಶವಿರುವ ಆ ಪೋನ್ಗಳ ಬಳಕೆಯನ್ನು ಕಲಿಯಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಆಗ ಪೋನ್‌ ಗಳನ್ನು ಇಟ್ಟುಕೊಳ್ಳುವುದು  ಒಂದು ಪ್ರಿಸ್ಟೆಜ್‌ ಆಗಿತ್ತು ಅಂತೂ ಸುಮಾರು ೪-೫ ವರ್ಷಗಳು ಆ ಪೋನ್‌ ಮೂಲಕ ಎಲ್ಲರಿಗೆ ಮೇಸೆಜ್‌ ಕಳಿಸುವುದು ಹಾಗೂ ಪೋನ್‌ ಮಾಡುವ ಮೂಲಕ ಸಂಪರ್ಕ ಸಾಧಿಸಲು ಅತ್ಯಂತ ಉತ್ತಮ ಅವಕಾಶ ಕಲ್ಪಸಿತ್ತು. ತದನಂತರ ಆಂಡ್ರಾಯ್ಡ್  ಪೋನ್   ಗಳು ಮಾರುಕಟ್ಟೆಯಲ್ಲಿ ಲಗ್ಗೆ ಇಡಲಾರಂಭಿಸಿದವು. ಹಾಗೂ ಕೈಗೆಟುಕುವ ದರದಲ್ಲಿ ಆಂಡ್ರಾಯ್ಡ್  ಪೋನ್  ದೊರೆಯಲಾರಂಭಿಸಿದವು. ಅದರೊಂದಿಗೆ ಕೆಲವು ಕಂಪನಿಯವರು ಇಂಟರ್‌ ನೆಟ್‌ ನ್ನು ಸಹ ಉಚಿತವಾಗಿ ಅಥವಾ ಅತ್ಯಂತ ಕಡಿಮೆ ದರದಲ್ಲಿ ನೀಡಲು ಪ್ರಾರಂಭಿಸಿದವು. ಆಗ ನಾನು ಮೊಟ್ಟಮೊದಲು ಆಂಡ್ರಾಯ್ಡ್  ಪೋನ್ ಖರೀದಿಸಿದೆನು. ಆಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಪ್ರಾರಂಭದಲ್ಲಿ ಅದನ್ನು ಬಳಸಲು ತುಂಬಾ ಹೆಣಗಾಡಬೇಕಾಯಿತು. ಗಂಡನಿಂದ ಸ್ವಲ್ಪ, ಮಕ್ಕಳಿಂದ ಸ್ವಲ್ಪ, ಹೀಗೆ ಆಂಡ್ರಾಯ್ಡ್  ಪೋನ್  ಗಳಲ್ಲಿರುವ ಎಲ್ಲ Option ಗಳ ಬಳಕೆಯನ್ನು  ಕಲಿಯಲು ಪ್ರಾರಂಭಿಸಿದೆನು. ಆದರೂ ಇನ್ನೂ ಕಲಿಯಬೇಕಾಗಿರುವುದು ತುಂಬಾ ಇದೆ ಅನಿಸಿತು. ಅದರಲ್ಲಿ ಅನೇಕ App ಗಳಿವೆ ಅವುಗಳನ್ನು ಹೇಗೆ ಬಳಸುವುದು ಎಂಬುದನ್ನು  ನಮ್ಮ ಶಾಲೆಯಲ್ಲಿ ಎಲ್ಲ ಶಿಕ್ಷಕರು ಮಾತನಾಡುತ್ತಿರುವದನ್ನು ಕೇಳಿ ಸ್ವಲ್ಪ ಕಲಿತೆನು. ಅಷ್ಟರಲ್ಲಿ ಕೊರೋನಾ ಎಂಬ ಕರಿಛಾಯೆ ನಮ್ಮ ದೇಶದಲ್ಲಿ ಕಾಣಿಸಿತು. ಶಾಲೆಗಳು ಲಾಕ್‌ ಡೌನ್‌ ಆದವು. Googal meet, Zoom ಹಾಗೂ Microsoft team ಇತ್ಯಾದಿಗಳ ಮೂಲಕ Online