ಕಾವ್ಯ ಸಂಗಾತಿ
ಪ್ರೊ. ಸಿದ್ದು ಸಾವಳಸಂಗ
ಒಳ್ಳೆಯದು ಮಾಡಿ ಕೆಟ್ಟದ್ದು ದೂಡಿ
ನಾನು ನಾನಲ್ಲ ; ನೀನು ನೀನಲ್ಲ
ನಮ್ಮಿಬ್ಬರ ನಲ್ಲ ಮೇಲಿರುವನಲ್ಲ !
ಅವನಿಗೆ ಏನೂ ಗೊತ್ತಾಗುವುದಿಲ್ಲ
ನಾನು ಆಡಿದ್ದೆ ಆಟ, ಮಾಡಿದ್ದೆ ಮಾಟವೆಂದು !
ಜಗದ ಜನರಿಗೆ ಮೋಸ ಮಾಡುತ್ತಿರುವ
ಮನುಜರೇ ಎಚ್ಚರ ಎಚ್ಚರ !!
ಎಲ್ಲವನು ಬಲ್ಲ ಭಗವಂತ ಸುಮ್ಮನಿರಬೇಕಲ್ಲ
ಮಾಡಿದ ತಪ್ಪಿಗೆ ಶಿಕ್ಷೆ ಇದ್ದೇ ಇದೆಯಲ್ಲ !
ಒಳ್ಳೆಯದು ಮಾಡಿ, ಕೆಟ್ಟದ್ದು ದೂಡಿ
ಕೆಟ್ಟದ್ದು ಮಾಡಿ, ಒಳ್ಳೆಯದು ದೂಡಿದರೆ
ಮಿಥ್ಯ ಅದು ಹೇಗೆ ಪಥ್ಯವಾದೀತು ?
ನಿಮ್ಮ ಬೆನ್ನು ನಿಮಗೆ ಕಾಣುವುದಿಲ್ಲ
ಹಾಗಂಥ ಅಫರಾಧ ಸಲ್ಲ !
ಬೇರೆಯವರ ನೋಯಿಸುವ ಮುನ್ನ
ನೀವೂ ಸಹ ಬೇಯುವಿರಿ, ಇದು ಸುಳ್ಳಲ್ಲ !
ಸತ್ಯ ಹರಿಚ್ಛಂದ್ರನೇ ಸ್ಮಶಾನ ಕಾಯ್ದಿರುವಾಗ
ನೀವು ಅದ್ಯಾವ ಲೆಕ್ಕ ಹೇಳಿರಲ್ಲ !
ಮರ್ಯಾದಾ ಪುರುಷೋತ್ತಮ ರಾಮ
ಕಾಡು ಅಲೆದಿರುವಾಗ ನೀವು ಪರರ ಪೀಡಿಸಿ
ಅದು ಹೇಗೆ ನೆಮ್ಮದಿಯಿಂದಿರುವಿರಿ ಗೊತ್ತಿಲ್ಲ !
ಎಲ್ಲದಕ್ಕೂ ಒಂದು ಅಂತ್ಯವಿದೆ
ಅದಕ್ಕೆ ಸಮಯ ಬರಬೇಕಷ್ಟೇ
ಬಸ್ಮಾಸುರ ತನ್ನ ವರದಿಂದ ತಾನೇ ನಾಶವಾದಂತೆ !
ಮೋಸ, ಕಪಟ, ವಂಚನೆಗಳ ಜಾಲ ಹೆಣೆಯುವ
ಜಾಣಾಕ್ಷರು ಸಹ ಒಂದು ದಿನ ವಿನಾಶವಾಗಲೇಬೇಕಲ್ಲ !!
ಪ್ರೊ. ಸಿದ್ದು ಸಾವಳಸಂಗ