ಆಂಡ್ರಾಯ್ಡ್ ಪೋನ್ ಮತ್ತು ನಾನು-ನಿಶ್ಚಿತ.ಎಸ್

ವಿಶೇಷ ಲೇಖನ

ನಿಶ್ಚಿತ.ಎಸ್

ಆಂಡ್ರಾಯ್ಡ್ ಪೋನ್ ಮತ್ತು ನಾನು

1)”ಆಂಡ್ರಾಯ್ಡ್  ಪೋನ್ ನನ್ನ ಕೈಗೆ ಬಂದ ನಂತರ ಬದಲಾದ ನನ್ನ ಬದುಕಿನ ಶೈಲಿಯನ್ನು ಈ ದಿನ ನಾ ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ….
 ನನ್ನ ಕೈಗೆ ಮೊದಲು ಹ್ಯಾಂಡ್ರಾಯ್ಡ್ ಫೋನ್ ಬಂದಿದ್ದೆ ಸೆಕೆಂಡ್ ಪಿಯುಸಿನಲ್ಲಿ ನಾನು ಓದುತ್ತಿದ್ದಾಗ, ಆಗ ಅಷ್ಟೊಂದು ಈ ಫೋನಿನ ಆಳ ನನಗೆ ತಿಳಿದಿರಲಿಲ್ಲ ನಾನು ಪಿಯುಸಿಯಲ್ಲಿ ಓದಿದ್ದಾಗ ನನ್ನ ಅಕ್ಕ ಹೊಸ ಫೋನ್ ತೆಗೆದುಕೊಂಡ ಕಾರಣ ಅವಳ ಹಳೆಯ ಫೋನನ್ನು ನನಗೆ ಕೊಟ್ಟಿದ್ದಳು ಸ್ಯಾಮ್ಸಂಗ್ ಫೋನ್,, ನಾನು ಆ ಫೋನನ್ನು ಒಳ್ಳೆಯ ಅಂಕವನ್ನು ಪಡೆಯಲು ಬೇಕಾದ ಮಾಹಿತಿಯನ್ನು ಮಾತ್ರ ನೋಡುತ್ತಿದ್ದೆ.. ಅದನ್ನ ನನ್ನ ಪಿಯುಸಿ ಮುಗಿದ ಮೇಲೆ ಬಳಸುತ್ತಿದ್ದಾಗ ಏನೋ ಖುಷಿ,, ಏನೋ ಉತ್ಸಾಹ ,,ಏನೋ ಗೌರವ ಎಲ್ಲವೂ ಮೂಡಿತ್ತು..
 ವಾಟ್ಸಾಪ್, ಫೇಸ್ ಬುಕ್ ಎರಡನ್ನು ಓಪನ್ ಮಾಡಿ ಪರಿಚಯ ಇದ್ದವರಿಗೆ ಮಾತ್ರ ಮೆಸೇಜ್ ಕಳುಹಿಸಿ, ಸೆಲ್ಫಿ ತೆಗೆದುಕೊಂಡು, ಆಗ ಸ್ಟೇಟಸ್ ಇರಲಿಲ್ಲ ಬರಿ ಡಿಪಿ ಆ ಡಿಪಿ ಗಾಗಿ ಫೋಟೋ ತೆಗೆದು ಎಷ್ಟು ದಿನ ಆ ಖುಷಿಯ ನನಸಿಕೊಂಡರೆ ಏನೋ ಒಂದು ತರ ನಗು ಮೂಡುತ್ತೆ,, ಆಗಲು ಅಷ್ಟೊಂದು ಫೋನಿನ ಬಗ್ಗೆ ತಿಳಿದಿರಲಿಲ್ಲ ,ಆನಂತರ ಸ್ವಲ್ಪ ದಿನಗಳ ಕಾಲ ಇನ್ನೊಂದು ಫೋನ್ ಹಳೆ ಫೋನ್ ಗಿಂತ ದೊಡ್ಡದಾದ ಇನ್ನೊಂದು ಫೋನ್ ನಮ್ಮ ಮಾವ ಕೊಟ್ಟರು,, ಆಗ ಒಂದು ದೊಡ್ಡದಾದ ರೀತಿಯೆ ನನ್ನ ಭಾವನೆಗಳು ಬದಲಾಯಿತು,, ಆಗ ನಾನು ಡಿಗ್ರಿ ಓದುತ್ತಿದ್ದೆ ನಮ್ಮ ಕಾಲೇಜಲ್ಲಿ ಫೋನ್ ಅಲೋ ಇರಲಿಲ್ಲ,,ಆದರೂ ತೆಗೆದುಕೊಂಡು ಹೋಗಿ ಫ್ರೆಂಡ್ಸ್ ಬೈಕ್ ಡಿಕ್ಕಿಯಲ್ಲಿ ಇಡುತ್ತಿದ್ದಿದ್ದು,, ಹಾಗೂ ಒಂದು ಸಾರಿ ಬ್ಯಾಗಲ್ಲಿ ಹಾಕಿಕೊಂಡು ಚೆಕಿಂಗ್ ಅವರು ಬಂದರು ಶೂ ಒಳಗೆ ಹಾಕಿಸಿದ್ದು ತುಂಬಾ ನಗು ತಂದ ಸಂಗತಿ….