Class ಮಾಡಲು ತಿಳಿಸಿದಾಗ,  ಎಲ್ಲ ವಿದ್ಯಾರ್ಥಿಗಳು ಹಾಗೂ ನಾವು ಒಟ್ಟಿಗೆ ಇದನ್ನು ಕಲಿಯುವುದು ಹಾಗೂ ಬಳಸುವುದನ್ನು ಪ್ರಾರಂಭಿಸಿದೆವು. ಅದರಲ್ಲಿಯೇ ಮಕ್ಕಳಿಗೆ evaluation Sheet ನೀಡುವುದು ಹಾಗೂ Check ಮಾಡಿ ಅಂಕ ಹಾಕುವ ಕಾರ್ಯವನ್ನೂ ಸಹ ಮಾಡಿದೆನು. ಅಲ್ಲದೇ Office ಎಂಬ App ಮೂಲಕ ಅದರಲ್ಲಿಯೇ  PPT ಮತ್ತು Video ಮಾಡುವುದನ್ನೂ ಹಾಗೂ ತರಗತಿಯಲ್ಲಿ ಬಳಸುವದನ್ನೂ ಮಾಡಿದಾಗ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ನಿಷ್ಠಾ ಹಾಗೂ ದೀಕ್ಷಾ ಶೈಕ್ಷಣಿಕ ವೇದಿಕೆಗಳು ಜ್ಞಾನದ ಕಣಜವನ್ನೇ ತೆಗೆದಿಟ್ಟವು. ಅನೇಕ ವೆಬ್‌ ಸೈಟ್‌ ಗಳು ಅದ್ಬುತವಾದ ಮಾಹಿತಿಯನ್ನು ದೊರೆಕಿಸಿಕೊಟ್ಟವು. ನನ್ನ ಶಾಲೆಯ Face book ಹಾಗೂ Blog Accoount ಮೂಲಕ ಎಲ್ಲರಿಗೂ ಪರಿಚಯವಾಗಿ ಶಾಲೆಗೆ ಸಹಾಯ ದೊರೆಯಿತು. ಅಷ್ಟೇ ಅಲ್ಲದೇ Club House ಮೂಲಕ ಜಗತ್ತಿನಲ್ಲಿರುವ ಅನೇಕ ಚರ್ಚಾ ವೇದಿಕೆಯೂ ದೊರೆಯಿತು.  ಹೀಗೆ ಆಂಡ್ರಾಯ್ಡ್  ಪೋನ್ ಮೂಲಕ ತಾಂತ್ರಿಕ ಕ್ರಾಂತಿಯನ್ನೇ ನನ್ನ ಜೀವನದಲ್ಲಿ ಪ್ರಾರಂಭಿಸಿತು. ಪೋನ್‌ ದಲ್ಲಿ ಕನ್ನಡ Typing ಸಹ ಕಲಿತೆನು. ಬೇರೆ ಬೇರೆ ಪ್ರದೇಶಗಳಿಗೆ ಹೋದಾಗ GPS ಬಳಕೆಯನ್ನೂ ಸಹ ಕಲಿತೆನು.. Social media ದ ವಾಟ್ಸ ಆಪ್‌, ಹೈಕ್‌,  ಟೆಲಿಗ್ರಾಮ್‌ ಇತ್ಯಾದಿಗಳ ಮೂಲಕ ಅನೇಕ ಸ್ನೇಹಿತರು ಹಾಗೂ ಹೊಸ ಹೊಸ ಮಾಹಿತಿಯನ್ನು ಪಡೆದೆನು. ಅನೇಕ ಗ್ರುಪ್‌ ಗೆ ಸದಸ್ಯಳಾದೆನು. ಅವು ಜ್ಞಾನದ ಅನಾವರಣಕ್ಕೆ ವೇದಿಕೆಗಳಾದವು. ಉದಾಹರಣೆಗೆ ಸಂಗಾತಿ ಎಂಬ ಗ್ರುಪ್‌ ಲೇಖನ ಹಾಗೂ ಕವಿತೆಗಳನ್ನು ಬರೆಯಲು ಪ್ರೋತ್ಸಾಹಿಸಿದರೆ, ಅಕ್ಕನ ಅರಿವು ಹಾಗೂ ಬಸವ ಅಧ್ಯಯನ ದಂತಹ ಗ್ರುಪ್‌ ಗಳು ಶರಣರ ಜೀವನ ಹಾಗೂ ತತ್ವಗಳನ್ನು ವೈಚಾರಿಕ ಹಾಗೂ ವೈಜ್ಞಾನಿಕ ನೆಲೆಯಲ್ಲಿ ಅರ್ಥೈಸಿಕೊಳ್ಳಲು ಉತ್ತಮ ಅವಕಾಶಗಳನ್ನು ನೀಡಿದವು. ಅಲ್ಲದೇ ವೃತ್ತಿಗೆ ಸಂಬಂಧಿಸಿದ ಗ್ರುಪ್‌ ಗಳು ಅನೇಕ ಆದೇಶ ಹಾಗೂ ಸುತ್ತೋಲೆಗಳು ಕೈಗೆಟುಕುವಂತೆ ಸಿಗತೊಡಗಿದವು. ಅನೇಕ ಗೊತ್ತಿರದ ವಿಷಯಗಳನ್ನು ಕ್ಷಣಾರ್ಥದಲ್ಲಿ GOOGLE ದಲ್ಲಿ ಹುಡುಕಿ ತೆಗೆಯುವ ಮೂಲಕ ಜಗತ್ತೇ ಕೈಯಲ್ಲಿದೆ ಎನಿಸಿತು. ಹೀಗೆ ಅನೇಕ ಅಂಶಗಳು ಧನಾತ್ಮಕವಾಗಿ ನನ್ನ ಜೀವನವನ್ನೇ ಬದಲಾಯಿಸಿದವು.
ಆದರೆ ಈ ಆಂಡ್ರಾಯ್ಡ್  ಪೋನ್ ಗಳು  ಧನಾತ್ಮಕವಾದ ಅಂಶಗಳೊಂದಿಗೆ ಅನೇಕ ಋಣಾತ್ಮಕ ಪ್ರಭಾವವನ್ನೂ ಸಹ ನನ್ನ ಜೀವನದಲ್ಲಿ ಬೀರಿದೆ ಅವುಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು.


1 ಅನೇಕ ಮುಖಾಮುಖಿ ಹಾಗೂ ಭಾವನಾತ್ಮಕ  ಸಂಬಂಧಗಳಿಗೆ ಕತ್ತರಿ ಹಾಕಿ ಸದಾ  ಸಮೂಹ ಮಾಧ್ಯಮದಲ್ಲಿಯೇ ಕಾಲ ವ್ಯಯ ಮಾಡುತ್ತಿದ್ದೇನೆ ಎಂಬ ಭಾವ ಸದಾ ಕಾಡುತ್ತದೆ.
2. ಅನೇಕ Social ಮಾಧ್ಯಮಗಳು ಅಸಂಬದ್ಧ ವಿಚಾರಗಳ ವೇದಿಕೆಯಾಗಿ ಹಾದಿಯನ್ನು ತಪ್ಪಿಸುವ ಕಾರ್ಯ ಮಾಡುವದನ್ನು ಅಲ್ಲಗಳೆಯುವಂತಿಲ್ಲ.
3. ಮೊದಲು ಕೆಲವು ಪೋನ್‌ ನಂಬರ ಗಳು ತಟ್ಟನೇ ಹೇಳುತ್ತಿದ್ದೆನು ಆದರೆ ಈಗ ನನ್ನ ನಂಬರ ಸಹ ನನಗೆ ನೆನಪಿಲ್ಲ
4. ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ.
5 ಬರವಣಿಗೆಯು ಸಹ ಕುಂಠಿತವಾಗಿದೆ ಎಲ್ಲ ಶಬ್ದಗಳಲ್ಲೂ Short cutting ಹುಡುತ್ತೇವೆ. ಶಬ್ದಬಂಡಾರ ಸಹ ಕಡಿಮೆ ಆಗುತ್ತಿದೆ.
6 ಸಾಮಾನ್ಯ ಜ್ಞಾನ ಕಡಿಮೆಯಾಗುತ್ತಿದೆ ಎಲ್ಲದ್ದಕ್ಕೂ GOOGLE ನ್ನು ಅವಲಂಬಿಸುವಂತಾಗಿದೆ.
