ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಜೆ.ಎಲ್.ಲೀಲಾಮಹೇಶ್ವರ-

ಓ ಮನಸೇ…..

ಓ ಮನಸೇ…..

ನೀನೆಷ್ಟು ಪಾತ್ರಗಳನ್ನು ಪ್ರತಿದಿನವೂ
ನಿರ್ವಹಿಸುವೆ !
ತನ್ನಾಸೆಗಳ ಈಡೇರಿಕೆಗೆ ಮಾತ್ರವೇ
ಹಪಹಪಿಸುವೆ.

ಕಾಳಜಿ ಮಾಡುವವರನ್ನೇ ದೂರ
ನೀ ಇಡುವೆ,
ಅನ್ಯರ ಕಾಳಜಿ ಮಾಡಲು ಸದಾ
ನೀ ನಿಲ್ಲುವೆ.

ಪ್ರೀತಿ, ಸ್ನೇಹ, ನಂಬಿಕೆಗಳಿಗೆ ಬೆಲೆಯೇ
ಇಲ್ಲಾ ಈ ಜಗದಲ್ಲಿ,
ಸ್ವಾರ್ಥವೇ, ಸಮಯ ಸಾಧಕತೆಯೇ
ತುಂಬಿವೆ ಜನರಲ್ಲಿ.

ಅವಶ್ಯಕತೆಗಳು ತೀರಿದ ಮೇಲೆ ಎಲ್ಲರ
ನೀ ಮರೆಯುವೆ.
ಅವಶ್ಯಕತೆಗನುಗುಣವಾಗಿಯೇ ಸದಾ
ನೀ ಬದಲಾಗುವೆ,

ನಿನ್ನರಸಿ ಬರುವ ಹಿತ್ಯಶಿಗಳ ಮೇಲೆ
ತಾತ್ಸಾರ ನಿನ್ನದು,
ನಿನ್ನವರಲ್ಲದವರ ಮೇಲೆಯೇ ನಿನ್ನ
ವ್ಯಾಮೋಹ ನಿಲ್ಲದು.

ಜಾತಿ, ರಕ್ತ ಸಂಬಂಧ ಮೀರಿದ
ಬಾಂಧವ್ಯಕೆ ಬೆಲೆ ಇಲ್ಲಿ ಇಲ್ಲಾ,
ತನ್ನ ಬಯಕೆಗಳ ಈಡೇರಿಕೆಯ
ಗುರಿಗಳ ಸ್ವಾರ್ಥವೇ ಇಲ್ಲಿ ಎಲ್ಲಾ.


ಜೆ.ಎಲ್.ಲೀಲಾಮಹೇಶ್ವರ

About The Author

Leave a Reply

You cannot copy content of this page

Scroll to Top