ಯುವ ಪೀಳಿಗೆ ಮತ್ತು ಮಾದಕ ದ್ರವ್ಯ-ನಿಲೀಷಾ ಪ್ರೀಮಾ ಅವರ ಲೇಖನ

ಯುವ ಪ್ರತಿಭೆ

ನಿಲೀಷಾ ಪ್ರೀಮಾ

ಯುವ ಪೀಳಿಗೆ ಮತ್ತು ಮಾದಕ ದ್ರವ್ಯ-

 ಸಮಾಜದಲ್ಲಿ ಯುವ ಜನತೆಯ ಪಾತ್ರವು ಬಹಳ ಮುಖ್ಯವಾಗಿದೆ. ಇಂದಿನ ಯುವ ಪೀಳಿಗೆ ಮುಂದಿನ ದೇಶದ ಬೆನ್ನೆಲುಬು .ಆದರೆ ಇಂದಿನ ಯುವ ಜನರು ಚಟ ಎನ್ನುವ ಮೋಹಕ್ಕೆ ಬಲಿಯಾಗುತ್ತಿದ್ದಾರೆ. ದೇಶವನ್ನು ರಕ್ಷಿಸಿ ಬೆಳೆಸಬೇಕಾದ ಯುವಜನರು ಅಮಲು ಪದಾರ್ಥಗಳಿಗೆ ಬಲಿಯಾಗಿ ಜೀವವನ್ನು ರಕ್ಷಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಇದ್ದಾರೆ. ಕೈಯಲ್ಲಿ ಪೆನ್ನು ಹಿಡಿಯುವ ಬದಲಾಗಿ ಸಿಗರೇಟನ್ನು ಪುಸ್ತಕ ಹಿಡಿಯುವ ಕೈಯಲ್ಲಿ ಗಾಂಜಾ ಪ್ಯಾಕೆಟ್ ಅನ್ನು ಹಿಡಿದು ತಮ್ಮ ಯೌವ್ವನವನ್ನು ಮಾದಕ ದ್ರವ್ಯದ ವ್ಯಸನಕ್ಕೆ ಬಲಿಪಶು ಮಾಡುತ್ತಿದ್ದಾರೆ. ಮಾದಕ ದ್ರವ್ಯ ಎನ್ನುವುದು ಒಮ್ಮೆ ಜೀವಕ್ಕೆ ಅಂಟಿಕೊಂಡರೆ ಅದರಿಂದ ಹೊರಬರುವುದು ಸುಲಭದ ವಿಷಯವಲ್ಲ. ಆದರೆ ಇಂದಿನ ಅದೆಷ್ಟೋ ಅಮಾಯಕ ಜೀವಗಳು ಅಮಲು ಪದಾರ್ಥಗಳ ಮೋಹದ ಚಟಕ್ಕೆ ಸಿಲುಕಿಕೊಂಡಿದ್ದಾರೆ. ಅದೆಷ್ಟೋ ಬಾಳಿ ಬದುಕಬೇಕಾದ ಜೀವಗಳು ಅಮಲು ಎನ್ನುವ ನಶೆಗೆ  ಸಿಲುಕಿ ತಮ್ಮ ಜೀವನವನ್ನೇ ಕೊನೆಗೊಳಿಸಿದ್ದಾರೆ. ಜೀವನವು ದೇವರು ನಮಗೆ ನೀಡಿರುವ ಅಮೂಲ್ಯವಾದ ಉಡುಗೊರೆಯಾಗಿದೆ.  ಆದರೆ ಆ ಉಡುಗೊರೆಯನ್ನು ಯಾವ ರೀತಿ ಉಪಯೋಗಿಸಬೇಕೆಂದು ತಿಳಿಯದವರು ನಮ್ಮ ಸಮಾಜದಲ್ಲಿ ಅನೇಕರಿದ್ದಾರೆ.
     ಮಾದಕ ದ್ರವ್ಯವು ಯುವ ಮನಸ್ಸಿಗೆ ಹಾರಲು ರೆಕ್ಕೆ ನೀಡಿದರೂ ನೀಲಿ ಆಕಾಶವನ್ನು ಕಾಣದಂತೆ ಮಾಡುತ್ತದೆ.

