ಕಾವ್ಯ ಸಂಗಾತಿ
ಡಾ.ಬಸಮ್ಮ ಗಂಗನಳ್ಳಿ
ಕನ್ನಡ ನಾಡು
ನೋಡ ಬನ್ನಿ ನಾಡನು
ಹಾಡ ಬನ್ನಿ ಹಿರಿಮೆಯ
ಕೂಡಿ ಬಾಳುವ ಸಂಸ್ಕೃತಿ
ಉದಾರ ಚರಿತೆ ನಮ್ಮದು..
ಇಲ್ಲಿ ಎಲ್ಲಭೇದ ಮರೆತು
ಸರ್ವರೆಲ್ಲ ಒಂದುಗೂಡಿ
ಮನುಜಕುಲವು ತಾನೊಂದೇ
ಎನ್ನುವ ಸಮತೆ ನಮ್ಮದು ..
ತೆಂಗು ಕಂಗು ಬಾಳೆ ಕಿತ್ತಳೆ
ಬೆಳೆವ ಸಮೃದ್ಧ ನಾಡಿದು
ಮೈಸೂರು ಮಲ್ಲಿಗೆ, ಸಂಪಿಗೆ
ಕಂಪು ಸೂಸುವ ನಾಡಿದು..
ಋಷಿ ಪುಂಗವರು, ಶರಣರು ಸಂತರು, ಮಹಾನುಭಾವರು
ಸ್ವತಂತ್ರ ಹೋರಾಟಗಾರರು
ತ್ಯಾಗ ಗೈದವರ ನಾಡಿದು..
ಗಂಗ ಕದಂಬ ಚಾಲುಕ್ಯ
ರಾಷ್ಟ್ರಕೂಟ ಕಲ್ಯಾಣ
ಚಾಲುಕ್ಯ ಕಲಚುರಿಗಳು
ಆಳದಂಥ ನಾಡಿದು..
ಪಂಪನಿಂದ ಕುವೆಂಪು ವರೆಗೆ
ಸುದೀರ್ಘ ಕಾವ್ಯ ಬರೆದು
ಅಗಾಧ ಸಾಹಿತ್ಯ ಶ್ರೀಮಂತ
ಸಿರಿವಂತಗೊಳಿಸಿದ ನಾಡಿದು..
ತ್ಯಾಗ,ಭೋಗ,ಯೋಗಗಳ
ಸಮನ್ವಯದ ನಾಡಿದು
ಸಕಲ ಕಲೆಗಳಿಗೂ ಹೆಸರಾದ
ಭವ್ಯ ಕನ್ನಡ ನಾಡಿದು ..
ಬೆಳೆಸೋಣ ನಾವು ಭಾಷೆಯ
ಉಳಿಸೋಣ ನಾವು ಕನ್ನಡವ
ನಾಡಿಗಾಗಿ ದುಡಿದು ನಾವು
ನೆಲದ ಋಣವ ತೀರಿಸೋಣ..
———————————————————-
ಡಾ.ಬಸಮ್ಮ ಗಂಗನಳ್ಳಿ