ಕಾವ್ಯಸಂಗಾತಿ
ವ್ಯಾಸ ಜೋಶಿ
ತನಗಗಳು
ಹೊಲದಿ ಅನ್ನದಾತ
ಮರೀಚಿಕೆ ನೋಡಿದ,
ಬೇಗ ಬಾ ಮಳೆರಾಯ
ಅಂಗಲಾಚಿ ಬೇಡಿದ.
****
ಬಸವಳಿದ ರೈತ
ಟಿಸಿಲೊಡೆದ ಭೂಮಿ,
ಆಕಾಶದಲಿ ದೃಷ್ಟಿ
ಸುರಿಸೋ ಬೇಗ ವೃಷ್ಟಿ.
****
ಮೊಳಕೆ ಒಡೆಯಲು
ಗುಡುಗು ಸಿಡಿಲಲ್ಲ.
ಮಳೆ ಬೇಕು ಭುವಿಗೆ
ಹಿತವಾದ ಘಳಿಗೆ.
***
ನೆಲ ಹಸಿ ಇಲ್ಲದೆ
ಬೀಜ ಬಿತ್ತುವದ್ಹೇಗೆ?
ಒಣಗಿಹೋದ ರೈತ
ಬಿಸಿಲ ಬೇಗುದಿಗೆ.
****
ಬಿಸಿಲ್ಗುದುರೆ ಏರಿ
ಬಂಜರು ಮಾಡದಿರು,
ಬಂದುಬಿಡು ವರುಣ
ಉಡಿ ತುಂಬಿ ಬಿತ್ತೋಣ.
***
ತಲ್ಲಣಿಸಿಹೋಯಿತು
ತೊಯ್ಯಲೇಯಿಲ್ಲ ಇಳೆ. ಅನಿವಾರ್ಯವಾಯಿತು
ಅನ್ನದಾತಗೆ ಗುಳೆ.
——————–
ವ್ಯಾಸ ಜೋಶಿ
ಮಳೆಗಾಗಿ ಅನ್ನದಾತನ ಹಪಾಹಪಿಸುವ ವ್ಯಾಸತೀರ್ಥ ಜೋಶಿಯವರ ತನಗಗಳ ಗುಚ್ಚ ಬಹಳ ಮನಕಲುಕುತ್ತಿವೆ.