ಈಶ್ವರಲಿಂಗ ಸಂಪಗಾವಿ ಗಜಲ್

ಕಾವ್ಯ ಸಂಗಾತಿ

ಈಶ್ವರಲಿಂಗ ಸಂಪಗಾವಿ

ಗಜಲ್

ದೇಹ ಭಾವದ ಬಿರುಗಾಳಿಯಲ್ಲಿ ಕನಸ ತೂರಿಕೊಂಡೆಯಾ
ಮೋಹದ ಮಾರುಕಟ್ಟೆಯಲ್ಲಿ ಮನಸ ಮಾರಿಕೊಂಡೆಯಾ

ಕಾವು ಆರದ ಮುನ್ನ ಕಬ್ಬಿಣ ಬಡಿದು ಆಕಾರವ ನೀಡು ನೀ
ನೋವು ನಲಿವಿನ ಆಟದಲಿ ಹೊಳಪನು ಸಾರಿಕೊಂಡೆಯಾ

ಒಲವ ಸರಕು ಮಾರಲು ಸಿಗದು ಪಡೆವ ಛಲವ ಬಿಡಬೇಡ
ಬಲ ಹೊಂದಲು ಸಹಬಾಳುವೆ ಗುಣವ ಸೇರಿಕೊಂಡಿಯಾ

ಪೇಟೆಯಲಿ ಪ್ರೀತಿ ಹುಡುಕುವ ಹುಡುಗಾಟವೆ ನಗೆಪಾಟಲು
ನೀಟಾದ ದಾರಿ ಬಿಟ್ಟು ಅಂಕುಡೊಂಕು ಕೋರಿಕೊಂಡೆಯಾ

ಅರಿತು ಬಾಳು ಸ್ವರ್ಗಸುಖ ಮೂರು ಗೇಣಲ್ಲಿ ಸಿಗದೇ ಈಶ
ಬೆರೆತು ಬಾಳುತ ಸಾಗಿ ಗೆಲುವಿನ ಜಲವ ಹೀರಿಕೊಂಡೆಯಾ


ಈಶ್ವರಲಿಂಗ ಸಂಪಗಾವಿ

Leave a Reply

Back To Top