ಮಾಯಾ ನಗರಿ ಮುಂಬೈನಲ್ಲಿ ಚಿಣ್ಣರ ಬಿಂಬದ ಕನ್ನಡದ ಕಹಳೆಮೊಳಗಿದ ಸವಿವರ ವರದಿ-ಲಲಿತಾ ಪ್ರಭು ಅಂಗಡಿ ಅವರಿಂದ

ಹೊರನಾಡ ಕನ್ನಡಿಗರ ವಿಶೇಷ

ಮಾಯಾ ನಗರಿ ಮುಂಬೈನಲ್ಲಿ

ಚಿಣ್ಣರ ಬಿಂಬದ ಕನ್ನಡದ ಕಹಳೆ

ಮೊಳಗಿದ ಸವಿವರ ವರದಿ-

ಲಲಿತಾ ಪ್ರಭು ಅಂಗಡಿ

ಬೆಳೆಯುವ ಸಿರಿ ಮೊಳಕೆಯಲಿ ನೋಡು ಎನ್ನುವಂತೆ,ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು,ಇಂತಹ ಮಕ್ಕಳ ಮನಸನು ಒಳ್ಳೆಯ ಕಾರ್ಯಚಟುವಟಿಕೆಯ ಮೂಲಕ ಉತ್ತೇಜನ ಕೊಟ್ಟರೆ ಸಮಾಜದಲಿ ಒಳ್ಳೆಯ ನಾಗರೀಕನಾಗಿ,ಮನೆ,ಶಾಲೆ ಸಮಾಜ,ದೇಶವನು ಬೆಳಗಬಲ್ಲ ಒಳ್ಳೆಯ ಪ್ರಜೆಯಾಗುವದರಲಿ ಎರಡು ಮಾತಿಲ್ಲ,ಅದಕಾಗಿ ಗುರು ಹಿರಿಯರು ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನದಿಂದ ಮುನ್ನುಗ್ಗಲು ಪ್ರೇರೆಪಣೆ ನೀಡಬೇಕು‌.
ಒಬ್ಬ ಇಂಜಿನೀಯರ್ ಸ್ಕೆಚ್ ಹಾಕಿದ ಕಟ್ಟಡ ಸರಿಯಾಗಿಲ್ಲವೆಂದರೆ,ಆಕಟ್ಟಡ ಬೀಳಿಸಿ ಬೇರೆಯದನು ಕಟ್ಟಿಸಬಹುದು, ಆದರ್ಶ ಗುರುಗಳು ಹೇಳಿದ ಒಳ್ಳೆಯ ಮಾರ್ಗದರ್ಶನಗುಣಗಳ ಜೀವನಪರ್ಯಂತ ಕೊನೆಯವರೆಗೂ ನೆನಪಿನಲಿ ಉಳಿಯುತ್ತವೆ,

