ಕಾವ್ಯ ಸಂಗಾತಿ
ಹೊನ್ನಪ್ಪ ನೀ. ಕರೆಕನ್ನಮ್ಮನವರ
ಹನಿಗವಿತೆಗಳು
1.ಮೂಕಸಾಕ್ಷಿ..
ಹೂವನ್ನು
ತಲೆಮೇಲಿಟ್ಟರೂ
ಸುಮ್ಮನಿರುತ್ತಾನೆ
ದೇವರು
ಅದರ
ಪವಿತ್ರ್ಯತೆ
ನಂಬಿ..!
ಪಾಪ
ಅವನಿಗೂ
ಸಿಗುವುದಿಲ್ಲ
ಬಿಡಿ
ಹೂ
ಚುಂಬಿಸಿ
ಓಡಿಹೋದ
ದುಂಬಿ..!!
2.ಸೆಳೆತ..
ಪೇಟೆಯಲಿ
ಹೂ
ಮಾರುವ
ಹುಡುಗ
ಕೂಗುತ್ತಿದ್ದ
ಐವತ್ತು
ರೂಪಾಯಿ
ಒಂದು
ಮಾರಿಗೆ..!
ಕೊನೆಗೆ
ಎಲ್ಲ ಹೂ
ಪುಕ್ಕಟೆ
ಕೊಟ್ಟು
ಹೋದ
ಚಂದದ
ಹುಡುಗಿಯ
ಮಾರಿಗೆ..!!
3.ಆಶಾಭಾವ….
ಮಹಿಳೆ
ಎಲ್ಲ
ರಂಗಗಳಲಿ
ಇನ್ನಷ್ಟು
ಉನ್ನತಕ್ಕೇರಲಿ
ಎನ್ನುವುದು
ತಪ್ಪಲ್ಲ..!
ಏಕೆಂದರೆ
ಅವಳಿಗಿನ್ನೂ
ಹೈ ಹೀಲ್ಡ್
ಚಪ್ಪಲಿ
ಹಾಕುವ
ಗೋಳು
ತಪ್ಪಿಲ್ಲ..!!
4.ನಿಷ್ಕರ್ಷ..
ಚಳಿಗಾಲದಲ್ಲಿ
ಅದೆಷ್ಟೇ
ತುಟಿ
ಬಿರಿದರೂ
ಹಚ್ಚುವುದಿಲ್ಲ
ನಾ
ವ್ಯಾಸಲಿನ್ನು..!
ಅಳಿಸಿ
ಹೋದರೇನು
ಮಾಡಲಿ
ಅವಳು
ಕೊಟ್ಟು
ಹೋದ
ಗುಲ್ಕನ್ನು…!!
-ಹೊನ್ನಪ್ಪ ನೀ. ಕರೆಕನ್ನಮ್ಮನವರ
Super sir….