ಬಾಗೇಪಲ್ಲಿಯವರ ಗಜಲ್

ಕಾವ್ಯ ಸಂಗಾತಿ

ಬಾಗೇಪಲ್ಲಿ

ಗಜಲ್

ಕ್ಷಮಾ ಗುಣಕಿಂತ ಮಿಗಿಲಾದಂತ ಸುಗುಣ ಇನ್ನೊಂದಿಲ್ಲ
ಏಸು ಹೇಳಿದಂತೆ ಕಲ್ಲೆಸೆವ ಅರ್ಹತೆ ಯಾರಿಗೂಯಿಲ್ಲ

ಅತ್ಮಹತ್ಯಾ ಬಾಂಬ್ ಸಿಡಿಸಿ ಕೊಲ್ಲಲು ಸಹಕರಿಸಿದರಂದು
ಆಪ್ತರ ಕಳೆದುಕೊಂಡವರು ಮನ್ನಿಸಿದರು ಹಗೆ ಸಾಧಿಸಲಿಲ್ಲ

ನನ್ನ ಅಜ್ಜಿಯ ಅನ್ಯಾದಿ ಹೊಡೆದು ಉರುಳಿಸಿದರು ನಿಜ
ನಾನು ಕೊಂದವರ ಮೊಮ್ಮಗನ ಮೇಲೆ ಸೇಡು ಇರಿಸಬೇಕಿಲ್ಲ

ಕೆಟ್ಟವರು ಯಾವ ಧರ್ಮೀಯರಾದರೂ ಕೆಟ್ಟವರೇ ಸರಿ
ಇಡೀ ಜನಾಂಗವನ್ನೇ ಕೆಟ್ವವರೆನುತ ಕೊಲ್ಲುವುದು ಸರಿಯಲ್ಲ

ಖಡಕ್ ನ್ಯಾಯ ತರ್ಕಶಾಸ್ತ್ರಗಳು ಬುದ್ದಿ ವಿಕಾಸಕೆ ಮಾತ್ರ
ಕ್ಷಮಾಗುಣ ಇಲ್ಲದಿರೆ ಅಲ್ಲಿ ಮಾನವತೆ ಎಂಬುದೇಯಿಲ್ಲ

ಕೃಷ್ಣಾ! ನ್ಯಾಯ ಅನ್ಯಾಯದ ವಿಶ್ಲೇಷಣೆ ಅಗತ್ಯಇರಬೇಕು
ಕಣ್ಣಿಗೆ ಕಣ್ ಎನುತ ಕುರುಡು “ವರಟು ನ್ಯಾಯ” ಬೇಕಿಲ್ಲ.


ಬಾಗೇಪಲ್ಲಿ

Leave a Reply

Back To Top