ಆ ನಂತರ ವಾಟ್ಸಾಪ್ ಅಲ್ಲಿ ತುಂಬಾ ಮುಳುಗುತ್ತಿದ್ದೆ ಬಂಧು-ಬಳಗದವರೆಲ್ಲ ಕಾಂಟಾಕ್ಟ್ ಆದ್ರೂ ಗ್ರೂಪ್ಗಳಾಯ್ತು ಚಾಟಿಂಗ್ ಚಾಟಿಂಗ್ ಅಂತ ಗ್ರೂಪಲ್ಲಿ ಎಲ್ಲರ ಮೆಸೇಜು ಚೆನ್ನಾಗಿ ಬರುತ್ತಿತ್ತು… ಸಂಬಂಧದಲ್ಲಿ ಗೊತ್ತಿಲ್ಲದವರೆಲ್ಲ ಪರಿಚಯವಾದರೂ ,ಆತ್ಮೀಯತೆ ಬೆಳೆಯಿತು.. ಫೇಸ್ಬುಕ್ ಅಕೌಂಟ್ ಕ್ರಿಯೇಟ್ ಆಯ್ತು ಯಾರ್ಯಾರು ರಿಕ್ವೆಸ್ಟ್ ಕಳಿಸಿದ್ರು ನಾನು ಅಕ್ಸೆಪ್ಟ್ ಮಾಡ್ಲಿಲ್ಲ ಗೊತ್ತಿರೋರು ಮಾತ್ರ ಅಕ್ಸೆಪ್ಟ್ ಮಾಡಿಕೊಂಡಿದ್ದು ಅಲ್ಲೂ ಎಂದಿಗೂ ನಾನು ನನ್ನ ಮಿತಿ ಮೀರಿಯೇ ಇಲ್ಲ ,,ಗೊತ್ತಿದ್ದವರಿಗೆ ಮಾತ್ರ ಮೆಸೇಜ್ ಫೋನ್ ಹಾಗೂ ನನಗೆ ಫೋಟೋ ಅಂದರಂತೂ ತುಂಬಾ ಹುಚ್ಚು ಅಂತಾನೆ ಹೇಳಬಹುದು,  ಕೆಲವು ಜನ ಹಾಗೆ ಅಂದುಕೊಳ್ಳುತ್ತಾರೆ,, ಆದರೆ ಅವರಿಗೆ ಏನು ಗೊತ್ತು ನಾನು ಸಂಭ್ರಮದ ಖುಷಿಗಳನ್ನ ನೆನಪಿನ ಅಂಗಳದಲ್ಲಿ ಛಾಯಾಚಿತ್ರಗಳಿಂದ ಸರಿ ಮಾಡುತ್ತೇನೆಂದು ಅದರ ಕಲರವವೇ ಬೇರೆ. ಆ ನೆನಪೇ ಮಧುರ ಬಂಧು ಬಳಗದವರ ಜೊತೆ ಸೇರಿ ಮದುವೆ, ಉತ್ಸವಗಳಲ್ಲಿ ನಮ್ಮನ್ನ ಹೆಚ್ಚು ಖುಷಿಯಂದಿರಿಸುತಿದ್ದೆ ಈ ಫೋನು ನಾವು ಬೇಕಾದರೆ ಫೋಟೋ ತೆಗೆದುಕೊಂಡು ಅದನ್ನ ವಾಟ್ಸಪ್ ಸ್ಟೇಟಸ್ ಅಲ್ಲಿ ಹಾಕಿ ಬೇಕಾದವರು ಕೊಡುವ ಕಮೆಂಟ್ಗಾಗಿ ಕಾದು ಆ ಕಮೆಂಟನ್ನು ನೋಡಿದಾಗ ನಮ್ಮ ಮೊಗದಲ್ಲಿ ಮೂಡುವ ನಗು ಮಂದಹಾಸದ ಪರಿಯೇ ಬೇರೆ.. ಆನಂತರ ಫೋನ್ ಕೆಟ್ಟೋಯ್ತು ಒಂದು ವರ್ಷಗಳ ಕಾಲ ಫೋನನ್ನು