ಕಾವ್ಯ ಸಂಗಾತಿ
ಡಾ.ಶಶಿಕಾಂತಪಟ್ಟಣರಾಮದುರ್ಗ
ಪ್ರೀತಿಯೆಂದಾದರೆ
ನೀನು ನನ್ನ
ಪ್ರೀತಿಯೆಂದಾದರೆ
ಅರಳಿ ಬಿಡು
ನನ್ನಂಗಳದ
ದುಂಡು ಮಲ್ಲಿಗೆಯಾಗಿ
ನೀನು ನನ್ನ
ಪ್ರೀತಿಯೆಂದಾದರೆ
ಬೆಳೆದು ಬಿಡು
ಹಿತ್ತಲಿನ ಹಿರಿಯ
ಆಲದ ಮರವಾಗಿ
ನೀನು ನನ್ನ
ಪ್ರೀತಿಯೆಂದಾದರೆ
ಹಾಡಿ ಬಿಡು
ಮನದ ಮೂಲೆಯ
ಕೋಗಿಲೆಯಾಗಿ
ನೀನು ನನ್ನ
ಪ್ರೀತಿಯೆಂದಾದರೆ
ಬಾಳಿ ಬದುಕಿ ಬಿಡು
ನನ್ನ ಜೀವ ಭಾವದ
ಪ್ರಾಣ ಉಸಿರಾಗಿ
ನೀನು ನನ್ನ
ಪ್ರೀತಿಯೆಂದಾದರೆ
ಹೆಣೆದು ಬಿಡು
ಸ್ನೇಹ ಪ್ರೀತಿಯ
ಕವನ ಕಾವ್ಯದ ಸಾಲು
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಅತ್ಯುತ್ತಮ ಸುಂದರ ಅಭಿವ್ಯಕ್ತಿ ಸರ್
ತುಂಬಾ ಚೆನ್ನಾಗಿ ಬರೆದಿದ್ದೀರಿ ಸರ್.
ನೀನು ನನ್ನ ಪ್ರೀತಿಯೆಂದಾದರೆ
ಹೆಣೆದು ಬಿಡು
ಸ್ನೇಹ ಪ್ರೀತಿಯ
ಕವನ ಕಾವ್ಯದ ಸಾಲು
ಪ್ರೀತಿಯ ಉನ್ನತ ಅಭಿವ್ಯಕ್ತಿ… ಕವನದ ಸಾಲುಗಳಲ್ಲಿ ಮಿಂಚಾಗಿ ಹರಿದಿದೆ
ಸುಶಿ
ಸುಂದರ ಕವನ, sir
ಕವಪ ತುಂಬಾ ಚೆನ್ನಾಗಿ ಬರೆದಿದ್ದೀರಿ.ಅಂತರ್ಗತ ಭಾವಗಳು ಅಕ್ಷರ ರೂಪದಲ್ಲಿ ಹೊರಹೊಮ್ಮುವ ಪರಿ ತುಂಬಾ ಮಾರ್ಮಿಕ.ರಸಾನುಭವದ ಅಗಮ್ಯ ಅಗೋಚರ ಅನುಭವ ತಮ್ಮ ಈ ಕವಿತೆಯಲ್ಲಿ ಮೂಡಿಬಂದಿದೆ.ಓದುಗನ ಬರಡಾದ ಹ್ರದಯದಲ್ಲಿ ಪ್ರೇಮದ ಹಸಿರು ಮೂಡಿಸುವ ತಮ್ಮ ಪ್ರಯತ್ನಕ್ಕೆ ತುಂಬಾ ಧನ್ಯವಾದಗಳು.ಬಳ್ಳಿಯ ಆಸರೆಯ ದುಂಡು ಮಲ್ಲಿಗೆಯ ಘಮಲು ಹಾಗೂ ಆಲದ ಮರದ ವಿಶಾಲತೆಯ ಪ್ರತಿಮೆಗಳ ಪ್ರಯೋಗದಿಂದ ಕವಿತೆ ಓದುಗರಿಗೆ ಮತ್ತಷ್ಟು ಹತ್ತಿರವಾಗುತ್ತದೆ.ಮನಸುಗಳ ಮಧುರ ಮಿಲನದ ತುಡಿತದಿಂದ ಕವಿತೆ ಅನಾವರಣಗೊಂಡಿದೆ.
ಡಾ.ಸರೋಜಾ ಜಾಧವ
ಕವನ ತುಂಬಾ ಚೆನ್ನಾಗಿದೆ.
ಅರ್ಥ ಪೂರ್ಣ ಕವನ ಸುಂದರ ಪ್ರತಿಮೆಯ ಕಾವ್ಯ
ಅತ್ಯುತ್ತಮ ಪ್ರೇಮ ಭಾವ ಕವನ ಸರ್
ಚೆಂದದ ಕವನ ಸರ್