ಅಂಕಣ ಬರಹ

ಸಂವೇದನೆ- 2

ಭಾರತಿ ನಲವಡೆ

ಮೌಢ್ಯತೆ

ಮುಟ್ಟಾದ ರತ್ನಳನ್ನು ಏನನ್ನೂ ಅರಿಯದ ಅವಳ ಮಗ ಗೋಪಿ ತನ್ನ ಅಕ್ಕ ವಾಣಿ ತನಗೆಆಡಲು  ಆಟಿಕೆಗಳನ್ನು ಕೊಡುತ್ತಿಲ್ಲ ಎಂದು ನೀನಾದರೂ ಹೇಳಮ್ಮಾ ಬಾ ಎಂದು ಕೈ ಹಿಡಿಯಲು ಬಂದಾಗ ಅಲ್ಲೇ ಇದ್ದ ಅವಳ ಅತ್ತೆ ಕಮಲಮ್ಮ ” ಏಯ್ ಗೋಪಿ ಅಮ್ಮನನ್ನು ಮುಟ್ಟಬೇಡ ಅವಳನ್ನು ಕಾಗೆ ಮುಟ್ಟಿದೆ”ಎಂದು ಅವನನ್ನು ತಡೆದಳು. ಕಮಲಮ್ಮ ಕಟ್ಟಾ ಸಂಪ್ರದಾಯವಾದಿ.ಪ್ರತಿ ತಿಂಗಳು ಸೊಸೆ ರತ್ನ ಮುಟ್ಟಾದಾಗ ಆ ಮೂರು  ದಿನ ಅವಳಿಗೆ  ಒಂದು ಚಾಪೆ,ದಿಂಬು ಒಂದು ತಾಟು,ಲೋಟ ಹೊದಿಯಲು ತೆಳುವಾದ ಹಳೆಯ ಚಾದರ ಇವಿಷ್ಟನ್ನು ಕೊಟ್ಟು ದೇವರ ಕೋಣೆಯಿಂದ ತುಸು ಅಂತರವಿದ್ದ ಚಿಕ್ಕ ಸ್ಟೋರ  ರೂಮಲ್ಲಿ ಇರಬೇಕಾಗುತ್ತಿತ್ತು. ಕೆಲವೊಮ್ಮೆ ವಾಣಿ ಅಜ್ಜಿ ನಿನಗೇಕೆ?ಕಾಗೆ ಮುಟ್ಟುವದಿಲ್ಲ ,ಬರೀ ಅಮ್ಮನಿಗೇಕೆ ಮುಟ್ಟುತ್ತೆ ಎಂಬ ಮುಗ್ಧ ಮನದ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡಿ ಚಕ್ಕುಲಿ ಕೊಟ್ಟು ಅಭ್ಯಾಸ ಮಾಡಿ ಆಡಿಕೋ ಹೋಗು ಎಂದು ವಿಷಯಾಂತರ ಮಾಡುತಿದ್ದರು.
ಕಮಲಮ್ಮನಂತ ಸಂಪ್ರದಾಯಸ್ಥ  ಕುಟುಂಬದ ಹೆಂಗಸಾದರೆ ಹೇಗೋ! ಸೊಸೆಗೆ ಮೂರುದಿನ ತಿಂಡಿ ,ಊಟವನ್ನು ಕಾಲಕಾಲಕ್ಕೆ ಪೂರೈಸುತ್ತಿದ್ದರು.ಆದರೆ ಈ ಋತುಸ್ರಾವಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿನ ಬಹುತೇಕ ಸಮುದಾಯಗಳಲ್ಲಿ ಋತುಸ್ರಾವವನ್ನು ‘ಮೈಲಿಗೆ’ಎಂದು ನಂಬಿ ಮಹಿಳೆ ಮೇಲೆ ಇನ್ನಿಲ್ಲದಂತಹ ನಿರ್ಬಂಧಗಳನ್ನು ಹೇರಿ,ಅವಳನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳಲಾಗುತ್ತದೆ.

