ಕಾವ್ಯ ಸಂಗಾತಿ
ಮಹಾಂತೇಶ ಕಮತ
ಹಾರಿಸಿ ಕನ್ನಡದ ಬಾವುಟ
ಹಸನು ಗಾಳಿ, ಶುದ್ಧ ಕಾವೇರಿ ನೀರು
ಹಸಿರು ಗಿಡ ಮರದ ಉದ್ಯಾನ ನಗರು!!
ಮೈಸೂರು ಮಲ್ಲಿಗೆ, ಚಾಮುಂಡೇಶ್ವರಿ ದೇವಿ
ಶೃಂಗೇರಿ ಶಾರದಾಂಬೆ ನಮ್ಮ ಸರಸ್ವತಿ ತಾಯಿ!!
ಬದಾಮಿ, ಐಹೊಳೆ ಶಿಲ್ಪಕಲೆಯ ಬೀಡು
ನೋಡಲು ಸುಂದರ ಆಲಮಟ್ಟಿ ಡ್ಯಾಮು!!
ಏನು ತಂಪು ಕೂಡಲಸಂಗಮ ತಾಣ
ಬಲುಸುಂದರ ಗೋಳಗುಂಬಜ್, ಬಾರಾಕಮಾನ!!
ಓಬವ್ವನ ಇತಿಹಾಸ ದುರ್ಗದ ನಾಡಿನಲಿ
ಕಾಫಿಯ ಸವಿರುಚಿ ನಮ್ಮ ಮಂಗಳೂರಿನಲಿ!!
ಬತ್ತಕ್ಕೆ ಹಿಂದಿಲ್ಲ ನಮ್ಮಯ ರಾಯಚೂರು
ಬಾಗಲಕೋಟೆಯ ಜೋಳದ ರೊಟ್ಟಿ ನೀ ತಿಂದು ನೋಡು!!
ಓದಿದವರಿಗೆ ಗೊತ್ತು ಧಾರವಾಡದ ಗತ್ತು
ಕುಂದಾನಗರಿ ಯಾವತ್ತೂ ಕರ್ನಾಟಕದ ಸ್ವತ್ತು!!
ಕನ್ನಡ ಭಾಷೆಗೆ ಮೊದಲ ಆದ್ಯತೆ ಯಾವತ್ತೂ
ಆಗಲಿ ಕರ್ನಾಟಕದ ಕನ್ನಡವೇ ನಮ್ಮ ಸಂಪತ್ತು!!
ಹುಟ್ಟಿ ಬೆಳೆದ ನಮ್ಮ ಈ ಕನ್ನಡ ನಾಡಿನಲಿ
ಹಾರಿಸಿ ಕನ್ನಡದ ಬಾವುಟ ಆಕಾಶದೆತ್ತರದಲಿ!!
ಕನ್ನಡವೇ ನಮಗೆಲ್ಲ ತಾಯಿ ತಂದೆ
ಸದಾ ಬೆಳಗಲಿ ಜ್ಯೋತಿ ಕನ್ನಡಾಂಬೆಯ ಮುಂದೆ!!
ಮಹಾಂತೇಶ ಕಮತ