ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಮೈತ್ರಿ ನಮ್ಮದು
ಯಾವ ಜನ್ಮದ
ಮೈತ್ರಿ ನಮ್ಮದು
ನನ್ನ ನಿನ್ನ ಮಿಲನವು
ಯಾವ ಘಳಿಗೆಯ
ಚೆಲುವು ನೋಟವು
ನಮ್ಮ ಪ್ರೀತಿಯ ಮಾಟವು
ಯಾವ ಕ್ಷಣದ
ರವಿಯ ಕಿರಣವು
ಕಡಲ ತಾವರೆ ಅರಳಿತು
ಯಾವ ತೋಟದ
ಹೂವು ಪರಿಮಳ
ಸ್ನೇಹ ಜೇನು ಕಟ್ಟಿತು
ಯಾವ ಗಗನದ
ಚುಕ್ಕಿ ಬೆಳಕು
ಬೆಳಗು ತಂದಿತು ಬಾಳಲಿ
ಯಾವ ಕಾಡಿನ
ಪೊದರ ಹಕ್ಕಿಯ
ಮಧುರ ಇಂಚರ ಗಾನವು
ಯಾವ ಭಾವದ
ಒಲವ ಚಿಲುಮೆ
ಸ್ಫೂರ್ತಿ ಪ್ರೇಮ ಚಿಮ್ಮಿತು
ಯಾವ ಕಾವ್ಯದ
ಭಾಷೆ ನೀನು
ದೂರ ಪಯಣದ ಹೆಜ್ಜೆಯು
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಸುಂದರವಾದ ಭಾವ ಲಹರಿ ಸರ್
ಯಾವ ಜನ್ಮದ ಮೈತ್ರಿ ನಮ್ಮದು…
ಸುಂದರವಾದ ಸ್ನೇಹದ ಹರವನ್ನು ವ್ಯಕ್ತಪಡಿಸುವ ಕವನ….
ಸುಶಿ
ಅದ್ಭುತ ಭಾವ ಸುಂದರ ಕವನ ಸರ್
ಗೀತಾ
ಅರ್ಥಪೂರ್ಣ ಭಾವಗೀತೆ
ಅತೀ ಸುಂದರವಾದ ಕವನ
ವಿದ್ಯಾ ಗೋಕಾಕ
ಸುಂದರ ಭಾವದ ಅನಾವರಣ ಸರ್
ಡಾ ವೀಣಾ ಹೂಗಾರ
ಅತ್ಯಂತ ಸುಂದರ ಭಾವ ಪ್ರಜ್ಞೆ ತಮ್ಮ ಕವನದಲ್ಲಿ ಮೂಡಿ ಬಂದಿದೆ ಸರ್
ದೀಪಾ
Very beautiful ❤️ poem
Ashok Koganur
Amazing poem
Sanjay Halappanavar Ajeet
ಸುಂದರ ಕಾವ್ಯ ಸರ್
ಈರಮ್ಮ ಕುಂದಗೋಳ
ಹೊಸ ಭರವಸೆಯ ಬೆಳಕು ಚೆಲ್ಲಿದ ಕವನ ಚೆನ್ನಾಗಿದೆ ಸರ್
ಮಂದಾನಿಲವಾಗಿ ಬೀಸಿ ತಂಪನೀಯುವ ಪ್ರೀತಿ ಮೀಮಾಂಸೆಯು ಕವಿ ಮನದಾಳದಲ್ಲಿ ಗರಿ ಗೆದರಿ ಬಿಚ್ಚಿ ಸ್ವಚ್ಛಂದ ಬಂಧ ಈ.ಕವನದ ಆಶಯವಾಗಿದೆ ಸರ್
ತುಂಬಾ ಚೆಂದದ ಕವಿತೆ ಸರ್.
ರೋಜಾ ಧಾರವಾಡ
ಭಾವ ಲೋಕದಲ್ಲಿ
ಭಾವನೆಗಳ ಹಂಚಿಕೆ
ಭಾವ ಪರವಶ ದ
ಕವನ ಸರ್
ಪ್ರೊ ಲಕ್ಷ್ಮಿ ಕಾಯಕದ ಗದಗ
ಅರ್ಥ ಪೂರ್ಣ ಕವನ
ಮೀನಾಕ್ಷಿ ಪಾಟೀಲ
ಸ್ನೇಹ ಭಾವದ ಚೆಲುವಿಕೆ ಸುಂದರ ಕವನ
ಡಾ ಲಲಿತಾ ರಶ್ಮಿ
ಸುಂದರವಾದ ಸ್ನೇಹ ಭಾವ ತುಂಬಿದ ಕವನ ಸರ್
ಸುಂದರವಾದ ಸ್ನೇಹ ಭಾವ ತುಂಬಿದ ಕವನ ಸರ್
ಜಯಶ್ರೀ ಪಾಟೀಲ
ಸುಂದರ ಕಾವ್ಯ ಸರ್
ಶಾರದಾ
ಸೂಪರ್ ಕವನ ಕಾವ್ಯ ಸರ್
ಇವತ್ತಿನ ಕನ್ನಡ ಸಾಹಿತ್ಯದ ನವ್ಯ ಕಾವ್ಯದ ಗುಣ ಲಕ್ಷಣಗಳು ಕಾಣುತ್ತಿವೆ
ವಿಜಯಲಕ್ಷ್ಮಿ ಪಾಟೀಲ
ನಮ್ಮೆಲ್ಲರಿಗೂ ಕವನ ಕಾವ್ಯ ಕೂಟದ ತರಬೇತಿ ನೀಡಿ ಸಾಹಿತ್ಯ ರಚನೆಗೆ ನಿಮ್ಮ ಕೊಡುಗೆ ಅಪಾರ
ಜಯದೇವಿ ಬೀದರ
ಅದ್ಭುತ ಲೋಕದಲ್ಲಿ ಇಣುಕಿದಂತ ಭಾವಯಾಣ
ಜಯಶ್ರೀ ಭಂಡಾರಿ ಬಾದಾಮಿ
ಮೃದು ಮಧುರ ಮೈತ್ರಿಯಲ್ಲಿ ಮನದುಂಬಿ ಮೈ ಮರೆತ ಕವಿಮಿತ್ರ ಮನಸಿಗೆ ಶರಣು…..