ನಿರ್ಮಲಾ ಶೆಟ್ಟರ ಅವರ ಕವಿತೆ ‘ಕೈ ಮುಗಿಯುವ ಮನಸಿಲ್ಲ’

ಕಾವ್ಯ ಸಂಗಾತಿ

ನಿರ್ಮಲಾ ಶೆಟ್ಟರ

‘ಕೈ ಮುಗಿಯುವ ಮನಸಿಲ್ಲ’

ಮೊದಲೆಲ್ಲಾ
ಹೀಗೆ ದೂರದಲ್ಲಿ ನಿಂತು
ನೋಡುತಲಿದ್ದರೆ ಕೈ ಮುಗಿಯಬೇಕು
ಅನಿಸಿದ್ದೊಂದೆ
ಕರ ಜೋಡಿಸುತಿದ್ದೆ ಅವನಿಗೆ
ಆದರೀಗ
ಕರಮುಗಿಯುವ ಘಳಿಗೆ ಮರಕಳಿಸಲಾರವು

ಅವನಾಗುಳಿದಿಲ್ಲ ಅವನೀಗ
ಎಂಬಿವುಗಳ ನನ್ನೊಳಗೆ
ಮುಗಿಯಬೇಕನಿಸುತಿಲ್ಲ ಕರವ

ಅವನಾಗುಳಿದಿಲ್ಲ ಅವನೀಗ
ಎಂಬರಿವು ನನ್ನೊಳಗೆ
ಮುಗಿಯಬೇಕೆನಿಸುತಿಲ್ಲ ಕರವ

ಹುಟ್ಟಿರಬೇಕೀಗ ಮನದೊಳಗೆ
ಏನಾಗಿರಬಹುದೆಂಬ ಕುತೂಹಲವಿರಲು ಸಾಕು
ಯೋಚನೆಗೊಂದು ವಿರಾಮವಿಡುವೆ
ಹೆಚ್ಚು ಹೊಗಳಿಕೆ ಇಲ್ಲವೆ
ದೊಡ್ಡ ತೆಗಳಿಕೆ
ಅತೀ ಪುರಸ್ಕಾರ ಮಿತಿ ತಿರಸ್ಕಾರ
ತುಸು ಮುಂದೆ ಸಾಗಿ
ಅಗೌರವ ತೋರಿರಬೇಕು ನಾನೆಂದು

ಏನಿಲ್ಲ ಗೆಳೆಯರೆ
ನಡುವಿನ ಆ ಮಿತಿ ಸರಿದು ಪರಿಮಿತಗೊಂಡು
ನನ್ನಾತ್ಮಕಿಳಿದಂತೆ
ಅವನೀಗ ಅಪರಿಮಿತ ಅಗಾಧ ಅನಂತ
ನಾ ಲೀನವೀಗ
ಅವನೊಳಗೆ


ನಿಶೆ

2 thoughts on “ನಿರ್ಮಲಾ ಶೆಟ್ಟರ ಅವರ ಕವಿತೆ ‘ಕೈ ಮುಗಿಯುವ ಮನಸಿಲ್ಲ’

Leave a Reply

Back To Top