ಋತುಸ್ರಾವದ ಸಂದರ್ಭದಲ್ಲಿ ಮನೆಯ ಎಲ್ಲಾ ಕಾರ್ಯಗಳಿಂದ ಆಕೆಯನ್ನು ದೂರವಿರಿಸಿ ಅಜ್ಞಾತವಾಗಿ ಕಾಲಕಳೆಯುವಂತೆ ಮಾಡಲಾಗುತ್ತದೆ.ಕೆಲವು ಸಮುದಾಯಗಳಲ್ಲಂತೂ ಮನೆಅಲ್ಲ, ಊರಿನಿಂದಲೇ ಆಚೆಹಾಕಿ ನಾಗರೀಕ ಸೌಲಬ್ಯಗಳಿಂದ ವಂಚಿಸಲ್ಪಟ್ಟು ಏಕಾಂಗಿ ಬದುಕನ್ನು ಎಲ್ಲಾ ನೋವುಗಳನ್ನು ನುಂಗಿ ಸಹಿಸುವ ಆ ಮೂರು ದಿನಗಳ ನರಕಯಾತನೆ ಯಾರಿಗೂ ಬೇಡ.ಇಂದಿಗೂ ಕೂಡ ಕಾಡುಗೊಲ್ಲ ಸಮುದಾಯದಲ್ಲಿ ಋತುಮತಿಯಾದವರನ್ನು ಊರಿನಿಂದ ಹೊರಗೆ ಮರದ ರೆಂಬೆ ಕೊಂಬೆಗಳಿಂದ ತಾತ್ಕಾಲಿಕವಾಗಿ ನಿರ್ಮಾಸಾದ ಗುಡಿಸಲಿನಲ್ಲಿ ಐದು  ದಿನಗಳ ಕಾಲ ಇರಿಸಲಾಗುತ್ತದೆ.ಆಕೆಯನ್ನು ಯಾರೂ ಮುಟ್ಟಿಸಿಕೊಳ್ಳದೇ ದೂರದಿಂದಲೇ ಅಗತ್ಯವಾದ ಸಾಮಗ್ರಿಗಳನ್ನು ಪೂರೈಸಿ ಅಷ್ಟೂ ದಿನಗಳು ಏಕಾಂಗಿಯಾಗಿ ಕಾಲಕಳೆವಂತೆ ನೋಡಿಕೊಳ್ಳಲಾಗುತ್ತದೆ.ಆಕೆಯ ವಾಸೊತವ್ಯಧ ತಾತ್ಕಾಲಿಕ ಗುಡಿಸಲಿನಿಂದ ದೂರದಲ್ಲಿ ಮನೆಯ ಯಾರಾದರೂ ರಾತೊರಿಯ ವೇಳೆಕಾವಲು ಕಾಯುತ್ತಾರೆ,ಆದರೂ ಯಾವುದೇ ಕಾರಣಕೊಕೂ ಆಕೆಯನ್ನು ಮುಟ್ಟಿಸಿಕೊಳ್ಳದಂತೆ ಮೌಢ್ಯತೆಯ ಆಚರಣೆಯನ್ನು ಪೂರೊಣಗೊಳಿಸಲಾಗುತ್ತದೆ.

