ಮಮತಾ ಕೆ.-ಕನ್ನಡದ ಉಳಿವಿಗೆ ಭಗೀರಥ ಪ್ರಯತ್ನ

ವಿಶೇಷ ಲೇಖನ

ಮಮತಾ ಕೆ.-

ಕನ್ನಡದ ಉಳಿವಿಗೆ ಭಗೀರಥ ಪ್ರಯತ್ನ

ಕರ್ನಾಟಕದಲ್ಲಿ ಕನ್ನಡವೇ ಉಸಿರು ಕನ್ನಡವೇ ಹಸಿರು.ಕರುನಾಡಿನ ನೆಲದ ಪ್ರೀತಿ,ಒಲುಮೆ ಆಪ್ತತೆ ಹೃದಯವನ್ನು ಅರಳಿಸುತ್ತದೆ.ಮನವನ್ನು ತಣಿಸುತ್ತದೆ.ಕವಿಪುಂಗವರು ಬರೆದು ರಚಿಸಿ ಹಾಡುಗಳು ಕನ್ನಡದ ನೆಲದ ಚೆಲುವನ್ನು ಇಮ್ಮಡಿಗೊಳಿಸಿದೆ.

ಕ್ರಿ ಶ .450 ಕ್ಕೆ ಸೇರಿದ ಹಲ್ಮಿಡಿ ಶಾಸನದಲ್ಲಿ ಕನ್ನಡದ ಪ್ರಾರಂಭಿಕ ರೂಪವು ದೊರೆತಿದೆ. ಕನ್ನಡ ಕೇವಲ ಭಾಷೆಯಲ್ಲ .ಅದು ತನ್ನದೇ ಆದ ಭವ್ಯ ಪರಂಪರೆಯನ್ನು ಹೊಂದಿದೆ .ಬ್ರಾಹ್ಮೀ ಲಿಪಿಯಿಂದ ರೂಪುಗೊಂಡ ಕನ್ನಡ ಲಿಪಿಯನ್ನು ಉಪಯೋಗಿಸಿ ಕನ್ನಡ ಭಾಷೆಯನ್ನು ಬರೆಯಲಾಗಿತ್ತು. ಕದಂಬರ ಆಳ್ವಿಕೆಯ ಕಾಲದಲ್ಲಿ ಕನ್ನಡದ ಮೊದಲ ದೊರೆಯೆಂದೇ ಖ್ಯಾತಿ ಪಡೆದ ಮಯೂರವರ್ಮನ ಆಳ್ವಿಕೆಯ ಕಾಲದಲ್ಲಿ ಕನ್ನಡ ತಲೆ ಎತ್ತಿ ನಿಂತಿತ್ತು.
ಕನ್ನಡ ಭಾಷೆ ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದು . ಪಂಚ ದ್ರಾವಿಡ ಭಾಷೆಗಳಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಮಾನ್ಯತೆ.ಶಾಲಾ ಶಿಕ್ಷಣ ಆರಂಭವಾಗಿ ಅದೆಷ್ಟೋ ವರುಷಗಳ ಹಿಂದೆ ಕನ್ನಡಕ್ಕೆ ರಾಜಮರ್ಯಾದೆ ಇತ್ತು.ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಜ್ಯೋತಿ ಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆಯವರು ಶಿಕ್ಷಣದ ಕ್ರಾಂತಿಗೆ ಟೊಂಕ ಕಟ್ಟಿ ನಿಂತವರು.ಕನ್ನಡವನ್ನು ಬೆಳೆಸಿದರು. ಕನ್ನಡದಲ್ಲಿ ಎಲ್ಲರಿಗೂ ಶಿಕ್ಷಣದ ಬಗ್ಗೆ ಪ್ರೇಮವನ್ನು ಬಿತ್ತಿದರು.ಆಗಿನ ಕಾಲದಲ್ಲಿ  ಬ್ರಿಟಿಷರು ಕನ್ನಡ ಕಲಿಸಲು ಉತ್ಸುಕರಾಗಿದ್ದರು.ಆದರೆ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷಿನ‌ ಭರಾಟೆ ಹೆಚ್ಚಾಗಿ ಕನ್ನಡ ಮೂಲೆಗುಂಪಾಗಿರುವುದನ್ನು ಕಾಣುತ್ತಿದ್ದೇವೆ.ಮನೆ ಮನಗಳಲ್ಲಿ ಹರಿದಾಡುತ್ತಿದ್ದ‌ ಅಪ್ಪ ಅಮ್ಮ ಎಂಬ ಎರಡಕ್ಷರವು ಮಮ್ಮಿ ಡ್ಯಾಡಿ ಆಯಿತು.ಕನ್ನಡದ ನೈಜತೆಯನ್ನು ಮತ್ತು ಆಪ್ತತೆಯನ್ನು ಕಳೆದುಕೊಂಡಿತು. ಇತ್ತೀಚಿನ ದಿನಗಳಲ್ಲಿ ಕನ್ನಡ ಮಾತನಾಡುವ ಜನರು ಕಡಿಮೆಯಾಗುತ್ತಿದ್ದಾರೆ.

