ವಿಶೇಷ ಲೇಖನ
ಡಾ ಸಾವಿತ್ರಿ ಕಮಲಾಪುರ
ಧರ್ಮ ಎಂದರೇನು ?
ಯಾರಾದರೂ ಉತ್ತರಿಸಿ
ಧರ್ಮ ಎಂದರೇನು ?
ನನ್ನ ಪ್ರಕಾರ ಬಿದ್ದವರನ್ನು ಎತ್ತಿ ಹಿಡಿಯುವುದೇ ಧರ್ಮ.
ನಾವು ಬದುಕುವುದರ ಜೊತೆಗೆ ಇನ್ನೊಬ್ಬರ ನ್ನು ಬದುಕಿಸುವುದೇ ಧರ್ಮ .ಸಕಲರಲ್ಲೂ ದಯೆ ತೋರುವುದೇ ಧರ್ಮ .
ದಯಮಾಡಿ ತಿಳಿಸಿ
ಧರ್ಮ ಎಂದರೇನು ?
ಅಜ್ಞಾನ ಅಳಿಸಿ ಸುಜ್ಞಾನದಿಂದ ನಡೆಯುವುದೇ ಧರ್ಮ
ಧರ್ಮ ಎಂದರೇನು ನನ್ನ ಮನದಲ್ಲಿ ಕೊರೆದ ನೂರೆಂಟು ಪ್ರಶ್ನೆಗಳಿಗೆ ನಾನೇ ಉತ್ತರಿಸಿ ಕೊಂಡೆ ಧರ್ಮ ಎಂದರೇನು ಅಂತಾ
ನಾವು ಸಾಮಾನ್ಯವಾಗಿ ಮಾತನಾಡುತ್ತೇವೆ ಸ್ವಲ್ಪವೂ ನಿನಗೆ ಧರ್ಮವೇ ಇಲ್ಲ ಅಂತಾ ಹಾಗಾದರೆ ಧರ್ಮ ಎಂದರೇನು
ಮಾನವೀಯತೆ ಧರ್ಮ ತಾನೇ ?
ಎಲ್ಲಿದೆ ಮಾನವೀಯತೆ ಭಾಷಣ ಗಳಲ್ಲಿ ವೇದಿಕೆಯಲ್ಲಿ ತುಂಬಿ ತುಳುಕುವ ಜನರ ಮಧ್ಯದಲ್ಲಿ ಕೊಚ್ಚಿಕೊಳ್ಳುವ ನಮ್ಮ ನಮ್ಮ ಮನವನೊಮ್ಮೆ ಕೇಳಿ ತಿಳಿದುಕೊಳ್ಳಿ ಧರ್ಮ ಎಂದರೇನು ?
ನಮ್ಮ ನಮ್ಮ ಉಡುಗೆ ತೊಡುಗೆಯಲ್ಲಿ ರೂಢಿ ಸಂಪ್ರದಾಯಗಳಲ್ಲಿ ಎಲ್ಲಿದೆ ಧರ್ಮ ? ಕೇಳಿಕೊಳ್ಳಿ ಧರ್ಮ ಎಂದರೇನು ನಮ್ಮ ನಮ್ಮ ಆಚಾರ ವಿಚಾರ ಗಳಲ್ಲಿ ಇದೆಯಾ ಧರ್ಮ? ಎಲ್ಲಿದೆ ಧರ್ಮ. ನಮ್ಮ ನಮ್ಮ ಕರ್ಮ ಸಿದ್ಧಾಂತಗಳಲ್ಲಿ ಅಡಗಿ ಕುಳಿತುಕೊಂಡಿದೆಯಾ? ಧರ್ಮ ಎಲ್ಲೆದೆ ? ಧರ್ಮ ಮನುಷ್ಯ ಮನುಷ್ಯರಲ್ಲಿಯೇ ಇಲ್ಲದ ಸಹನೆ .ತುಂಬಿ ತುಳುಕುವ ಭೇದ ಎಲ್ಲಿದೆ ಧರ್ಮ. ?ಒಂದೇ ಒಂದು ಸಲ ನಿಮ್ಮ ನಿಮ್ಮ ಹೃದಯ ತಟ್ಟಿ ಕೇಳಿ ಕೊಳ್ಳಿ.ಧರ್ಮ ಎಂದರೇನು ? ಅಂತಾ .ಭೂಮಿಯು ಒಂದೆ, ಬಯಲು ಒಂದೇ, ಬಯಸಿದ್ದು ನೂರಾರು ಮಿತಿಯಿಲ್ಲದ ಆಸೆಗೆ ಕಟ್ಟಿ ಬೆಳೆಸಿದ ನಾಡು ಸಂತರ ಶರಣರ ದಾಸರ ಕವಿವರ್ಯರ ಮಹಾತ್ಮ ರು ಬೆಳೆಸಿ ಉಳಿಸಿ ಹೋದ ತತ್ವ ಸಿದ್ಧಾಂತ. ಸಹನೆ ಸಂಸ್ಕ್ರತಿ ಸಹಕಾರ ಧರ್ಮ ಅಲ್ಲವೇ ? ಯಾವುದು ಧರ್ಮ.
ನಮ್ಮ ನಮ್ಮಲ್ಲಿಯೇ ಭೇದ ಆ ಮತ ಈ ಮತ ಹುಟ್ಟು ವಾಗಿಲ್ಲದ ಮತ, ಸಾಯುವಾಗ ಇಲ್ಲದ ಮತ ಧರ್ಮ ಎಲ್ಲಿಂದ ಬಂದಿತು ತಿಳಿ ಹೇಳಿ .
