ಕಾವ್ಯಸಂಗಾತಿ
ಮಮತಾ ಕೆ.
ನಾಡ ಜನನಿ..
ತಾಯೆ ನೀನು ಚೆಲುವೆ ಸುಂದರಿ
ಮದುವಣಗಿತ್ತಿ
ಶೋಭಿಸಿ ಮೆರೆಯುವಿ
ಸುಂದರ ಮನೆ ಮನಗಳಲಿ||
ನಿನ್ನೊಳಗಿತ್ತು ಪ್ರೇಮ
ಇತ್ತು ಮೋಹಕತೆ
ನಿನ್ನೊಳಗೆ ನವರಸಗಳು
ಮೇಳೈಸಿ ವಿಜೃಂಭಣೆ!!
ತಾಯೀ
ಬಳಲಿ ಸೊರಗಿರುವೆಯೇಕೆ?
ಲಾಲನೆ ಪಾಲನೆಗೆ
ಸಮಯವಿಲ್ಲ ಮನಸ್ಸಿಲ್ಲ
ಇಲ್ಲ ಅನಿವಾರ್ಯತೆ ||
ಅಭಿಮಾನ ಸಮ್ಮಾನ ವಿದೇಶದಲಿ
ಕಡಿಮೆಯಾಯ್ತಲ್ಲ ತವರು ನೆಲದಲ್ಲಿ
ಸಂಗೀತ ಸಾಹಿತ್ಯ ನಾಟಕಗಳ
ರಸವತ್ತತೆಗೆ ನಿನ್ನದೇ ಹಾಲು
ಬೆರೆಸಿ ನಿನ್ನೊಡಲಿಗೆ ವಿಷದ ಪಾಲು
ಅಮರತ್ವದ ನೆಲೆಬೇಕು ನಿನಗೆ
ಈ ನಾಡ ಹೃದಯಮಂದಿರದಲಿ
ತಾಳ ಲಯದ ಮಿಲನವಾಗಬೇಕು
ನಿನ್ನ ಹೆಸರ ಉದ್ಘೋಷದಲಿ
ನಾಡ ಜನನಿ..ಅಮ್ಮಾ..ತಾಯೀ ನೆಲೆಯಾಗಿರು ಸರ್ವರ ಬೆಚ್ಚನೆಯ
ಪ್ರೀತಿ ಮಮತೆ ವಾತ್ಸಲ್ಯದಲಿ ಅಮರವಾಗಿರು ಸದಾ
ಉಸಿರಿನಲಿ ಹಸಿರಿನಲಿ!!
ಮಮತಾ ಕೆ.
ಕವಿಯಾಗಿದ್ದು ಯಾವಾಗ ಕವಿತೆ ಚೆನ್ನಾಗಿದೆ.