ಆಚರಣೆಗಳು ಸಂಪ್ರದಾಯದೊಂದಿಗೆ ತಳುಕು ಹಾಕಿಕೊಂಡಿರುವುದು ಒಂದು ಮುಖ್ಯ ಕಾರಣ.ಋತುಸ್ರಾವವನ್ನು ,ಮಲೀನ, ಅಥವಾ ‘ಮೈಲಿಗೆ’ ಎಂದು ತಮ್ಮ ಕುಲದೇವರನ್ನು ಮೈಲಿಗೆಯಿಂದ ಕಾಪಾಡಬೇಕಾದರೆ ಆಚರಣೆ ಸೂಕ್ತ ಎಂಬ ಭಾವನೆ  ಇದೆ.ಹೀಗೆ ಋತುಸ್ರಾವದ ಮೌಢ್ಯತೆ ಬೇರೂರಿ ಜೀವಂತವಾಗಿರಲು ಕಾಕತಾಳಿಯ ಘಟನೆಗಳನ್ನು ಇದಕ್ಕೆ ಅನ್ವಯಿಸುವುದೇ ಕಾರಣವಾಗಿದೆ.ಮಹಿಳೆ ಮೇಲಿನ ಕಟ್ಟುಪಾಡು ಯಾವುದಾದರೂ ಕಾರಣಕ್ಕೆ ಸಡಿಲಗೊಂಡು ಅದೇ ಸಂದರ್ಭದಲ್ಲಿ ಏನಾದರೂ ತೊಂದರೆ ತಾಪತ್ರಯಗಳು ತಲೆದೋರಿದರೆ ‘ಕಟ್ಟುಪಾಡುಗಳನ್ನು ಮುರಿದದ್ದಕ್ಕೆ ಹೀಗಾಯಿತು’ ಎಂದು ಆರೋಪಿಸಿ ಅದರ ಹೊಣೆಯನ್ನು ಆಕೆಯ ಮೇಲೆ ಹೋರಿಸಲಾಗುತ್ತದೆ.
ಇದು ಪ್ರಕೃತಿ ನಿಯಮವಾದರೂ  ತಪಿತಸ್ಥ ಭಾವವನ್ನು ಹುಟ್ಟುಹಾಕುವ ಮನೋಧೋರಣೆ ಸಲ್ಲ.ಈ ಮೌಢ್ಯತೆಯ ಕಾರಣ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ  ಕಾಡುಗೊಲ್ಲ ಜನಾಂಗದ ಅನೇಕ ಹೆಣ್ಣುಮಕ್ಕಳು ತಮ್ಮ ಗರ್ಭಕೋಶ ತೆಗೆಸಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿರುವದನ್ನು ಸ್ಮರಿಸಿಕೊಳ್ಳಬಹುದು. ಹೀಗೆ ಪ್ರತಿಯೊಂದು ಸಮುದಾಯಕ್ಕೆ ಅದರದೇ ಆದ ಕಟ್ಟುಪಾಡುಗಳಿದ್ದೆ ಇರುತ್ತವೆ.ಇಂದಿನ ವೈಜ್ಞಾನಿಕ ಮತ್ತು ತಾಂತ್ರಿಕ ಭರಾಟೆಯ ದಿನಗಳಲ್ಲಿ ಜಾಗತೀಕರಣದ ಪ್ರಭಾವದಿಂದ ಅವಿಭಕ್ತ ಕುಟುಂಬಗಳು ಕಡಿಮೆಯಾಗಿ ಒಂಟಿ ಕುಟುಂಬಗಳು  ತಲೆ ಎತ್ತಿದ ಪರಿಣಾಮವೋ ಏನೋ ಈ ಮೌಢ್ಯತೆಯ ಪ್ರಮಾಣ ಕಡಿಮೆಯಾಗುತ್ತಲಿದೆ.ಅವಿಭಕ್ತ,ಕುಟುಂಬಗಳಲ್ಲಿ ಈ ಮೈಲಿಗೆ ಎಂಬ ಕಾರಣಕ್ಕಾಗಿ ಅವಳು ಮೂರು ದಿನ ಒಂದೆಡೆ ಕುಳಿತುಕೊಂಡರೆ ಉಳಿದ ಸದಸ್ಯರು ಇತರ ಕಾರ್ಯಗಳನ್ನು ನಿರ್ವಹಿಸಿ ಅವಳಿಗೆ ಅವಳ ಕುಟುಂಬಕ್ಕೆ ಕೊರತೆಯಾಗದಂತೆ ವ್ಯವಸ್ಥೆ ಮಾಡುತ್ತಿದ್ದರು.ಈಗ ಒಂಟಿ ಕುಟುಂಬದಲ್ಲಿ ಕಷ್ಟ  ಸಾಧ್ಯ. ಉದ್ಯೋಗಸ್ಥ ಮಹಿಳೆಯರಿಗಂತೂ ಈ ಆಚರಣೆ ದೇವರ ಕೋಣೆಪ್ರವೇಶ ನಿಷೇಧ, ಪ್ರತ್ಯೇಕ ಹಾಸಿಗೆ ಬಿಟ್ಟರೆ ಅವಳಿಗೆ ಅಲ್ಲಿ ವ್ಯವಸ್ಥೆ ಮಾಡಲು ಯಾರೂ ಇರುವುದಿಲ್ಲ.ವಯಸ್ಸಾದ ಅತ್ತೆ ಮಾವ ಉದ್ಯೋಗಕ್ಕೆ ಹೋಗುವ ಪತಿ, ಶಾಲೆಗೆ ಹೋಗುವ ಮಕ್ಕಳು ಹೀಗೆ ಈ ಒತ್ತಡಗಳ ಮಧ್ಯೆ ಅವಳು ಕಳೆದುಹೋಗಿರುತ್ತಾಳೆ.ಅವಳ ಪರಿಸ್ಥಿತಿಯನ್ನರಿತು ಆ ದಿನಗಳಲ್ಲಿ ಮನೆಗೆಲಸದಲ್ಲಿ ಪತಿ ಮಹಾಶಯ ತುಸು ಸಹಾಯ ಮಾಡಿದರೆ ಕುಂದೇನಿಲ್ಲ.ಸಹಾಯ ಮಾಡುವವರು ಇಲ್ಲವೆಂದಿಲ್ಲ ಕೆಲ ಪುರುಷರು ಕೂಡ  ಎಷ್ಟೇ ಸಾಕ್ಷರರಾಗಿದ್ದರೂ ಅಜ್ಜನೆಟ್ಟ ಆಲದ ಮಯಕ್ಕೆ ನೇತುಬೀಳು ರಿರುತ್ತಾರೆ.ಆ ದಿನಗಳಲ್ಲಿ ಮಹಿಳೆಗೆ  ಪೌಷ್ಠಿಕಾಂಶಗಳ ಅವಶ್ಯಕತೆ ಇರುತ್ತದೆ.ಇದನ್ನರಿತು ತಮ್ಮ ಕುಟುಂಬದ ಕಣ್ಣಾದ ಈ ದೇವತೆಗೆ ಈ ಸಂದರ್ಭದಲ್ಲಾದರೂ ಮಾನವೀಯತೆಯ ನೆರವಿರಲಿ.