ಆಯಾಯ ರಾಜ್ಯಗಳಲ್ಲಿ ಅದೇ ರಾಜ್ಯದ ಮಾತೃಭಾಷೆಯನ್ನು ಮೊದಲ ಐ ಬಲಭಾಷೆಯಾಗಿ ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಿಸಲಾಗುತ್ತದೆ ಆದರೆ ಕರ್ನಾಟಕದ ಕೆಲವು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್ ಮೊದಲ ಭಾಷೆಯಾಗಿ ಕನ್ನಡವನ್ನು ಎರಡನೇ ಭಾಷೆಯನ್ನಾಗಿ ಕಲಿಸಲಾಗುತ್ತಿದೆ .ಇದರಿಂದಾಗಿ ಕರ್ನಾಟಕದ ಕನ್ನಡ ಭಾಷೆಯನ್ನು ಉಳಿಸುವ ಬದಲು ಅಳಿಸುವ ಕೆಲಸವಾಗುತ್ತಿದೆ. ಕನ್ನಡ ರಾಜ್ಯೋತ್ಸವದ ದಿವಸ ಕನ್ನಡಕ್ಕಾಗಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅದೆಷ್ಟೋ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದರೆ ಅದು ಕನ್ನಡ ರಾಜ್ಯೋತ್ಸವದ ದಿನಕ್ಕೆ ಮಾತ್ರ ಸೀಮಿತವಾಗಿರುತ್ತದೆ .ಅದೆಷ್ಟು ಕನ್ನಡ ಶಾಲೆಗಳು ವಿದ್ಯಾರ್ಥಿಗಳಿಗೆ  ಕನ್ನಡ ಭಾಷೆಯನ್ನೇ ಕಲಿಸುತ್ತಿದ್ದು ಇದೀಗ ಕನ್ನಡ ಶಾಲೆ ಇಂಗ್ಲೀಷ್ ಶಾಲೆಯಾಗಿ ಪರಿವರ್ತಿತವಾಗುತ್ತಿದೆ ಇದು ಕನ್ನಡದ ಉಳಿವಿಗೆ ದೊಡ್ಡ ಸಂಕಟ ಬಂದೊದಗಿದಂತಾಗಿದೆ.

