ಕಾವ್ಯ ಸಂಗಾತಿ
ಸುಕುಮಾರ
ಗಜಲ್
ನಿತ್ಯ ತನ್ನ ಕಾಯದಿ ಜಗ ಬೆಳಗುವನು ನೇಸರ
ಅಂತ್ಯ ಪಾಡಿ ತಮಕೆ ಮೊಗ ರಮಿಸುವನು ನೇಸರ
ಸತ್ಯ ಅನ್ವೇಷಣೆ ಕಡೆ ಸದಾ ಹರಿಸುವನು ಕಾಂತಿ
ಗತ ವಿಸ್ಮಯ ಸೊಬಗ ಮತಿಗೆ ಇಳಿಸುವನು ನೇಸರ
ಸಸ್ಯ ಶಾಮಲೆಗೆ ಕಾಂತಿ ಹೂಮಾಲೆ ತೊಡಿಸಿ ಸಂಭ್ರಮಿಸಿದ
ಲಾಸ್ಯ ಆಡಿ ಗಗನದಿ ಬಂಡಿ ಹೂಡುವನು ನೇಸರ
ಶಶಿ ಇರುಳ ಮರುಳು ಮಾಡಲು ರವಿಗಿಟ್ಟ ಬೇಡಿಕೆ
ಮಸಿ ಅಳಿಸಿ ಮುಸಿ ನಕ್ಕಿ ನೀರಿಳಿಸುವನು ನೇಸರ
ಗ್ರಹಣ ಛಾಯೇ ಮೂಡಿಪಲು ಕಾರ್ಗತ್ತಲಲಿ ಭುವಿ ಜನರು
ಮೆಲ್ಲ ಇಣುಕಿ ಮರೆಯಿಂದ ಮತ್ತೆ ಕುಣಿವನು ನೇಸರ
ಸುಕುಮಾರ