ಅನೇಕರು ಹೀಗೆ ಬಡಿದಾಡಿ ಹೋರಾಡಿ ಸತ್ತು ಹೋದರು .ಆ ಮತ ಈ ಮತ ಎಂದು ಕಚ್ಚಾಡಿ ಬಡಿದಾಡಿ ಈ ಭೂಮಿಯ ಮಣ್ಣಲ್ಲಿ ಐಕ್ಯರಾದರು. ವಯ್ಯಲಿಲ್ಲ ಯಾವುದನ್ನೂ ಇದ್ದಷ್ಟು ದಿನ ಬದುಕಿದರು ಬಾಳಿದರು ಎಲ್ಲರೂ ನಮ್ಮವರು ಎಂದು ತಿಳಿದು ನಡೆದು. ಈ ನಾಡು ಉಳಿಸಿದರು .ತುಂಬಿದ ಕುಟುಂಬಕ್ಕೆ ಒಬ್ಬನೇ ಯಜಮಾನನಾಗಿ ನಡೆದರು
ಈಗ ಮನೆ ಮನೆಗೂ ಒಬ್ಬೊಬ್ಬ ಯಜಮಾನರು ನಾಯಿ ಕೊಡೆ ಯಂತೆ ಹುಟ್ಟುವ ಪಕ್ಷ ಜಾತಿಗಳು ಬೆನ್ನು ಹತ್ತಿ ತಿರುಗುವ ಮರುಳರು .ಎಲ್ಲಿದೆ ಧರ್ಮ ಹೇಳಿ .ಮನುಷ್ಯ ಮನುಷ್ಯನಲ್ಲಿ ಇಲ್ಲದ ಸಹನೆ ಸಹಕಾರ ಸಂಸ್ಕ್ರತಿ ಇಲ್ಲದ ಈ ನಾಡಿನಲ್ಲಿ ಹುಡುಕಿ ಕೊಂಡು ಹೋಗಬೇಕುಒಬ್ಬೊಬ್ಬರು ಎಲ್ಲಿದೆ ಧರ್ಮ ಎಂದು ಹೇಳಿ ಧರ್ಮ ಎಂದರೇನು ?
ನಮ್ಮ ನಡೆಯಲ್ಲಿ ಇದೆಯೇ ?ಧರ್ಮ ? ನಮ್ಮ ನುಡಿಯಲ್ಲಿ ಇದೆಯೇ ಧರ್ಮ. ನಮ್ಮ ರೀತಿ ನೀತಿಯಲ್ಲಿ ಇದೆಯೇ ಧರ್ಮ ಹೇಳಿ ಎಲ್ಲಿದೆ ಧರ್ಮ.
ನಮ್ಮ ನಮ್ಮ ಅತ್ಮಾವಲೋಕನ ಮಾಡಿಕೊಳ್ಳಬೇಕು .ಧರ್ಮ ಎಂದರೇನು ?
ಬೆಳಗಿದ ಬಸವಣ್ಣ ನಾಡನ್ನು ಜಗಕ್ಕೆ ಜ್ಞಾನದ ಜ್ಯೋತಿ ಯಾಗಿ
ಮನೆ ಮನೆಯನ್ನು ಮನ ಮನ ಗಳನ್ನು ಧರ್ಮ ಸಿದ್ಧಾಂತ ಎನ್ನಬೇಕೇ? ಇದುವೇ ಧರ್ಮವೇ ? ಹೇಳಿ ಯಾವುದು ಧರ್ಮ .
ಧರ್ಮ ಅಂದರೆ ಸತ್ಯ ಅಲ್ಲವೇ ?
ಧರ್ಮ ಅಂದರೆ ಶುದ್ಧ ಭಾವ ಅಲ್ಲವೆ ?ಧರ್ಮ ಅಂದರೆ ನಮ್ಮ ನಮ್ಮ ಆಚಾರ ವಿಚಾರ ರೂಡಿ ಸಂಪ್ರದಾಯ ಅಲ್ಲವೇ ?ಧರ್ಮ ಅಂದರೆ ನೀತಿ ಅಲ್ಲವೇ ?ಧರ್ಮ ಅಂದರೆ ಈ ನಾಡಿನಲ್ಲಿ ಯಾವುದೇ ತೆರನಾದ ಲಿಂಗ ಭೇದ ವಿಲ್ಲ ಜಾತಿ ಭೇದ ವಿಲ್ಲ ಬಡವ ಬಲ್ಲಿದ ಎನ್ನುವ ಭೇದ ವಿಲ್ಲದಿರುವುದು ಧರ್ಮ ಎನ್ನುವರು ತಾನೇ ? ಹಾಗಾದರೆ ಪ್ರಶ್ನೆ ಮಾಡಿಕೊಂಡು ಮುಂದೆ ಸಾಗಿ
ಧರ್ಮ ಎಂದರೇನು ?ನಾವೆಲ್ಲರೂ ಐಕ್ಯತೆಯಿಂದ ಇರುವುದು ಧರ್ಮ ಅಲ್ಲವೇ ? ಮತ್ತೇಕೆ ಭೇದ ಹೇಳಿ ಧರ್ಮ ಎಂದರೇನು ?
ಈ ಭುವಿಯ ಮೇಲೆ ಒಂದೂ ನರ ಪಿಳ್ಳೆಗೆ ಹಿಂಸೆ ಮಾಡದೇ ಇರುವುದು ಧರ್ಮ ಅಲ್ಲವೇ ? ಮತ್ಯಾಕೆ ಹಿಂಸೆ
ಹಾಗಾದರೆ ಹೇಳಿ ಧರ್ಮ ಎಂದರೇನು .?
———————————
ಡಾ ಸಾವಿತ್ರಿ ಕಮಲಾಪೂರ
ತಲೆಗೊಂದು ಧರ್ಮ ಇದುವೇ ಬದುಕಿನ ಮರ್ಮ