ಇಂತಹ ಒಂದು ಆದರ್ಶದ ಮಾಧರಿಗೆ ಭದ್ರಭುನಾದಿಯ ಸಾಹಸಕೆ ಕೈ ಹಾಕಿದ ಮಹಾರಾಷ್ಟ್ರದಲಿ ಶ್ರೀ ಯುತ ಪ್ರಕಾಶ ಭಂಡಾರಿ ಹಿರಿಯ ಪೋಲೀಸ್ ಅಧಿಕಾರಿ ಇವರು ಕನ್ನಡದ ಉಳಿವು ಬೆಳಕನು ಮಕ್ಕಳ ಮೂಲಕ ಬಿತ್ತಿ ಬೆಳೆಯುವ ಅಮೋಘ ಅಪ್ರತಿಮ ಕಾರ್ಯವೆ ಸರಿ. 6ರಿಂದ14ವರ್ಷದ ಮರಾಠಿ ಇಂಗ್ಲೀಷ್ ಮಾದ್ಯಮದ ಮಕ್ಕಳಿಗೆ ಕನ್ನಡದ ದೀಕ್ಷೆ ಕೊಟ್ಟ ಕನ್ನಡದ ಅಕ್ಷರದ ದಾಸೋಹದ ರೂವಾರಿ.
ಪ್ರಕಾಶ ಭಂಡಾರಿಯವರು 2003ರಲಿ ಚಿಣ್ಣರ ಬಿಂಬವನು 50 ಮಕ್ಕಳಿಂದ ಆರಂಭಿಸಿದ್ದು ಇಂದು ಸುಮಾರು ಏಳುಸಾವಿರ ಮಕ್ಕಳವರೆಗೆ ದೊಡ್ಡ ಆಲದ ಮರವಾಗಿ ಬೆಳೆದಿದೆ ಎಂದರೆ,ಅವರಲ್ಲಿಯ ಕಾರ್ಯವೈಖರಿ,ಶ್ರಮ,ಶಿಸ್ತು,ಕಾಳಜಿ,ಶಿಕ್ಷಕರ ಶ್ರಮ,ಮಕ್ಕಳಲ್ಲಿಯ ಆಸಕ್ತಿ,ಪೋಷಕರ ಸಹಾಯ,ಆಡಳಿತ ಮಂಡಳಿಯ ಅಚ್ಚುಕಟ್ಟುತನ,ಜವಾ ಬ್ದಾರಿ,ಪರೀಶೀಲನೆ,ಸಮಯಪಾಲನೆ ಇವೆಲ್ಲವುಗಳ ನಿಭಾಯಿಸುವಿಕೆಯಿಂದ ,ಮುಂಬಯಿಯ ವಿವಿಧ ಶಾಖೆಗಳಲ್ಲಿ ಮಕ್ಕಳ ಚಟುವಟಿಕೆ ಬೆಳವಣಿಗೆ ಗಮನಿಸಿದರೆ ಆಶ್ಚರ್ಯವು ಹೌದು ಸತ್ಯವೂ ಹೌದು, ವ್ಯಕ್ತಿ ಮನಸ್ಸು ಮಾಡಿದರೆ ಏನೆಲ್ಲಾ ಸಾಧಿಸಬಹುದು ಎನ್ನುವುದಕ್ಕೆ ಶ್ರೀ ಪ್ರಕಾಶ್ ಭಂಡಾರಿಯವರು ಇಟ್ಟ ಹೆಜ್ಜೆ ಕನ್ನಡದ ಮೇಲಿನ ಅಭಿಮಾನ ಕಾಳಜಿ ,ಕನ್ನಡ ಉಳಿಸಿ ಬೆಳೆಸುವ, ಸಂಸ್ಕ್ರತಿ,ದೇಸಿಯತೆಯ ಬಗ್ಗೆ ಇರುವ ಅಪಾರ ಕಾಳಜಿ , ಶಿಸ್ತು ಬದ್ಧವಾಗಿ ಮಕ್ಕಳಿಗೆ ಸಮವಸ್ತ್ರ, ಹುಡುಗರಿಗೆ ಬಿಳಿ ಅಂಗಿ,ಲುಂಗಿ, ಹುಡುಗಿಯರಿಗೆ ಕೆಂಪುಲಂಗ ಹಳದಿ ಕುಪ್ಪಸ ,ಆ ಹಳದಿ ಬಿಳಿ ಕೆಂಪಿನ ನಂದನವನದಲಿ ಮಕ್ಕಳ ಭಜನೆ, ಹಾಡುಗಳು ಕೇಳಿದರಂತೂ ದೇವಲೋಕದಲ್ಲಿ ಇದ್ದ ಅನುಭವ ಅಷ್ಟೊಂದು ತಾಲೀಮಿನಲ್ಲಿ ಅವರನ್ನು ಹಾವ ಭಾವ,ರಾಗ,ಲಯ ಸ್ವರಕ್ಕೆ ತಕ್ಕಂತೆ ಅವರನ್ನು ಸಿದ್ಧಪಡಿಸಿದ ಸಂಗೀತ ಗುರುಗಳಿಗೆ ನಮೋ ನಮೋ ಹೇಳಲೇಬೇಕು
ಇಂತಹ ಮಕ್ಕಳ ಚಟುವಟಿಕೆಗಳ ನೋಡುವ ಅವಕಾಶ ದೊರೆತಿದ್ದು ನಿರ್ಣಾಯಕಳನ್ನಾಗಿ ನನ್ನನ್ನು ,ಡಾ, ಪೂರ್ಣಿಮಾ ಶೆಟ್ಟಿಯವರು ನನಗೆ ಅವಕಾಶ ಕಲ್ಪಿಸಿದ ಮರೆಯಲಾಗದ ಅನುಭವ, ಆ ಮಕ್ಕಳ ಪ್ರತಿಭೆಯನ್ನು ನೋಡುವ ಗುರುತಿಸುವ ಸುವರ್ಣ ಅವಕಾಶ ಅಂತಾನೆ ನಾಭಾವಿಸಿದ್ದು.