ಏಕೆಂದರೆ ಮಾದಕ ದ್ರವ್ಯದ ಸೇವನೆಯು ಜೀವನದಲ್ಲಿ ಕತ್ತಲೆಯ ಸ್ವಾಗತಕ್ಕೆ ಹಾದಿ ಎನ್ನಬಹುದು. ಬಾಳಿ ಬದುಕಬೇಕಾದ ಅದೆಷ್ಟೋ ಅಮಾಯಕ ಜೀವಗಳು, ಯುವಜನರು ಮಾದಕ ದ್ರವ್ಯದ ವ್ಯಸನಿಗಳಾಗಿದ್ದಾರೆ. ಅದರಿಂದ ಅದರಿಂದ ಹೊರಬರಲಾಗದೆ ಒದ್ದಾಡುತ್ತಿದ್ದಾರೆ. ಮಾದಕ ದ್ರವ್ಯವು ಜೀವಕೆ ಅಂಟಿದ ಕಲೆ ಎಂದು ಪಾಪ ಅವರಿಗೆಲ್ಲಿ ತಿಳಿದಿದೆ. ತನ್ನ ವ್ಯಸನದ ಬಾಳು ಕುಟುಂಬದ ನೆಮ್ಮದಿ ಹಾಳು ಎನ್ನುವ ಮಾತಿದೆ. ಅಮಲಿನ ನಶೆಯಲ್ಲಿ ತೇಲಾಡುತ್ತಾ ತನ್ನ, ತನ್ನ ಮನೆಯವರ ಅಶಾಂತಿಗೆ ಕಾರಣವಾಗುವಂತೆ ಮಾಡುತ್ತದೆ ಈ ಮಾದಕ ದ್ರವ್ಯ. ಖಿನ್ನತೆ, ಏಕಾಗ್ರತೆ ಕೊರತೆ, ಮಾನಸಿಕ ಒತ್ತಡ, ಮನಸ್ಥಿತಿಯಲ್ಲಿ ಏರುಪೇರು, ಹಳದಿರೋಗ ಮುಂತಾದ ಆರೋಗ್ಯದ ತೊಂದರೆ ಮಾದಕ ದ್ರವ್ಯದ ಸೇವನೆಯಿಂದ ಕಾಣಸಿಗುತ್ತದೆ.  ಇದರಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಜೀವನದ ನಾಶಕ್ಕೆ ಕಾರಣವಾಗುತ್ತದೆ. ಅದೆಷ್ಟೋ ಯುವಜನರು ಮೋಜಿಗಾಗಿ ಸ್ವೀಕರಿಸುವ  ಗಾಂಜಾ ಹುಡಿಯು ಮನೆಯವರ ಶಾಂತಿ ನೆಮ್ಮದಿಯನ್ನೇ ಬಿಡಿ ಮಾಡಿದೆ.  ಅಲ್ಲದೆ ಮೋಜಿಗಾಗಿ ಸೇವಿಸಿದ ಬಿಯರ್ ನ  ನೊರೆಯು ಜೀವನವನ್ನೇ ಹೊರೆ ಮಾಡಿದೆ ಎಂದರೆ ತಪ್ಪಾಗದು. ಮಾದಕ ದ್ರವ್ಯದ ಸಹವಾಸದಿಂದ ಸಮಾಜದಲ್ಲಿ ಸ್ವಾಭಿಮಾನವನ್ನು ಕಳೆದುಕೊಂಡು ಅದೆಷ್ಟೋ ಅಮಾಯಕ ಜೀವಿಗಳು ಆತ್ಮಹತ್ಯೆಗೆ ಶರಣಾಗಿ ಜೀವವನ್ನೇ ಕೊನೆಗೊಳಿಸಿದ್ದಾರೆ.


 ಆದ್ದರಿಂದ ಮಾದಕ ದ್ರವ್ಯದ ಸೆರೆ ಜೀವನದ ಮೇಲೆ ಹೊರೆಉತ್ತಮ ಚಿಕಿತ್ಸೆ ಪಡೆ ಬಾ ನೀ ಅದರಿಂದ ಹೊರಗಡೆ       ಮನೆಯವರ ಶಾಂತಿಗೆ ತ್ಯಜಿಸು ಮಾದಕ ದ್ರವ್ಯ ಬಾಳಿ ಬದುಕು ಸಮಾಜದಲ್ಲಿ ಬಿಟ್ಟು ನಿನ್ನ ಕೆಟ್ಟ ಚಟ

ಸಂತೋಷ ಅಥವಾ ದುಃಖ ಆಯ್ಕೆ ನಿನ್ನದು


ನಿಲೀಷಾ ಪ್ರೀಮಾ

One thought on “ಯುವ ಪೀಳಿಗೆ ಮತ್ತು ಮಾದಕ ದ್ರವ್ಯ-ನಿಲೀಷಾ ಪ್ರೀಮಾ ಅವರ ಲೇಖನ

Leave a Reply

Back To Top