ಮೌಢ್ಯತೆ ಇರುವ ಕಡೆ ಜಾಗೃತಿ ಮೂಡಿಸಲಾಗುತ್ತಿದ್ದರೂ ಕೆಲವೊಂದು ಕಡೆ ಆಚರಿಸಲಾಗುತ್ತಿದೆ.
ಶಿಕ್ಷಣದ ಪ್ರಭಾವದಿಂದ ಮೌಢ್ಯಾಚರಣೆಗಳಿಂದ ಹೊರ ಬರುವಂತೆ ಮಾಡಬಹುದು.ಪೂರ್ವ ಜನ್ಮದ ಕರ್ಮ,ಹಣೆಬರಹ,ಹೆಣ್ಣಾಗಿ ಹುಟ್ಟಬಾರದಿತ್ತು ಇವೇ ಮೊದಲಾಗಿ ಹಳಿಯುತ್ತ ಕೂರದೇ ಮಹಿಳೆ ಅರಿವಿನ ಕಡೆಗೆ ಧಾವಿಸ ಬೇಕಾಗಿದೆ.ಭಯದ ಮೂಲ ಅಜ್ಞಾನ .ನಾವು ನಿರ್ಭಯರಾಗಿ ಪ್ರಗತಿಯ ಕಡೆ ಆತ್ಮವಿಶ್ಯಾಸದಿಂದ ಅಡಿ ಇಡಬೇಕೆಂದರೆ ಜ್ಞಾನ ಸಂಪಾದಿಸಬೇಕು.ಆದ್ದರಿಂದ ಮೌಢ್ಯದ ತಿಮಿರಕ್ಕೆ ಶಿಕ್ಷಣದ ಹಣತೆಯೆ ಬಹು ಮುಖ್ಯ ಪರಿಹಾರ ಅಲ್ಲವೇ?


ಭಾರತಿ ನಲವಡೆ

ಭಾರತಿಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡಶಾಲೆಮಂಗಳವಾಡದಲ್ಲಿಸಹಶಿಕ್ಷಕಿಯಾಗಿಕಾರ್ಯನಿರ್ವಹಿಸುತ್ತಿದ್ದಾರೆ.ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾಸಾಹಿತ್ಯಪುರಸ್ಕಾರ2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆಸಲ್ಲಿಸುತ್ತಿದ್ದಾರೆ

Leave a Reply

Back To Top