ಚಿಣ್ಣರ ಬಿಂಬದಲ್ಲಿ ಭಾಷೆಯ ಬಗ್ಗೆ ಇಟ್ಟಿರುವ ಅದಮ್ಯ ಗೌರವ,ಕನ್ನಡ ಭಾಷೆಯ ಕಲೆ, ಸಂಸ್ಕೃತಿ,ಪರಂಪರೆ ಇವುಗಳಿಗೆ ಒತ್ತು ಕೊಟ್ಟು ಸಾಹಿತ್ಯದ ವಿವಿಧ ಆಯಾಮಗಳ ಮುಖಾಂತರ,ನಾಟಕ, ಏಕಾಭಿನಯ ಪಾತ್ರ,ಭಾಷಣ,ಜಾನಪದ ಹಾಡು, ಕುಣಿತಗಳು, ಯಕ್ಷಗಾನ, ಭೂತಾರಾಧನೆ, ಗ್ರಾಮೀಣ ಕ್ರೀಡೆಗಳು, ಚಿತ್ರ ಬಿಡಿಸುವ, ರಂಗೋಲಿ ಸ್ಪರ್ಧೆಗಳು,
ಧಾರ್ಮಿಕ ವಿಧಿವಿಧಾನಗಳ ಅರಿವು ಮೂಡಿಸುವ ಶಿಕ್ಷಕರು ತರಬೇತಿ ಕೊಟ್ಟು ಅವರನ್ನು ತಯಾರಿಸುವಲ್ಲಿ ಅವರ ಶ್ರಮವಂತೂ ಮೆಚ್ಚುವಂಥದ್ದು, ಮಕ್ಕಳ ಪಾಲಕರು ಸಹ ಅವರನ್ನು ಹುರಿದುಂಬಿಸಿ ಪ್ರೋತ್ಸಾಹಿಸಿ ಅವರನ್ನು ಕರೆತಂದು ಅವರ ಚಟುವಟಿಕೆಗಳನ್ನು ಸವಿದು ಮನತುಂಬಿದ ಕ್ಷಣಗಳನು ನೋಡಿ ಹೌದಲ್ಲವಾ ಎಂತಹ ಸಂತೋಷದ ಸಾರ್ಥಕ ಕ್ಷಣಗಳು ಅಂತಾ ಅನಿಸಿತು, ಇದಲ್ಲದೆ ಪಾಲಕರಿಗೂ ಸಹ ದೇಶಭಕ್ತಿ ಗೀತೆಗಳ ಜಾನಪದ ಗೀತೆಗಳ ಸ್ಪರ್ಧೆ ಇಟ್ಟು ಅವರಿಗೂ ಸಹ ಅವಕಾಶ ಕಲ್ಪಿಸಿದ್ದು ಹೊಸತನದ ಆಕರ್ಷಣೆಯಾಗಿತ್ತು,
ಸಂಸ್ಕೃತಿ, ಸಂಸ್ಕಾರಗಳನ್ನು ಭಾಷೆಯ ಮುಖಾಂತರ ಕಲಿಸಿ ಭಾಷೆಗೆ ಗೌರವ ಕೊಟ್ಟು ಉಳಿಸಿಬೆಳೆಸಿ ಮುನ್ನಡೆಸುವ ಈ ಕಾರ್ಯ ಭಾರತದ ವಾಣಿಜ್ಯ ನಗರ ಮಾಯಾನಗರದ ಮುಂಬಯಿಯಲ್ಲಿ ಕನ್ನಡದ ಮೊಳಗು ಕೇಳುವ ಹೇಳುವ ಈ ಅವಕಾಶಕ್ಕೆ ಮುಖ್ಯ ಕಾರಣಕರ್ತರು ಶ್ರೀ ಪ್ರಕಾಶ್ ಭಂಡಾರಿ ಅವರ ನೇತ್ರತ್ವದಲ್ಲಿ,ಶ್ರೀ ವಿಜಯ ಶೆಟ್ಟಿ,ಶ್ರೀ ಸುರೇಂದ್ರ ಹೆಗಡೆಯವರ ಸಾರಥ್ಯದಲ್ಲಿ ನಡೆಯುವ ಈ ಚಿಣ್ಣರ ಬಿಂಬ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ,ಅವರ ದೀರ್ಘ ಶ್ರಮ,ಕಾಳಜಿ, ಅಭಿಮಾನಕ್ಕೆ ಸೆಲ್ಯೂಟ್ ಹೊಡೆಯಲಬೇಕು ,