ಬಳಸಲೇ ಇಲ್ಲ ಬೇಕಾದಾಗ ಮಾತ್ರ ಅಪ್ಪ ಫೋನನ್ನು ಸ್ವಲ್ಪ ಬಳಸುತ್ತಿದ್ದೆ ಆನಂತರ ಹೊಸದಾಗಿ ನಮ್ಮ ಅಕ್ಕ ಒಂದು ಫೋನನ್ನು ಕೊಡಿಸಿದಳು. ಆಗ ನನ್ನ ನಿಜವಾದ ಜರ್ನಿ ಸ್ಟಾರ್ಟ್ ಆಯ್ತು ಫೋನಲ್ಲಿ ಬರಿ ವಾಟ್ಸಪ್ ಅನ್ನು ಅದು ಓದಿ ಗೋಸ್ಕರ ಸ್ಟೇಟಸ್ ಗೋಸ್ಕರ ಬಳಸುತ್ತಿರುವೆ ಇನ್ಸ್ಟಾಗ್ರಾಮ್ ಫೇಸ್‌ಬುಕ್ ಎಲ್ಲವನ್ನು ಬಿಟ್ಟುಬಿಟ್ಟೆ..
ಹಾಗೆ ಈ ಫೋನು ಬಂದ ಮೇಲೆ ನನ್ನ ಜೀವನ ಶೈಲಿಯಲ್ಲಿ ಮಲಗುವ ವೇಳೆ ಬದಲಾದದ್ದು ಸತ್ಯ ಹಾಗೂ ಹೆಚ್ಚು ಗಮನ ಫೋನಿನ ಮೇಲೆ ಇರುವುದು ಸತ್ಯ.. ಮೊದಲು ಮನೆಯವರಿಗೆ ಗುಡ್ ನೈಟ್ ಹೇಳ್ತಾ ಇದ್ದೆ ಈಗ ಫೋನಿಗೆ ಹೇಳೋತರ ಆಯ್ತು ಫೋನಿಂದಲೇ ಗುಡ್ ಮಾರ್ನಿಂಗ್ ಫೋನಿಂದ ಗುಡ್ ನೈಟ್… ಆದರೆ ಒಂದಂತೂ ನಿಜ ಈ ಫೋನ್ ಬಂದ ಮೇಲೆ ಬಟ್ಟೆಗಳನ್ನ ಹೆಚ್ಚು ತೆಗೆದುಕೊಳ್ಳುವುದಕ್ಕೆ ಪ್ರಾರಂಭವಾಯಿತು ,ಆ ಫೋಟೋದಲ್ಲಿದೆ ಆ ಬಟ್ಟೆ ಇನ್ನೊಂದು ಫಂಕ್ಷನ್ ಗೆ ಬೇರೆ ಬೇಕೇ ಬೇಕು ಈ ರೀತಿಯ ಆಡಂಬರದ ಜೀವನವು ಒಂದು ಕಡೆ ಶುರುವಾಯಿತೇನೋ ,,ಆದರೂ ಒಳ್ಳೆ ರೀತಿ ಉಂಟು ಈ ಫೋನಿಂದ ಸಂಬಂಧಗಳ ಬೆಸುಗೆ ಮೋಜು ಮಸ್ತಿಯ ಡ್ಯಾನ್ಸ್ ,ಹಾಡುಗಳು ಸೆರೆ ಮಾಡಿದ್ದೆ ಈ ನನ್ನ ಫೋನ್, ಎಲ್ಲರಿಗೂ ಎಲ್ಲಾ ರೀತಿಯ ಅರಿವು ಮೂಡುತ್ತಿತ್ತು, ನನ್ನ ಸ್ಟೇಟಸ್ ನೋಡಿದವರಿಗಂತೂ ಎಲ್ಲಾ ರೀತಿಯ ಅಪ್ಡೇಟ್ ಸಿಗುತ್ತೆ ನಾನೊಂಥರ ನಮ್ಮನೆಯ ಗೂಗಲ್,
