ಕಾವ್ಯ ಸಂಗಾತಿ
ಜಯದೇವಿ ಆರ್ ಯದಲಾಪೂರೆ
ಹೆತ್ತ ಜೀವಗಳು
ಪರದೇಶದ ಹುಚ್ಚು
ದೊಡ್ಡಸ್ತಿಕೆ ದಾಹಕ್ಕೆ
ತನ್ನತನ ಮಾರಿಕೊಂಡು
ಬದುಕಿದರು ನಮ್ಮವರು
ತನ್ನ ಬೇಕು ಬೇಡಿಕೆ
ಆಶೆಗಳು ಪೂರೈಸಿಕೊಳ್ಳಲು
ಮಕ್ಕಳನ್ನು ಬಳಿಸಿಕೊಂಡು
ವಿದೇಶಕ್ಕೆ ಕಳುಹಿಸಿದರು
ಸಂಸ್ಕಾರ ಸಂಸ್ಕೃತಿ ಬಿಟ್ಟು
ವಿದೇಶಿ ವೈಭವಕ್ಕೆ ಒಗ್ಗಿ
ಹುಲಿಯಾದವರು ಇಲಿಯಾಗಿ
ತಾಯಿ ತಾಯಿನಾಡು ಮರೆತರು
ಮಕ್ಕಳ ಬರುವಿಕೆಗೆ ದಾರಿಕಾಯ್ದು
ಹಣ್ಣಾದ ಜೀವಗಳಿಗೆ
ಸತ್ತಾಗ ಸಂಸ್ಕಾರ ಮಾಡಿದರು
ನೆರೆಹೊರೆಯವರು
ತಾಮಾಡಿದ ತಪ್ಪುತನ್ನ ಹೆಗಲೇರಿ
ಎಲ್ಲವು ಇದ್ದು ಬರಿದಾಗಿ
ಪಾಶ್ಚಾತಾಪದ ಕೂಗು ಗಂಟಲು ಕಟ್ಟಿತು
ಹೆತ್ತ ಜೀವಿಗಳಿಗೆ
ಜಯದೇವಿ ಆರ್ ಯದಲಾಪೂರೆ