ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಾಗರಾಜ ಜಿ. ಎನ್. ಬಾಡ

ಹನಿಗವನಗಳು

೧) ಚೀತ್ಕಾರ

ಕಡಿದು ಮುಗಿಸಿದರು ಕಾಡು
ಕಟ್ಟಿದರು ಹೊಸ ನಾಡು
ಹೇಳತೀರದು ಪ್ರಾಣಿಗಳ ಪಾಡು
ಆಹಾರ ಅರಸಿ ಹೊರಟ ಪ್ರಾಣಿಗಳ ನೋಡು
ಮರಗಳ ಕಡಿಯಲು ಉರುಳಿವೆ ಹಕ್ಕಿಗಳ ಗೂಡು
ಚೀತ್ಕಾರ ಮಾಡುತ ಹಿಡಿದಿವೆ ಪ್ರಾಣಿಗಳು ಪೇಟೆಯ ಜಾಡು

೨) ಚಾಕಚಕ್ಯತೆ

ಗೆಲುವಿನ ಸವಿ ಸವಿಯೋದಕ್ಕೆ
ರೆಡಿಯಾಗಿರಬೇಕು ತಂತ್ರ ಪ್ರತಿ ತಂತ್ರಕ್ಕೆ
ಬಲಿಯಾಗಬಾರದು ಕುತಂತ್ರಕ್ಕೆ
ತಿಳಿದಿರಬೇಕು ಚಾಕಚಕ್ಯತೆಯಲ್ಲಿ ಮುನ್ನುಗ್ಗುವುದಕ್ಕೆ
ಸಿದ್ದರಿರಬೇಕು ಸೋಲು ಗೆಲುವು ಎದುರಿಸುವುದಕ್ಕೆ

4)ಚರಿತಾರ್ಥ

ನಮ್ಮವರಿಗಾಗಿ ನಾವು ಶ್ರಮಿಸಬೇಕು ನೋವುಗಳ ಮರೆತು ಬಾಳಬೇಕು
ಕತ್ತಲನ್ನು ಸರಿಸಿ ಬೆಳಕ ಹುಡುಕಬೇಕು ಕನಸುಗಳನ್ನು ನನಸಾಗಿಸಬೇಕು
ಖುಷಿಯ ಸುತ್ತಲೂ ಹಂಚಬೇಕು
ಚರಿತಾರ್ಥ ಭಾವನೆ ಮನದಿ ನೆಲೆಸಿರಬೇಕು

೪) ಚಮತ್ಕಾರ

ಹೆಜ್ಜೆ ಹೆಜ್ಜೆಗೂ ತುಂಬಿದೆ ಚಮತ್ಕಾರ
ಸರಿಸ ಬೇಕು ಬಾಳಿನ ಅಂಧ:ಕಾರ
ಮಾಡುತ್ತಿರು ನೀನು ಜನರಿಗೆ ಉಪಕಾರ
ರಾಗ ದ್ವೇಷಗಳಿಗೆ ಇರಲಿ ತಿರಸ್ಕಾರ ಒಳ್ಳೆಯತನಕ್ಕೆ ಇರಲಿ ಎಂದೆಂದೂ ಪುರಸ್ಕಾರ ನೀನಾಗು ಜಗಕ್ಕೆ ಖುಷಿಯ ಹರಿಕಾರ


ನಾಗರಾಜ ಜಿ. ಎನ್. ಬಾಡ


About The Author

1 thought on “ನಾಗರಾಜ ಜಿ. ಎನ್. ಬಾಡ ಹನಿಗವನಗಳು”

  1. ಹನಿಗವನ ಎಂದರೆ ಹಾಗೆ ವಿಸ್ತಾರವಾಗುವ ವಿವೇಚನೆ ಸಾಲುಗಳಲ್ಲಿ ತುಂಬಿರುತ್ತದೆ. ಇಷ್ಟೇ ಎಂದು ಅಳೆಯಲಾಗದಿದ್ದರೂ ಇಷ್ಟೇ ಎಂದು ಅರ್ಥೈಸಿ ನಿಲ್ಲಿಸಬಹುದು. ಸಾಲುಗಳು ಚೆಂದದಿ ಅವಲೋಕಿಸಿ ವಿಷಯಗಳ ಕಟ್ಟಿದೆ. ಚೆನ್ನಾಗಿದೆ ಸಾಲುಗಳ ಪ್ರತಿನಿಧಿತ್ವ………..

    ನಾಗರಾಜ ಬಿ.ನಾಯ್ಕ
    ಹುಬ್ಬಣಗೇರಿ
    ಕುಮಟಾ.

Leave a Reply

You cannot copy content of this page

Scroll to Top