ನಾಗರಾಜ ಜಿ. ಎನ್. ಬಾಡ-ಒಲವಿನ ಗೂಡು…

ಕಾವ್ಯ ಸಂಗಾತಿ

ನಾಗರಾಜ ಜಿ. ಎನ್. ಬಾಡ

ಒಲವಿನ ಗೂಡು…

ನಿನ್ನೊಳಗೆ ನೀನು
ನಗುತಿರಲು ಸೊಗಸು
ನಗುವಾಗ ಮನಸು
ಮರೆಯುವುದು ಮುನಿಸು
ಅಕ್ಕರೆಯ ಮಾತಿಗೆ
ಸೋಲುವುದು ಮನಸು
ಜೊತೆಯಾಗಿ ಇರಲು
ಬಾಳೆಲ್ಲ ಶ್ರಮಿಸು
ಖುಷಿಯಾಗಿ ಇರಲು
ಎಲ್ಲವನ್ನೂ ಕ್ಷಮಿಸು
ಸವಿ ನೆನಪುಗಳನ್ನು
ಬಾಳಲ್ಲಿ ಎಂದೆಂದು ಉಳಿಸು
ಶಾಂತಿ ನೆಮ್ಮದಿಯ
ಬದುಕಲ್ಲಿ ಗಳಿಸು
ಮುಳ್ಳುಗಳ ಕಿತ್ತಿ
ಹೂವುಗಳ ಬೆಳೆಸು
ಸಾಗುವ ದಾರಿಯನ್ನು
ಸುಂದರ ಗೊಳಿಸು
ಚಿಕ್ಕ ಪುಟ್ಟ ಖುಷಿಗಳ
ಪ್ರತಿ ಕ್ಷಣವೂ ಅನುಭವಿಸು
ಪುಟ್ಟ ಪುಟ್ಟ ಕನಸುಗಳಲ್ಲಿ
ಕಟ್ಟು ಒಲವಿನ ಗೂಡು


ನಾಗರಾಜ ಜಿ. ಎನ್. ಬಾಡ

2 thoughts on “ನಾಗರಾಜ ಜಿ. ಎನ್. ಬಾಡ-ಒಲವಿನ ಗೂಡು…

  1. ಬದುಕುವ ಭರವಸೆ ಇರುವುದೇ ಚಿಕ್ಕ ಪುಟ್ಟ ಖುಷಿಗಳಲ್ಲಿ. ಉಸಿರು ಆರಾಧಿಸುವ ಜೀವ ಭಾವಗಳ ಜೊತೆಗೆ ನಿಂತು ನಗುವ ಹಂಚುತ್ತದೆ. ಅದೇ ಅದರ ಆಪ್ತತೆ ಎನಿಸುತ್ತದೆ. ಸಂತಸದ ಕ್ಷಣಗಳು ನಮ್ಮೊಂದಿಗೆ ಇದ್ದರೆ ಅದೊಂದು ಸಂಭ್ರಮವಾಗುತ್ತದೆ. ಹೊಸ ಕನಸುಗಳ ಪಲ್ಲವಿ ಸಾಧ್ಯತೆಯಾಗುತ್ತದೆ. ಒಲವಿನ ಗೂಡಲ್ಲಿ ಪ್ರೀತಿಯ ಪದಗಳು ಮನೆ ಮನಸು ಎರಡನ್ನು ಕಟ್ಟಿ ನಲಿವು ಹೆಚ್ಚುತ್ತದೆ….,……ಕವನದ ಸಾಲುಗಳ ಸೂಕ್ಷ್ಮ ಸಂವೇದನೆ ಜೀವಂತವಾಗಿವೆ ಎನಿಸುತ್ತದೆ…….. ಚೆನ್ನಾಗಿದೆ……

Leave a Reply

Back To Top