ಕನ್ನಡ ಕಲಿಯುವುದರಿಂದ ಮತ್ತು ಮಾತನಾಡುವುದರಿಂದಾಗಿ ಹೆಚ್ಚು ಜ್ಞಾನ ದೊರಕುತ್ತದೆ ಮತ್ತು ಬೇಗನೆ ಅರ್ಥವಾಗುತ್ತದೆ ಕನ್ನಡದ ಮಹತ್ವವನ್ನು  ತಿಳಿಸಬೇಕಾಗಿದೆ.  ಕನ್ನಡದ ಮೋಹವನ್ನು ಬೆಳೆಸಲು ಸಾಹಿತ್ಯ ,ಸಂಗೀತ ಕಲೆಯ ಬಗ್ಗೆ ಹೆಚ್ಚಿನ ಅರಿವನ್ನು ನೀಡಬೇಕಾಗಿದೆ ಕನ್ನಡದ ಮೇಲೆ ಗೌರವ ಹೆಮ್ಮೆ ಮತ್ತು ಪ್ರೀತಿಯನ್ನು ಮೂಡಿಸಬೇಕಾಗಿದೆ.
ಇತ್ತೀಚಿನ ದಿನಗಳಲ್ಲಿ ಇಂಜಿನಿಯರಿಂಗ್ ತಾಂತ್ರಿಕ ಮತ್ತು ಹಲವು ಉನ್ನತ ವ್ಯಾಸಂಗದಲ್ಲಿ ಕನ್ನಡವನ್ನು ಬಳಕೆ ಮಾಡಲಾಗುತ್ತಿದೆ ಆದರೆ ಪ್ರಾಥಮಿಕ ಶಾಲೆಯಲ್ಲಿ ಸರಿಯಾದ ಕನ್ನಡದ ಬಳಕೆ ಆಗದೆ ಇದ್ದರೆ ಉನ್ನತ ವ್ಯಾಸಂಗದಲ್ಲಿ ವ್ಯಾಸಂಗವನ್ನು ಪಡೆಯುವುದು ಕಷ್ಟ ಸಾಧ್ಯವಾಗಿದೆ .ಅದೇ ರೀತಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿಗದಿತ ಅಂಕಗಳನ್ನು ಗಳಿಸಲು ಕಷ್ಟ ಸಾಧ್ಯ.
ಇತ್ತೀಚಿನ  ದಿನಗಳಲ್ಲಿ ಮನೆಯಲ್ಲಿ ಕನ್ನಡ ಮನೆ ಭಾಷೆ ಮಾತೃಭಾಷೆಯಾಗಿದ್ದರೂ ಹೆತ್ತವರು ಮತ್ತು ಹಿರಿಯರು ಮಕ್ಕಳಿಗೆ ಇಂಗ್ಲೀಷ್  ಶಬ್ದಗಳನ್ನು ಬಳಕೆ ಮಾಡುತ್ತಿದ್ದು ಕನ್ನಡದ ಅಧಃಪತನಕ್ಕೆ  ಕಾರಣವಾಗಿದೆ. ಕನ್ನಡದ ಮೋಹವು ಕರಗಿ ಕಲ್ಲಾಗಿದೆ.ಕನ್ನಡದ ಅಕ್ಷರಗಳ ಉಚ್ಚಾರಣೆ ಸುಲಭವಾಗಿ ಮಾಡಲಾಗದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.ನಾಟಕ ,ಸಂಗೀತ ಕಲೆಗಳಲ್ಲಿ ಕಲಾವಿದರಾಗಲು ಕನ್ನಡವನ್ನು ಸ್ವಚ್ಛವಾಗಿ ಸುಂದರವಾಗಿ ಕಲಿಯಬೇಕಾಗಿದೆ.ವಿದ್ಯಾರ್ಥಿಗಳು ಹೆಚ್ಚಾಗಿ ಕನ್ನಡ ಪತ್ರಿಕೆಗಳನ್ನು ಹೆಚ್ಚು ಓದಬೇಕು.ಕತೆ, ಕವನ ,ಹಾಡುಗಳನ್ನು ಬರೆಯುವ
ಹವ್ಯಾಸವನ್ನು ಬೆಳೆಸಿಕೊಳ್ಳಬೇಕು.ಯಾವುದೇ ವಸ್ತು ವಿಷಯವನ್ನು  ವರ್ಣನಾತ್ಮಕ ವಾಗಿ ವರ್ಣಿಸಲು ಕನ್ನಡದ ಪದಗಳೇ ಚಂದ.
ಕವಿ ಕುವೆಂಪುರವರು ‘ಎಲ್ಲಾದರು‌ ಇರು ಎಂತಾದರು ಇರು ಎಂದೆಂದಿಗೂ ಕನ್ನಡವಾಗಿರು”.
ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಎಲ್ಲಾ ಸರ್ಕಾರಿ  ಇಲಾಖೆಗಳು ಮತ್ತು‌ಖಾಸಗಿ‌ ಸಂಸ್ದೆಗಳು ಕನ್ನಡವನ್ನು ಬಳಸುವಂತಾದರೆ‌ ಕನ್ನಡವನ್ನು ಉಳಿಸಿ‌ ಬೆಳೆಸಲು ಸಾಧ್ಯ.ಕರ್ನಾಟಕದ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಮಾತೃಭಾಷೆಯ ಬದಲಾಗಿ ಆಂಗ್ಲಭಾಷೆಯನ್ನು ಬಳಸಲಾಗುತ್ತಿದೆ.ಇದರಿಂದಾಗಿ ಕನ್ನಡದ ಅಸ್ಮಿತೆಯನ್ನು ಕಳೆದುಕೊಳ್ಳುತ್ತಿದೆ.ಮಾತೃಭಾಷೆ ನಮ್ಮೆಲ್ಲರ ಹೃದಯದ ಭಾಷೆ.ಹಲವಾರು ಕವಿಗಳು ಕನ್ನಡದ ನೆಲ ,ಜಲ ,ಮಣ್ಣಿನ ಬಗ್ಗೆ‌ ಅದ್ಭುತವಾದ ಸಾಲುಗಳಿಂದ ವರ್ಣಿಸಿದ್ದಾರೆ.ಅದೇ ರೀತಿ ಪ್ರಸ್ತುತ‌ ಯುವಜನಾಂಗವು ಕನ್ನಡ ಸಾಹಿತ್ಯದ ಬಗ್ಗೆ ಒಲವನ್ನು ಬೆಳೆಸಿಕೊಂಡು ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಬೇಕು.ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಸ್ವಾಭಿಮಾನಿಗಳಾಗಬೇಕು.
ಮೊಬೈಲ್ ಹಾವಳಿಯಿಂದಾಗಿ ಎಲ್ಲವೂ ಕನ್ನಡದ ಬಳಕೆಯ  ಅರ್ಥವನ್ನು ಕಳೆದುಕೊಳ್ಳುತ್ತಿದೆ. ಕೆಲವು ಶಬ್ಧಗಳು ಕನ್ನಡ ಬಳಸಿದರೆ‌ ಇನ್ನು ಕೆಲವು ಶಬ್ದಗಳನ್ನು ಇಂಗ್ಲೀಷ್ ಬಳಕೆ‌ ಮಾಡಲಾಗುತ್ತಿದೆ.ಕನ್ನಡದ ಅಂದವನ್ನು ಕೆಡಿಸಲಾಗುತ್ತಿದೆ.
ಕನ್ನಡ ಪರ ಸಂಘಟನೆಗಳು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಮಾತ್ರ ಕನ್ನಡದ ಉಳಿವಿಗೆ ಘೋಷಣೆಗಳನ್ನು ಕೂಗುತ್ತಾರೆ. ಇದರಿಂದಾಗಿ ಕನ್ನಡದ ಉಳಿವು ಸಾಧ್ಯವಾಗುವುದಿಲ್ಲ. ನಿರಂತರವಾಗಿ ಪ್ರಯತ್ನ ಪ್ರಯತ್ನಪಡಬೇಕಾಗುತ್ತದೆ ಕನ್ನಡವನ್ನು ಉಳಿಸಿ ಬೆಳೆಸಲು ಅಭಿವೃದ್ಧಿಪಡಿಸಲು ತಪಸ್ಸು ಮಾಡಬೇಕು.
ಈ  ಪ್ರಚಂಡ  ಭಾರತದಲ್ಲಿದ್ದುಕೊಂಡು ಕರ್ನಾಟಕದಲ್ಲಿ ಕನ್ನಡದ ಉಳಿವಿಗೆ ಭಗೀರಥ ಪ್ರಯತ್ನವನ್ನು ಮಾಡೋಣ.


ಮಮತಾ ಕೆ.

One thought on “ಮಮತಾ ಕೆ.-ಕನ್ನಡದ ಉಳಿವಿಗೆ ಭಗೀರಥ ಪ್ರಯತ್ನ

  1. ಕನ್ನಡ ನಾಡು -ನುಡಿಯನ್ನು ಉಳಿಸಿ, ಬೆಳೆಸುವ ಕುರಿತಾದ ಒಂದು ಉತ್ತಮ ಲೇಖನ

Leave a Reply

Back To Top