ಶಂಕರಾನಂದ ಹೆಬ್ಬಾಳ ಕವಿತೆ

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ಕವಿತೆ

ಮೋಡದ ಮರೆಯಲ್ಲಿ ಅಡಗಿದ ಚಂದಿರನ
ಕರೆಯುವೆ ಏಕೆ
ಕಾಡುವ ಕನಸಿನಲಿ ಒಲವಿನ ಪ್ರಿಯಕರನ
ಬೆರೆಯುವೆ ಏಕೆ

ಭಾವಗಳು ಹರಿಣಿಯಂತೆ ಕಂಗೆಟ್ಟು ಓಡುತ್ತ
ನಿಂತಿದೆಯಲ್ಲ ಇಂದು
ಹೂವಿಗೆ ದುಂಬಿಯಾಗಿ ಎದೆಯ ಬನದಲಿ
ಮೆರೆಯುವೆ ಏಕೆ

ಹೊನ್ನಿನ ಮಹಲಿನಲಿ ಪ್ರೇಮದ ತಲ್ಪದಲಿ
ಕಾದವಳು ನೀನು
ಸನ್ನೆಯ ಮಾಡುತ‌ ಕಂಗಳಿನ ನೋಟದಲಿ
ಕೊರೆಯುವೆ ಏಕೆ

ಗಗನದ ಅಂಚಿನಲಿ ಧೃವತಾರೆಯ ತೆರದಲಿ
ಮೂಡಲೆ ಇಲ್ಲ
ನಗುನಗುತ ನೇಹದ ನುಡಿಯಾಡಿ ಪ್ರೀತಿಯ
ಎರೆಯುವೆ ಏಕೆ

ತುಷಾರದ ಸೋನೆಯ ಹನಿಗಳಂತೆ ಅಭಿನವನ
ಪದಗಳು ಉದುರಿವೆ
ನಿಶಾಕಾಲದಿ ಸುಖದ ಸ್ವಪ್ನಗಳಲಿ ನೋವನು
ತೆರೆಯುವೆ ಏಕೆ


ಶಂಕರಾನಂದ ಹೆಬ್ಬಾಳ

Leave a Reply

Back To Top