ಮಕ್ಕಳ ಸೂಪ್ತ ಪ್ರತಿಭೆಯನ್ನು ಗುರುತಿಸಿ ಅವರ ವಿಕಾಸಕೆ ಮುಂದಿನ ಶ್ರೇಯೋಭಿವೃದ್ಧಿಗೆ ತಕ್ಕಂತೆ ಅವರನ್ನು ಆ ಕ್ಷೇತ್ರದಲ್ಲಿ ಪರಿಣತರನ್ನಾಗಿ ಮಾಡುವ ಈ ತರಬೇತಿಯ ಶಿಕ್ಷಕರ ಕಾರ್ಯ ಶ್ಲಾಘನೀಯವಾಗಿದೆ,
ಶಿಕ್ಷಕರಿಗೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಮಕ್ಕಳ ಪ್ರತಿಭೆಯನ್ನು ಅರಳಿಸುವ ವೇದಿಕೆಗೆ ಸಹಕಾರ ಸಹಾಯ ಮಾಡಿ ಸಲಹೆ ಸೂಚನೆಗಳಿಂದ ಮಕ್ಕಳ ಪ್ರತಿಭೆಯನ್ನು ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಇಂತಹ ಕನ್ನಡದ ಕೈಂಕರ್ಯದ ಕಾಯಕದ ದಾಸೋಹಿಗಳಿಗೆ ಶರಣು ಶರಣಾರ್ಥಿ,
ಇಂತಹ ಮಕ್ಕಳ ಸವಿನುಡಿಯ ಸಡಗರದ ಸಂಭ್ರಮಕೆ ನಿರ್ಣಯಕಳಾಗಿ ಎರಡನೆಯ ಅವಕಾಶ ಅನಿತಾ ಶೆಟ್ಟಿಯವರಿಂದ ಒದಗಿಬಂದಿತ್ತು.

ಇಂತಹ ಮಹಾನ್ ಕಾರ್ಯಕ್ಕೆ ಕೈ ಹಾಕಿ ಶ್ರೇಷ್ಠತೆಯನು ಮೆರೆದ ಚಿಣ್ಣರ ಬಿಂಬದ ಎಲ್ಲಾ ಪದಾಧಿಕಾರಿಗಳಿಗೆ ಶಿಕ್ಷಕರಿಗೆ ಅಭಿನಂದನೆಗಳು ಯಾಕೆಂದರೆ ಕರ್ನಾಟಕ ರಾಜ್ಯ ಸರ್ಕಾರದಿಂದ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆಗಿರುವುದು ಸ್ವಾಗತ ಸುಸ್ವಾಗತ,

ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಭಾಷೆಯ ಬಗ್ಗೆ ಇರುವ ಅಭಿಮಾನ ಗೌರವ.ಕನ್ನಡ ಭಾಷೆಯ ಬಳಸಿ ಬೆಳೆಸಿ ಉಳಿಸಿ ಕೊಳ್ಳುವ ಇಂತಹ ಮಕ್ಕಳ ಬಿಂಬ ಚಿಣ್ಣರ ಬಿಂಬ ಜಾಣರ ಬಿಂಬ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಅಲ್ಲವೆ.

ಚಿಣ್ಣರ ಬಿಂಬ ನೀವು
ಜಾಣರ ಜಾಣ ನೀವು
ಭವ್ಯ ಭಾರತದ ಭವಿಷ್ಯ ನೀವು
ಭದ್ರ ಭಾರತಕೆ ಬುನಾದಿ ನೀವು
ನಂದನವನದ ನಂದಾದೀಪ ನೀವು
ಭಾರತಾಂಬೆಯ ಮುಕುಟಕೆ ಚಿನ್ನದ ಗರಿ ನೀವು.

ಜೈ ಚಿಣ್ಣರ ಬಿಂಬ,ಜೈ ಕರ್ನಾಟಕ
ಜೈ ಮಹಾರಾಷ್ಟ್ರ.

ಪೋಟೋ ಆಲ್ಬಂ


ಲಲಿತಾ ಪ್ರಭು ಅಂಗಡಿ
ಅಂಧೇರಿ ಪೂರ್ವ
ಮುಂಬಯಿ.

ದಿನಾಂಕ:- ೦೧-೧೧-೨೩.

One thought on “ಮಾಯಾ ನಗರಿ ಮುಂಬೈನಲ್ಲಿ ಚಿಣ್ಣರ ಬಿಂಬದ ಕನ್ನಡದ ಕಹಳೆಮೊಳಗಿದ ಸವಿವರ ವರದಿ-ಲಲಿತಾ ಪ್ರಭು ಅಂಗಡಿ ಅವರಿಂದ


  1. ವ್ಹಾ ಒಳ್ಳೆಯ ಕಾರ್ಯ ಮಾಡುತ್ತಿರುವರು. ತಾವು ನಿರ್ಣಾಯಕವಾಗಿ ಸಂತೋಷ ಮೇಡಮ್


    ಅನ್ನಪೂರ್ಣ ಸಕ್ರೋಜಿ

Leave a Reply

Back To Top