ಎಲ್ಲರು ಹಾಗೆ ಹೇಳ್ತಾರೆ.. ಎಷ್ಟೋ ಜನ ನನ್ನ ಸ್ಟೇಟಸ್ ನೋಡೋದಕ್ ಅಂತಾನೆ ನನ್ನ ನಂಬರ್ ತೆಗೆದುಕೊಂಡಿದ್ದಾರೆ, ನಾನೊಂಥರಾ ಫೋನಲ್ಲಿ ಸಂಭ್ರಮದ ಅಲೆಯನ್ನ ಮೂಡಿಸಿದವಳು, ಕೊಳೆಯನ್ನು ಮೂಡಿಸಿದವಳಲ್ಲ… ನೋಡಿ ಫ್ರೆಂಡ್ಸ್ ಫೋನ್ ಇರೋದು ನಮ್ಮ ಕೈಯಲ್ಲಿ ನಾವಿಲ್ಲ ಫೋನಿನ ಕೈಯಲ್ಲಿ.. ಅದನ್ನ ಎಷ್ಟು ಬೇಕೋ ಅಷ್ಟು ಚೆನ್ನಾಗಿ ನಾವು ಬಳಸಿದರೆ ಅದು ಉತ್ತಮವಾಗಿ ನಮ್ಮ ಫ್ರೆಂಡ್ ಆಗುತ್ತೆ ..ನನಗಂತೂ ನನ್ನ ಫ್ರೆಂಡು ಫೋನೇ. ಗೊತ್ತಿಲ್ದೆ ಇರೋ ಕಡೆಗೆ ದಾರಿ ತೋರಿಸುತ್ತದೆ, ಬೇಜಾರಾದಾಗ ಬೇಕಾದವರ ಜೊತೆ ಮಾತಾಡಬಹುದು ,ದುಡ್ಡಿಲ್ಲದಿದ್ದರೆ ಯಾರತ್ತೀರಾ ಆದ್ರೂ ದುಡ್ಡನ್ನ ಕಳುಹಿಸಿಕೊಳ್ಳಬಹು… ಎಲ್ಲೇ ಇದ್ದರೂ ಎಲ್ಲಾ ರೀತಿಯ ವಿಷಯಗಳನ್ನು ತಿಳಿದುಕೊಳ್ಳಬಹುದು ಆದರೆ ತಿಳಿದುಕೊಳ್ಳುವವರ ಮೇಲೆ ಅವರ ಆಸಕ್ತಿ ಒಳ್ಳೆಯದ ಕೆಟ್ಟದ ಎಂಬುದು ಮುಖ್ಯ .. ಹಾಗೂ ನನ್ನ ಜೀವನದಲ್ಲಿ ಈ ಫೋನಿಂದ ತುಂಬಾ ಜನರ  ವ್ಯಕ್ತಿತ್ವದ ಪರಿಚಯ ಆಯಿತು ನಾವು ಅವರಿಗೆ ಅವರ ಜೀವನದಲ್ಲಿ ಎಷ್ಟು ಮುಖ್ಯ ಎಂಬುದನ್ನು ತಿಳಿದುಕೊಂಡಿದ್ದು ಈ ಫೋನಿನಿಂದಲೇ ಉದಾಹರಣೆಗೆ ನಮ್ಮ ಬಂಧು ಬಳಗದವರ ಮನೆಯಲ್ಲಿ ಒಂದು ಫಂಕ್ಷನ್ ನಡೆಯುತ್ತಿತ್ತು ಈಗ ಫೋನ್ ಇರೋ ಕಾರಣ ಅವರು ನಮಗೂ ಕೂಡ ಫೋನ್ ಮಾಡಿ ಕರೆಯಬಹುದು ಆದರೆ ಅವರು ಅವರಿಗೆ ಬೇಕಾದವರ ಜೊತೆ ಮಾತ್ರ ಫೋನ್ ಮಾಡಿ ಕರೆದರೆ ಅಲ್ಲಿ ನಮ್ಮ ವಾಸ್ತವ ಏನು ಎಂದು ಅರಿತು ಆ ಆ ಫಂಕ್ಷನ್ ಗೆ ಹೋಗಲಿಲ್ಲ..


