ಹಮೀದಾ ಬೇಗಂ ದೇಸಾಯಿ ಗಜಲ್

ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ

ಗಜಲ್

ಮೂಲೆ ಸೇರಿವೆ ಬರಗೆಟ್ಟ ಭಾವಗಳೆಲ್ಲ ಇಂದು
ಬತ್ತಿ ಹೋಗಿವೆ ಮರಗಟ್ಟಿ ಆಸೆಗಳೆಲ್ಲ ಇಂದು

ಉಳಿಯಲಿಲ್ಲವಲ್ಲ ಪ್ರೀತಿ ಹನಿಯೊಂದೂ ಎದೆಯಲಿ
ಹಾರಲಾರದೆ ಸೋತಿವೆ ಕನಸುಗಳ ರೆಕ್ಕೆಗಳೆಲ್ಲ ಇಂದು

ಅದೇಕೋ ಹುಣ್ಣಿಮೆಯ ಚಂದಿರ ಬಾಡಿ ಹೋಗಿಹನು
ಬಳಲಿ ಹೋಗಿವೆ ಕುಂದಿ ತಾರೆಗಳೆಲ್ಲ ಇಂದು

ಕಂಗಳೆರಡೂ ನಿನ್ನ ನಿರುಕಿಸುವುದ ಮರೆತಿವೆ
ಮೌನ ಧರಿಸಿವೆ ಅಂದುಗೆಯ ಗೆಜ್ಜೆಗಳೆಲ್ಲ ಇಂದು

ನಂಬುಗೆಯ ಕಿರಣಗಳು ಮೂಡಲೇ ಇಲ್ಲ ಬೇಗಂ ಬದುಕಿನಲಿ
ನಲುಗಿ ಉದುರುತಿವೆ ಒಲವ ಪಕಳೆಗಳೆಲ್ಲ ಇಂದು


ಹಮೀದಾ ಬೇಗಂ ದೇಸಾಯಿ

4 thoughts on “ಹಮೀದಾ ಬೇಗಂ ದೇಸಾಯಿ ಗಜಲ್

    1. ಎನೇ ನೋವಿದ್ದರೂ ಗಜಲ್ ಓದಿ ತಿಳಿಯಬೇಕು ಹೊರತು ನಿಮ್ಮ ಮುಖದ ಮಂದಹಾಸ ಚಿರಂತನ

  1. ಭಾವಪೂರ್ಣ ಗಝಲ್. ಮೂರನೇ ದ್ವಿಪದಿಯಲ್ಲಿ ದೇಕೋ ಆಗಿದೆ. ಬಹುಶಃ ಅದೇಕೋ ಆಗಬೇಕು ಅನಿಸುತ್ತದೆ.

    1. ಮೆಚ್ಚಿದ ಎಲ್ಲರಿಗೂ ತುಂಬಾ ಧನ್ಯವಾದಗಳು

      ಹಮೀದಾ.

Leave a Reply

Back To Top