ಪ್ರಮೋದ ಜೋಶಿಯವರ ಕವಿತೆ-ಜಾತಿ

ಕಾವ್ಯ ಸಂಗಾತಿ

ಪ್ರಮೋದ ಜೋಶಿ

ಜಾತಿ

ಜಾತಿ ಜಾತಿ ಜಾತಿ ಎಂದು
ಏಕೆ ನೀನು ಒರಲುವೆ
ಅಳಿದು ಹೋಗುವ ದೇಹಕೆ
ಜಾತಿ ಗೋಡೆ ಕಟ್ಟಿದೇಕೆ

ಹುಟ್ಟಿ ಬರುವ ರೀತಿ ಒಂದೆ
ಸಾವು ತರುವ ವೇದನೆ ಒಂದೆ
ಯಾವ ಜಾತಿಯಾದರೇನು
ಅಂತ್ಯಕ್ರಿಯೆಗೆ ಜಾಗ ಒಂದೆ

ತಮ್ಮ ಸ್ವಾರ್ಥ ಕೆಲಸಕ್ಕೆಂದು
ಜಾತಿ ಗೋಡೆ ಕಟ್ಟಿಹರು
ಗೋಡೆ ಕಟ್ಟಿದಂಥ ಅವರು
ಅಳಿಸಲಿಂದು ಬರುವರೇನು

ಅವರ ಹಾದಿ ಹಿಡಿದ ನೀನು
ಯಾವ ಸಾಧನೆ ಗೈದಿಹೆ
ನನ್ನ ಜಾತಿ ಮೇಲು ಎಂದು
ಮನುಕುಲವನೇ ಮರೆತಿರುವೆ

ಜಾತಿ ಗೋಡೆ ಕಿತ್ತುಹಾಕಿ
ಎಲ್ಲ ಜಾತಿ ಒಂದೆ ಎಂದು
ಏಕತೆಯಿಂದ ಬಾಳಿದಾಗ
ಉಳಿಯುದಣ್ಣ ನಿನ್ನ ಖ್ಯಾತಿ

ಖ್ಯಾತಿಗೆಂದು ಬಾಳದೆ
ಹೃತ್ಪೂರ್ವದಿ ಬಾಳಿದಾಗ
ಮುಂಬರುವ ಪೀಳಿಗೆಗೆ
ನೀನಾಗುವೆ ಉದಾಹರಣೆ

ಆಗಾಗುವುದು ಸಮಾಜ ಸುಧಾರಣೆ
ಜಾತೀಯ ಉಚ್ಛಾಟನೆ


ಪ್ರಮೋದ ಜೋಶಿ

Leave a Reply

Back To Top