ಹಾಗೆ ನಾವು ಒಬ್ಬರಿಗೊ ಒಂದು ಸಾರಿ ಫೋನ್ ಮಾಡಿದರೆ ಮತ್ತೆ ಅವರಿಗೆ ನಮ್ಮ ಜೊತೆ ಆತ್ಮೀಯತೆ ಸಂಬಂಧವನ್ನು ಬೆಳೆಸಬೇಕಾದರೆ ಮತ್ತೆ ಅವರು ಫೋನ್ ಮಾಡಬೇಕು ಪದೇ ಪದೇ ನಾವೇ ಮಾಡಿದಾಗ ಅಲ್ಲಿ ಅವರ ಆತ್ಮೀಯತೆ ನಮ್ಮ ಜೊತೆ ಇಲ್ಲ ಎಂಬುದು ನನಗೆ ತಿಳಿಯಿತು ,,
ನನ್ನ ಜೀವನ ಶೈಲಿಯಲ್ಲಿ ಅಂತು ಫೋನು ಅದ್ಭುತ ಪಾತ್ರವನ್ನು ವಹಿಸಿದೆ ಸಂಬಂಧವನ್ನ ಅದ್ಭುತವಾಗಿ ನಾನು ಸ್ವೀಕರಿಸಲು ಕೂಡ ಈ ಫೋನು ಮುಖ್ಯ ಪಾತ್ರ ಈಗಂತೂ ಯುಟ್ಯೂಬ್ ಚಾನೆಲ್ ಅಡುಗೆ ಮಾಡ್ತಾ ಇದೀನಿ ಓದ್ತಾ ಇದೀನಿ ಪುಟ್ಟಿನಲ್ಲಿ ನನ್ನ ಜೀವನಶೈಲಿಯಲ್ಲಿ ಫೋನು ಒಂದು ಸ್ನೇಹಿತೆಯ ಪಾತ್ರವಹಿಸಿದೆ  ನನ್ನ ಕಲೆಗಳನ್ನ ಅಂದರೆ ಕವನ ಬರೆಯುವುದು,,ಅಡುಗೆ ಮಾಡುವುದು,, ಚಿತ್ರ ಬಿಡಿಸುವುದು ಇದನ್ನೆಲ್ಲಾ ಇನ್ನು ಹೆಚ್ಚಾಗಿ ಪ್ರೋತ್ಸಾಹಿಸಿದ್ದೇ ಈ ಫೋನು ಮತ್ತು ಇದರೊಳಗಿರುವ ಜನಗಳು…
ಒಳ್ಳೆಯ ಶೈಲಿಯಲ್ಲಿ ನನ್ನ ಜೀವನ ಬದಲಾಗಿದೆ,, ಕಾರಣ ನಾನು ಒಳ್ಳೆಯ ರೀತಿಯಲ್ಲಿ ತೆಗೆದುಕೊಂಡಿದ್ದೇನೆ..


ನಿಶ್ಚಿತ.ಎಸ್

One thought on “ಆಂಡ್ರಾಯ್ಡ್ ಪೋನ್ ಮತ್ತು ನಾನು-ನಿಶ್ಚಿತ.ಎಸ್

Leave a Reply

Back To Top