7 ಸಮೂಹ ಮಾಧ್ಯಮದ ಅತೀ ಬಳಕೆಯಿಂದ ಯೋಗ, ವಾಕಿಂಗ್‌ ಗಳನ್ನು ಬಿಟ್ಟು ಆರೋಗ್ಯ ಹದಗೆಡುತ್ತಿದೆ.
8 ಸದಾ ಪೋನ್‌ ನೋಡುವದರಿಂದ ಕಣ್ಣಿಗೆ ಸಂಬಂಧಿಸಿದ ತೊಂದರೆಗೆ ಅಹ್ವಾನಿಸಿದಂತಾಗಿದೆ.
9. ಮೆದುಳು ಹಾಗೂ ಆರೋಗ್ಯದ ಮೇಲೆ ಆಂಡ್ರಾಯ್ಡ್  ಪೋನ್ ಅಪಾಯಕಾರಿ ಪರಿಣಾಮ ಬೀರುತ್ತಿದೆ.
10. ಇತ್ತೀಚಿಗೆ ಮೇಲಿಂದ ಮೇಲೆ ಆಂಡ್ರಾಯ್ಡ್  ಪೋನ್ ನೋಡುವ ಹವ್ಯಾಸ ವ್ಯಸನ ರೂಪ ಪಡೆಯುತ್ತಿದೆ ಎಂಬ ಭಾವನೆ ಮೂಡುತ್ತಿದೆ.
11 ಕೆಲವು ಸಂದರ್ಭಗಳಲ್ಲಿ Youtube ವೀಕ್ಷಿಸುವಾಗ ಅಸಹ್ಯಕರ ವಿಡಿಯೋಗಳು ಬಂದು ಮುಜುಗರ ಉಂಟುಮಾಡುತ್ತಿವೆ.
12 E-Banking ದಂತಹ ಸೇವೆಗಳು ಕೆಲವು ಸಾರಿ ಅಪಾಯ ತಂದೊಡ್ಡಿ ಅಪಾರ ಪ್ರಮಾಣದ ಹಣ ಕಳೆದು ಹೋಗುವ ಸಂಭವ ಉಂಟುಮಾಡುತ್ತಿವೆ.
13 E-Shopping ಮೂಲಕ ಕಳಪೆ ವಸ್ತುಗಳನ್ನು ಪಡೆದು ತೊಂದರೆಗೆ ಒಳಪಟ್ಟಿದ್ದುಂಟು.
14 ಸದಾ ಕಾಲ ಆಂಡ್ರಾಯ್ಡ್  ಪೋನ್ ದಲ್ಲಿ ಇರುವುದರಿಂದ ಬಹಳಷ್ಟು ವೇಳೆ ವ್ಯಯವಾಗುತ್ತಿದೆ.
15. ಗುಬ್ಬಿಗಳ ಸಂತತಿಯ ವಿನಾಶಕ್ಕೆ ಈ  ಆಂಡ್ರಾಯ್ಡ್  ಪೋನ್ ಗಳಿಂದ ಹೊರಸೂಸುವ ವಿಕಿರಣಗಳೇ ಕಾರಣವಾಗಿದೆ.


ಒಟ್ಟಾರೆ ಈ ಆಂಡ್ರಾಯ್ಡ್  ಪೋನ್ ಗಳನ್ನು ಎಷ್ಟು ಬೇಕೋ ಅಷ್ಟೇ ಬಳಸಿ ಅದರ ಸದ್ಬಳಕೆ ಮಾಡಿಕೊಳ್ಳಬೇಕು. ಅತಿಯಾದರೆ ಅಮೃತವು ವಿಷ ಎಂಬಂತೆ ಅತೀಯಾದ ಆಂಡ್ರಾಯ್ಡ್  ಪೋನ್ ಬಳಕೆ ಆರೋಗ್ಯಕ್ಕೆ ಹಾಗೂ ಜ್ಞಾನದ ಮೇಲೆ ವ್ಯತಿರಿಕ್ತ ಪ್ರಭಾವ ಉಂಟು ಮಾಡಬಹುದು. ಆದ್ದರಿಂದ ಆಂಡ್ರಾಯ್ಡ್ ಪೋನ್  ಬಳಕೆ ಇತಿಮಿತಿಯಲ್ಲಿರಬೇಕಲ್ಲವೇ?


ಡಾ.ದಾನಮ್ಮ ಝಳಕಿ

Leave a Reply

Back To Top